ಮಡಿಕೇರಿ: ಕೊಡಗು ಅಂದ್ರೆ ವಿಶಿಷ್ಟ ಸಂಸ್ಕೃತಿ ಆಚಾರ ವಿಚಾಗಳಂತೆ ವಿಭಿನ್ನ ಆಹಾರ ಪದ್ಧತಿಯೂ ಎಲ್ಲರ ಗಮನ ಸೆಳೆಯುತ್ತದೆ. ಒಂದೊಂದು ಕಾಲಕ್ಕೂ ಒಂದೊಂದು ರುಚಿ ರುಚಿಯಾದ ಅಡುಗೆ ಮಾಡಿ ಬಾಯಚಪ್ಪರಿಸಿ ತಿನ್ನೋ ಕೊಡಗಿನ ಜನರ ಫುಡ್ ವೆರೈಟಿ ನಿಜಕ್ಕೂ ವಾವ್ ಅನಿಸುತ್ತದೆ. ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ನಾಪೋಕ್ಲು ಗ್ರಾಮದಲ್ಲಿ ನಡೆದ ಕೊಡವರ ಕಕ್ಕಡ 18 ತಿನ್ನಿ ನಮ್ಮೆ ಪ್ರಯುಕ್ತ ನಡೆದ ಆಹಾರಮೇಳ ಎಲ್ಲರನ್ನು ಗಮನ ಸೆಳೆಯಿತು.
ಆಧುನಿಕತೆಯ ಭರಾಟೆಯಲ್ಲಿ ಕೊಡಗಿನ ಪಾರಂಪರಿಕ ಆಹಾರ ಪದ್ಧತಿ ಮರೆಯಾಗುತ್ತಿದ್ದು, ಯುವ ಪೀಳಿಗೆಗೆ ಪರಿಚಯಿಸಲೆಂದು ನಾಪೋಕ್ಲು ಕೊಡವ ಸಮಾಜ ಈ ಕಕ್ಕಡ 18 ತಿನ್ನಿ ನಮ್ಮೆ ಆಯೋಜಿಸಿತ್ತು. ಇದೇ ಮೊದಲ ವರ್ಷ ನಾಪೋಕ್ಲು ಕೊಡವ ಸಮಾಜ ಕಟ್ಟಡದಲ್ಲಿ ಕಕ್ಕಡ 18 ತಿನ್ನಿ ನಮ್ಮೆಯಲ್ಲಿ ಜಿಲ್ಲೆಯ ಮೂಲೆ ಮೂಲೆಗಳಿಂದ ಬಂದ ಜನರು ಭಾಗಿಯಾಗಿದ್ದರು. ಒಂದೊಂದು ಕುಟುಂಬವೂ ತಮ್ಮ ತಮ್ಮ ಪಾರಂಪರಿಕವಾದ ಒಂದೊಂದು ಆಹಾರವನ್ನು ತಯಾರಿಸಿ ತಂದು ಪ್ರದರ್ಶನ ಮಾಡುತ್ತಾರೆ. ಇರೋದ್ರಿಂದ ಅಪರೂಪಕ್ಕೆ ಸಿಗೋ ಬಗೆ ಬಗೆಯ ತಿನಿಸುಗಳನ್ನ ಸವಿದು ಎಲ್ಲರೂ ಎಂಜಾಯ್ ಮಾಡುತ್ತಾರೆ.
Advertisement
Advertisement
ವಿಶೇಷವಾಗಿ ಜಿಲ್ಲೆಯಲ್ಲಿ ತಿಂಗಳುಗಟ್ಟಲೆ ಸುರಿಯೋ ಮಳೆಯ ನಡುವೆಯೇ ಕೃಷಿ ಚಟುವಟಿಕೆಯಲ್ಲಿ ಪಾಲ್ಗೊಂಡು ಬಳಲಿರೋ ಜನರು ಒಂದೆಡೆ ಸೇರಿ ಎಂಜಾಯ್ ಮಾಡುತ್ತಾರೆ. ಆಶಾಢ ಮಾಸದಲ್ಲಿ 18 ಗಿಡಮೂಲಿಕೆಗಳಿಂದ ತುಂಬಿರೋ ಆಟಿಸೊಪ್ಪಿನ ಅಕ್ಕಿಪಾಯಸ ಸವಿದು ಇನ್ನೂ ಅಬ್ಬರಿಸೋ ಮಳೆಯಲ್ಲಿ ಯಾವುದೇ ಕಾಯಿಲೆ ಬರದಂತೆ ರಕ್ಷಣೆ ಪಡೆಯುತ್ತಾರೆ.
Advertisement