ಮಡಿಕೇರಿ: ಕೊರೊನಾ ಮಹಾಮಾರಿಯನ್ನು ನಿಯಂತ್ರಿಸಲು ಸರ್ಕಾರಗಳು ಸರ್ವ ಪ್ರಯತ್ನ ನಡೆಸುತ್ತಿವೆ. ಅದಕ್ಕೆ ಸಾಕಷ್ಟು ಸಂಘ ಸಂಸ್ಥೆಗಳು, ಉದ್ಯಮಿಗಳು ಹಾಗೇ ವೈಯಕ್ತಿಕವಾಗಿ ಕೆಲವರು ತಮ್ಮ ಕೈಲಾದ ಸಹಕಾರ, ಸಹಾಯಗಳನ್ನು ಮಾಡುತ್ತಿದ್ದಾರೆ. ಹಾಗೆಯೇ ಕೇಂದ್ರ ಸಚಿವ ಸದಾನಂದಗೌಡ ಅವರ ಸದಾಸ್ಮಿತಾ ಫೌಂಡೇಷನ್ ನಿಂದ ಕೊಡಗಿನ ಜಿಲ್ಲಾಸ್ಪತ್ರೆಗೆ 5 ಲಕ್ಷ ರೂ. ಮೌಲ್ಯದ ಮೆಡಿಕಲ್ ಕಿಟ್ ಗಳನ್ನು ವಿತರಣೆ ಮಾಡಲಾಯಿತು.
ಫೌಂಡೇಷನ್ ಪರವಾಗಿ ಕೊಡಗಿನ ವಿರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ಅವರು ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಮೆಡಿಕಲ್ ಕಾಲೇಜು ಡೀನ್ ಕಾರ್ಯಪ್ಪ ಅವರಿಗೆ ಹಸ್ತಾಂತರಿಸಿದ್ರು. ಜಿಲ್ಲಾಸ್ಪತ್ರೆ ಈಗ ಸಂಪೂರ್ಣ ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಯಾಗಿದೆ. ಹೀಗಾಗಿ ಅಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರ ವೈಯಕ್ತಿಕ ರಕ್ಷಣೆಗೆ ಬೇಕಾಗಿರುವ 40 ಪಿಪಿಇ ಕಿಟ್, 200 ಎನ್95 ಮಾಸ್ಕ್ ಮತ್ತು 200 ಬಾಟಲ್ ಸ್ಯಾನಿಟೈಸರ್ ವಿತರಣೆ ಮಾಡಿದ್ರು.
ಒಟ್ಟು ಐದು ಲಕ್ಷ ರೂಪಾಯಿ ಮೌಲ್ಯದ ಮೆಡಿಕಲ್ ಕಿಟ್ ಕೊಡುವ ಮೂಲಕ ವೈದ್ಯರು ಮತ್ತು ಸರ್ಕಾರಕ್ಕೆ ಕೇಂದ್ರ ಸಚಿವ ಸದಾನಂದಗೌಡ ಅವರು ನೆರವಾಗಿದ್ದಾರೆ.