ಮಡಿಕೇರಿ: ರಸ್ತೆಯಲ್ಲಿ ಸಂಚರಿಸುವಾಗ ಮಾರ್ಗ ಮಧ್ಯದಲ್ಲಿ ಕಾಡಾನೆ ನೋಡಿ ಗಾಬರಿಗೊಂಡು, ಚಾಲಕ ಕಾರನ್ನು ಮರಕ್ಕೆ ಡಿಕ್ಕಿ ಹೊಡೆಸಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಹುಂಡಿ ಗ್ರಾಮದಲ್ಲಿ ನಡೆದಿದೆ.
ಇಂದು ಬೆಳಗ್ಗೆ ಖಾಸಗಿ ಬ್ಯಾಂಕ್ ವ್ಯವಸ್ಥಾಪಕರೊಬ್ಬರು ಕಾರಿನಲ್ಲಿ ಪಾಲಿಬೆಟ್ಟದಿಂದ ಸಿದ್ದಾಪುರದತ್ತ ಬರುತ್ತಿದ್ದರು. ಈ ವೇಳೆ ಹುಂಡಿ ಎಂಬಲ್ಲಿ ದಿಢೀರಾಗಿ ಕಾಡಾನೆ ಎದುರಾಗಿದೆ. ಕಾಡಾನೆಯನ್ನು ನೋಡಿದ ತಕ್ಷಣ ಗಾಬರಿಗೊಂಡ ಅವರು ಕಾರಿನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ತೋಟದೊಳಗೆ ಕಾರನ್ನು ನುಗ್ಗಿಸಿದ್ದಾರೆ. ಇದರ ಪರಿಣಾಮ ಕಾರು ಆಲದ ಮರಕ್ಕೆ ಡಿಕ್ಕಿಯಾಗಿದೆ. ಇದನ್ನೂ ಓದಿ:ಫಾಲ್ಸ್‌ಗೆ ಬಿದ್ದು ಇಬ್ಬರು ಯುವಕರು ಸಾವು – ಶವ ಎತ್ತಿದ ಪಿಎಸ್‍ಐ
Advertisement
ಕಾರು ಡಿಕ್ಕಿಯಾದ ರಭಸಕ್ಕೆ ಮರ ಎರಡು ಸೀಳಾಗಿದೆ. ಅದೃಷ್ಟವಶಾತ್ ಕಾರಿನ ಏರ್ ಬ್ಯಾಗ್ ತೆರೆದುಕೊಂಡಿದ್ದರಿಂದ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮರಕ್ಕೆ ಕಾರು ಅಪ್ಪಳಿಸಿದಾಗ ಉಂಟಾದ ಶಬ್ಧಕ್ಕೆ ಬೆದರಿದ ಕಾಡಾನೆ ಅಲ್ಲಿಂದ ಕಾಲ್ಕಿತ್ತಿದೆ. ಬಳಿಕ ಟ್ರ್ಯಾಕ್ಟರ್ ಸಹಾಯದಿಂದ ಕಾರನ್ನು ತೋಟದೊಳಗಿನಿಂದ ಹೊರಕ್ಕೆ ತರಲಾಗಿದ್ದು, ಸಿದ್ದಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ:21 ಕೆಜಿಯ ಲಡ್ಡು 18.90 ಲಕ್ಷಕ್ಕೆ ಹರಾಜಾಯ್ತು!