ಮಡಿಕೇರಿ: ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಕರಿಕೆ ಸಮೀಪದ ಆಲತ್ತಿಕಾಡವಿನ ಸೇತುವೆ ಶಿಥಿಲಗೊಂಡಿದ್ದು, ಈಗಲೋ ಆಗಲೋ ಬೀಳುವಂತಿದೆ.
ಚಂದ್ರಗಿರಿ ನದಿಯನ್ನು ಈ ತೂಗು ಸೇತುವೆ ಮೂಲಕ ದಾಟಬೇಕಂದರೆ ದೊಡ್ಡ ರೀತಿಯ ಸಾಹಸವನ್ನೇ ಮಾಡಬೇಕು. ಈ ತೂಗು ಸೇತುವೆ ಈಗಲೂ ಆಗಲೂ ಬೀಳುವ ಸ್ಥಿತಿಯಲ್ಲಿದೆ. ಆದರೆ ದಿನನಿತ್ಯ ವಿದ್ಯಾರ್ಥಿಗಳು ಶಾಲೆಗೆ ಹೋಗಬೇಕು ಅಂದರೆ ಇದೇ ತೂಗುಯ್ಯಲೆಯಲ್ಲೇ ತೇಲಾಡುತ್ತಾ, ತೆವಳುತ್ತಾ ಹೋಗಬೇಕು.
Advertisement
Advertisement
ನದಿಯ ಹಿಂಭಾಗದಲ್ಲಿ ಆಲತ್ತಿಕಾಡವು, ದೊಡ್ಡಚೇರಿ ಎಂಬ ಕುಗ್ರಾಮಗಳಿದ್ದು, ಇಲ್ಲಿ 60ಕ್ಕೂ ಹೆಚ್ಚು ಕುಟುಂಬಗಳಿವೆ. ದಿನನಿತ್ಯ 1 ನೇ ತರಗತಿಯಿಂದ 7 ನೇ ತರಗತಿವರೆಗಿನ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಸೇತುವೆಯಲ್ಲಿ ಜೀವವನ್ನ ಕೈಯಲ್ಲಿ ಹಿಡಿದುಕೊಂಡು ಶಾಲೆಗೆ ತೆರಳುತ್ತಾರೆ. ಕೆಲವೊಮ್ಮೆ ಕಾಲು ಜಾರಿ ಬಿದ್ದು ಕೆಲ ವಿದ್ಯಾರ್ಥಿಗಳು ನೀರಿಗೆ ಬಿದ್ದು ಅದೃಷ್ಟವಶಾತ್ ಬದುಕಿ ಬಂದಿರೋ ಅನೇಕ ನಿದರ್ಶನಗಳಿವೆ. ಆದರೂ ವಿಧಿಯಿಲ್ಲ. ವಿದ್ಯಾರ್ಥಿಗಳು, ಗ್ರಾಮಸ್ಥರು ಇದೇ ಸೇತುವೆಯಲ್ಲಿ ದಿನನಿತ್ಯ ಸರ್ಕಸ್ ಮಾಡಬೇಕು.
Advertisement
ನದಿಯ ಆ ಬದಿಯಿಂದ ಈ ಬದಿಗೆ ಬರಲು ಬಿದಿರಿನಿಂದ ತೂಗು ಸೇತುವೆ ನಿರ್ಮಿಸಲಾಗಿದೆ. ಕಳೆದ ಮೂರು ದಶಕಗಳಿಂದ ಇದನ್ನು ಹಾಗೆಯೇ ಅಪಾಯ ತಂದೊಡ್ಡುವ ಈ ತೂಗುಸೇತುವೆಯನ್ನ ಪ್ರತಿ ವರ್ಷ ಪಂಚಾಯ್ತಿ ವತಿಯಿಂದ ನಾಮಕಾವಸ್ತೆಯಾಗಿ ದುರಸ್ತಿ ಮಾಡಲಾಗುತ್ತೆದೆ ಹೊರತು ಶಾಶ್ವತ ಪರಿಹಾರ ಮಾಡಿಲ್ಲ. ಪರಿಣಾಮ ಈ ಮುರಿದ ತೂಗು ಸೇತುವೆಯಲ್ಲೇ ವಿದ್ಯಾರ್ಥಿಗಳು ಸರ್ಕಸ್ ಮಾಡುತ್ತ ಶಾಲೆಗೆ ಹೋಗ ಬೇಕಾದ ಅನಿವಾರ್ಯತೆ ಎದುರಾಗಿದೆ.
Advertisement
ದುರಸ್ತಿ ಮಾಡಿದ ಗುತ್ತಿಗೆದಾರನಿಗೆ ತುಂಬಾ ತಡವಾಗಿ ಬಿಲ್ ಆಗುತ್ತೆ ಅನ್ನೋ ಕಾರಣಕ್ಕೆ ಈ ಬಾರಿ ಯಾರೂ ಕೂಡಾ ಸೇತುವೆಯ ದುರಸ್ತಿಗೇ ಮುಂದಾಗಿಲ್ಲ. ಜನಪ್ರತಿನಿಧಿಗಳು ಇತ್ತ ಗಮನಹರಿಸಿ ನಮ್ಮ ಸಮಸ್ಯೆ ಬಗೆಹರಿಸಿ ಅಂತ ಗ್ರಾಮದ ಜನರು ಹಾಗೂ ವಿದ್ಯಾರ್ಥಿಗಳು ಮನವಿ ಮಾಡಿಕೊಂಡಿದ್ದಾರೆ.
ಭಾಗಮಂಡಲದಿಂದ ಸುಮಾರು 25 ಕಿ.ಮೀ ದೂರವಿರುವ ಈ ಕುಗ್ರಾಮಗಳು ಭೌಗೋಳಿಕವಾಗಿ ಮಡಿಕೇರಿ ತಾಲೂಕಿಗೆ ಸೇರಿದರೂ ಕ್ಷೇತ್ರ ವಿಂಗಡನೆಯಿಂದಾಗಿ ಇಲ್ಲಿಯ ಜನರು ವಿರಾಜಪೇಟೆ ಶಾಸಕರನ್ನ ಚುನಾಯಿಸಬೇಕಾಗಿದೆ. ಈ ಊರು ಭೌಗೋಳಿಕವಾಗಿ ಮಡಿಕೇರಿ ತಾಲೂಕಿಗೆ ಸೇರಿದರೂ ಕ್ಷೇತ್ರ ವಿಂಗಡನೆಯಿಂದಾಗಿ ಇಲ್ಲಿಯ ಜನರು ವಿರಾಜಪೇಟೆ ಶಾಸಕರನ್ನ ಚುನಾಯಿಸಬೇಕಾಗಿದೆ. ಹೀಗಾಗಿ ಇಲ್ಲಿಯವರು ಶಾಸಕ ಕೆ.ಜಿ ಬೋಪಯ್ಯ ಅವರ ಕೃಪೆಗೆ ತುತ್ತಾಗಿದ್ದಾರೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.