ಭೋಪಾಲ್: ವ್ಯಕ್ತಿಯೊಬ್ಬ ತನ್ನ 7 ವರ್ಷದ ಮಗನನ್ನೇ ಕತ್ತು ಹಿಸುಕಿ ಕೊಲೆಗೈದ ಘಟನೆ ಮಧ್ಯಪ್ರದೇಶ (Madhyapradesh) ದ ಇಂದೋರ್ ನಲ್ಲಿ ನಡೆದಿದೆ.
ಪ್ರತೀಕ್ ಕೊಲೆಯಾದ ದುರ್ದೈವಿಯಾಗಿದ್ದು, ಈತ 3ನೇ ಕ್ಲಾಸಿನಲ್ಲಿ ಓದುತ್ತಿದ್ದ. ಪ್ರತೀಕ್ ಪ್ರತಿನಿತ್ಯ ತನ್ನ ಅಜ್ಜಿ ಜೊತೆನೇ ಮಲಗುತ್ತಿದ್ದ. ಆದರೆ ಭಾನುವಾರ ಆರೋಪಿ ತಂದೆ ಶಶಿಪಾಲ್, ಕೂಲರ್ ಹಾಕಿದ್ದೀನಿ. ಇವತ್ತು ತನ್ನ ಜೊತೆ ಮಲಗುವಂತೆ ಒತ್ತಾಯಿಸಿದ್ದ. ಕೂಲರ್ ಇದೆ ಅಂದತಕ್ಷಣ ಬಾಲಕ, ಅಜ್ಜಿ ಜೊತೆ ತಾನು ಇಂದು ತಂದೆ ಜೊತೆ ಮಲಗುವುದಾಗಿ ಹೇಳಿದ್ದಾನೆ. ಅಂತೆಯೇ ಪ್ರತೀಕ್ ತಂದೆ ಜೊತೆ ಕೋಣೆಯಲ್ಲಿ ಮಲಗಿದ್ದನು.
Advertisement
ಇತ್ತ ಮಗ ನಿದ್ದೆಗೆ ಜಾರುತ್ತಿದ್ದಂತೆಯೇ ಶಶಿಪಾಲ್ ಟಿವಿ ವಾಲ್ಯೂಮ್ ಜಾಸ್ತಿ ಮಾಡಿದ್ದಾನೆ. ನಂತರ ಮಗನನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಅಲ್ಲದೆ ಇದೇ ವೇಳೆ ಪತ್ನಿಗೆ ವೀಡಿಯೋ ಕಾಲ್ ಮಾಡಲು ಪ್ರಯತ್ನಿಸಿದ್ದಾನೆ. ಆದರೆ ಆಕೆ ಆ ಸಮಯದಲ್ಲಿ ಕಾಲ್ ಪಿಕ್ ಮಾಡಿರಲಿಲ್ಲ. ಮಗನನ್ನು ಕತ್ತು ಹಿಸುಕಿ ಕೊಲೆ ಮಾಡಿದ ದೃಶ್ಯವನ್ನು ಕೂಡ ಸೆರೆಹಿಡಿದು ಮೂರನೇ ಪತ್ನಿ ಪಾಯಲ್ ಗೆ ವಾಟ್ಸಪ್ ಮೂಲಕ ಕಳುಹಿಸಿದ್ದಾನೆ. ಆದರೆ ಅವಳು ಅದಾಗಲೇ ಈತನ ನಂಬರ್ ಬ್ಲಾಕ್ ಮಾಡಿದ್ದರಿಂದ ವೀಡಿಯೋ ನೋಡಿರಲಿಲ್ಲ. ನಂತರ ಈತ ಅಲ್ಲಿಂದ ಪರಾರಿಯಾಗಿದ್ದಾನೆ.
Advertisement
Advertisement
ಘಟನೆಯ ಬಳಿಕ ನನ್ನ ಮೂರನೇ ಪತ್ನಿ ಪಾಯಲ್ಗೆ ಮಗನನ್ನು ಕೊಲೆಗೈದಿರುವುದಾಗಿ ವೀಡಿಯೋ (Video) ಹಾಗೂ ಮೆಸೇಜ್ (Message) ಕಳುಹಿಸಿದ್ದೇನೆ. ಇನ್ನು ಮುಂದೆ ನಿನಗೆ ನನ್ನ ಮಗನಿಂದ ತೊಂದರೆಯಾಗಲ್ಲ ಎಂದು ಹೇಳಿದ್ದೇನೆ. ಆದರೆ ಬ್ಲಾಕ್ ಮಾಡಿದ್ದರಿಂದ ಆಕೆಗೆ ವೀಡಿಯೋ ಹಾಗೂ ಮೆಸೇಜ್ ರೀಚ್ ಆಗಿರಲಿಲ್ಲ ಎಂದು ಶಶಿಪಾಲ್ ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾನೆ.
Advertisement
ಪಾಯಲ್ ಇತ್ತೀಚೆಗೆ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಹೀಗಾಗಿ ಈ ಹಿಂದೆ ಮದುವೆಯಾದ ಪತ್ನಿಯಿಂದ ಹುಟ್ಟಿರುವ ಮಗ ಪ್ರತೀಕ್ ನನ್ನು ಕೊಲೆ ಮಾಡಬೇಕು. ಇಲ್ಲವೆಂದಲ್ಲಿ ನಾನು ಮತ್ತೆ ಆ ಮನೆಗೆ ಕಾಲಿಡಲ್ಲ ಎಂದು ಶಶಿಪಾಲ್ಗೆ ಪಾಯಲ್ ಎಚ್ಚರಿಕೆ ನೀಡಿದ್ದಳು. ಶಶಿಪಾಲ್ ಮೂರನೇ ಪತ್ನಿ ಮೊದಲಿನಿಂದಲೂ ಬಾಲಕ ಪ್ರತೀಕ್ ಬಗ್ಗೆ ತುಂಬಾ ಅಸಮಾಧಾನ ಹೊಂದಿದ್ದಳು. ಈ ಬಾಲಕನ ವಿಚಾರವಾಗಿ ಆಗಾಗ ಜಗಳಗಳು ಕೂಡ ನಡೆಯುತ್ತಿದ್ದವು ಎಂದು ಪೊಲೀಸ್ ಅಧಿಕಾರಿ ಜೈವೀರ್ ಸಿಂಗ್ ಭಡೋರಿಯಾ ಹೇಳಿದ್ದಾರೆ.
ಶಶಿಪಾಲ್ ಮೊಬೈಲ್ನಲ್ಲಿ ಕೊಲೆಯ ವೀಡಿಯೋ ಪತ್ತೆಯಾಗಿದೆ. ಆದರೆ ತನಗೂ ಈ ಕೊಲೆಗೂ ಯಾವುದೇ ಸಂಬಂಧವಿಲ್ಲ ಎಂದು ಪಾಯಲ್ ಹೇಳಿದ್ದಾಳೆ. ನನ್ನ ಪತಿಗೆ ತನ್ನ ಏಳು ವರ್ಷದ ಮಗನನ್ನು ಸಾಯಿಸುವಂತೆ ನಾನು ಯಾವತ್ತೂ ಹೇಳಿಲ್ಲ ಎಂದು ಹೇಳಿದ್ದಾಳೆ. ಘಟನೆ ಸಂಬಂಧ ಮಂಗಳವಾರ ಶಶಿಪಾಲ್ ಹಾಗೂ ಪಾಯಲ್ (23) ನನ್ನು ಪೊಲೀಸರು ಬಂಧಿಸಿದ್ದಾರೆ.