ಮಡಿಕೇರಿ: ಮನೆಗೆ ತೆರಳುತ್ತಿದ್ದ ಬಾಲಕಿಯನ್ನು ಹಿಡಿದು ಎಳೆದಾಡಿ ಮಾನಭಂಗಕ್ಕೆ ಯತ್ನಿಸಿದ ಯುವಕನನ್ನು ಪೊಲೀಸರು ಬಂಧಿಸಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಯುವಕ ಬಂಧಿತ ಆರೋಪಿ. ಮನೆಗೆ ಹೋಗುತ್ತಿದ್ದ ಬಾಲಕಿಯನ್ನು ಆರೋಪಿ ಹಿಡಿದು ಎಳೆದಾಡಿದ್ದಾನೆ. ಈ ವೇಳೆ ಬಾಲಕಿ ಚೀರಾಡಿದ್ದು ಕೇಳಿಸಿ ಜನರು ಹೊರ ಬಂದಿದ್ದರಿಂದ ಕಾಮುಕ ಸುಮ್ಮನಾಗಿದ್ದಾನೆ. ತಕ್ಷಣವೇ ಪೋಷಕರು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬಾಲಕಿಯನ್ನು ಹಿಡಿದು ಎಳೆದಾಡಿದ ವಿಷಯ ಗೊತ್ತಾಗುತ್ತಿದ್ದಂತೆ ಕೆಲ ಯುವಕರು ಆರೋಪಿಗೆ ಚೆನ್ನಾಗಿ ಥಳಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಆರೋಪಿ ಆ ಯುವಕರ ವಿರುದ್ಧವೂ ಪ್ರತಿದೂರು ನೀಡಿದ್ದಾನೆ. ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಅಲ್ಲದೆ ಆರೋಪಿ ನೀಡಿದ ಪ್ರತಿ ದೂರು ಆಧರಿಸಿ ಹಲ್ಲೆ ನಡೆಸಿದ ಜಾಬೀರ್, ಬಶೀರ್ ಮತ್ತು ನಜೀಬ್ ಈ ಮೂವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.