ಮಡಿಕೇರಿ: ಕೊರೊನಾ ಮಹಾಮಾರಿ ಪಾಸಿಟಿವ್ ಏರಿಳಿತದ ನಡುವೆ ಕೊಡಗು ಜಿಲ್ಲೆಯಲ್ಲಿ ಇದೀಗ ಇಲಿ ಜ್ವರವೂ ಕಾಣಿಸಿಕೊಂಡು ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಟಿಸಿದೆ. ಜಿಲ್ಲೆಯಲ್ಲಿ 14 ಇಲಿಜ್ವರ ಪ್ರಕರಣಗಳು ವರದಿಯಾಗಿವೆ. ಅಲ್ಲದೆ 22 ಡೆಂಗ್ಯೂ ಪ್ರಕರಣ, 2 ಚಿಕೂನ್ ಗುನ್ಯ ಪ್ರಕರಣಗಳೂ ಪತ್ತೆಯಾಗಿವೆ.
Advertisement
ಜಿಲ್ಲೆಯ ಗಡಿಭಾಗಗಳಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದರೂ, ಜಿಲ್ಲೆಯ ಮೂರು ತಾಲೂಕುಗಳಲ್ಲೂ ಇಲಿಜ್ವರ, ಡೆಂಗೆ, ಚಿಕೂನ್‍ಗುನ್ಯ ಪ್ರಕರಣಗಳು ಕಂಡು ಬರುತ್ತಿದೆ. ಇಲಿ ಜ್ವರ ಸಂಬಂಧಿಸಿದಂತೆ ಮಡಿಕೇರಿ ತಾಲೂಕಿನಲ್ಲಿ 4 ಸೋಮವಾರ 5 ವಿರಾಜಪೇಟೆ 5 ಪ್ರಕರಣಗಳು ಪತ್ತೆಯಾಗಿದೆ. ರೋಗ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮ ಈಗಾಗಲೇ ಅರೋಗ್ಯ ಇಲಾಖೆ ತೆಗೆದ ಕೊಂಡು ಮನೆಯ ಸುತ್ತಮುತ್ತಲಿನ ಆವರಣವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೂಚಿಸಿದೆ. ಇದನ್ನೂ ಓದಿ: ಚಪ್ಪಲಿಯೊಳಗೆ ಬ್ಲ್ಯೂಟೂತ್, ಮೊಬೈಲ್ -ಪರೀಕ್ಷೆಗೆ ಬಂದ ಐವರ ಬಂಧನ
Advertisement
Advertisement
ವೈಜ್ಞಾನಿಕವಾಗಿ ಆಪೊಸ್ಟೆರೋಸಿಸ್ (Aposterosis ) ಎಂದು ಕರೆಸಿಕೊಳ್ಳುವ ಈ ಇಲಿಜ್ವರ ಬರುವುದು ಲೆಪ್ಪೋರ (lepra bacteria) ಎಂಬ ಬ್ಯಾಕ್ಟಿರಿಯಾ ರೋಗಾಣುಗಳಿಂದ ಪ್ರಾಣಿಗಳಿ0ದ ಮಾನಮಗೆ ಹರಡುವ ರೋಗಗಳಲ್ಲಿ ಇದು ಒಂದು. ಈ ರೋಗ ಕೇವಲ ಮನುಷ್ಯರಲ್ಲದೇ ದನ, ಎಮ್ಮೆ, ಕುರಿ, ಮೇಕೆ, ಹಂದಿ, ನಾಯಿ, ಬೆಕ್ಕು ಸೇರಿದಂತೆ ವನ್ಯಮೃಗ ಗಳು ಹೀಗೆ ಬಹುತೇಕ ಪ್ರಾಣಿಗಳನ್ನು ಬಾಧಿಸುತ್ತದೆ ಎಂದು ಜಿಲ್ಲಾ ಆರೋಗ್ಯ ಕಲ್ಯಾಣಾಧಿಕಾರಿ ಡಾ. ವೆಂಕಟೇಶ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಗೋಕರ್ಣದಲ್ಲಿ ಸಮುದ್ರದ ಪಾಲಾಗುತಿದ್ದ ಪ್ರವಾಸಿಗನ ರಕ್ಷಣೆ