ಬೆಂಗಳೂರು: ಮಧ್ಯಪ್ರದೇಶದ ಮಹಿಳೆಯೊಬ್ಬರು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರನ್ನು ಭೇಟಿಯಾಗಲು ಬಂದು ಕಣ್ಣೀರು ಹಾಕಿದ ಪ್ರಸಂಗ ನಡೆದಿದೆ.
Advertisement
ಅಷ್ಟು ದೂರದಿಂದರೂ ಬಂದರೂ ಮಹಿಳೆಕೆ ಡಿಕೆಶಿ ಭೆಟಿಯಾಗಲು ಅವಕಾಶ ಸಿಗಲಿಲ್ಲ. ಇದರಿಂದ ಬೆಸರಗೊಂಡ ಆಕೆ ಬಾಗಿಲಲ್ಲೇ ನಿಂತು ಕಣ್ಣೀರು ಸುರಿಸಿದ್ದಾರೆ. ಅಲ್ಲಿಂದ ಬಂದರೂ ಅಧ್ಯಕ್ಷರ ಭೇಟಿ ಆಗಲಿಲ್ಲ ಎಂದು ಮಹಿಳೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಈ ವೇಳೆ ಕಾಂಗ್ರೆಸ್ ನಾಯಕರು ಆಕೆಗೆ ಸಾಂತ್ವನ ಹೇಳಿದ್ದಾರೆ. ಸಾಂತ್ವನ ಹೇಳಿದರೂ ಮಹಿಳೆ ನನಗೆ ಅಧ್ಯಕ್ಷರನ್ನು ಭೇಟಿಯಾಗಲೇ ಬೇಕು ಎಂದು ಪಟ್ಟು ಹಿಡಿದು ಬೇಸರ ವ್ಯಕ್ತಪಡಿಸಿದ್ದಾರೆ.
Advertisement
Advertisement
ಇತ್ತ ಸಿದ್ದರಾಮಯ್ಯ ಹಾಗೂ ಡಿಕೆಶಿ ಇಂದು ಆಗಸ್ಟ್ 15 ರ ಫ್ರೀಡಂ ಮಾರ್ಚ್ ನಲ್ಲಿ ಧರಿಸಲಿರುವ ಟೀ ಶರ್ಟ್ ಹಾಗೂ ಹ್ಯಾಟ್ ಬಿಡುಗಡೆ ಮಾಡಿದರು. ಬಿಡುಗಡೆ ನಂತರ ಯಾರಿಗೆ ಹಾಕೋದು ಅಂತ ಸಿದ್ದರಾಮಯ್ಯ ಕೈಗೆ ಡಿಕೆಶಿ ಟೋಪಿ ಕೊಟ್ಟರು. ಈ ವೇಳೆ ಸಿದ್ದರಾಮಯ್ಯ ಅವರು, ಪಕ್ಕದಲ್ಲಿ ಕುಳಿತಿದ್ದ ಸಲೀಂ ಅಹಮ್ಮದ್ ಬಿಟ್ಟು ಅವರ ಪಕ್ಕದಲ್ಲಿ ಕುಳಿತಿದ್ದ ಕೆ.ಜೆ.ಜಾರ್ಜ್ ಗೆ ಟೋಪಿ ಹಾಕಿದರು. ಇದನ್ನೂ ಓದಿ: ಕಾಂಗ್ರೆಸ್‍ನಲ್ಲಿ ಗಟ್ಟಿಯಾಯ್ತು ಡಿಕೆ, ಸಿದ್ದು ಜೋಡಿ- ಪರಸ್ಪರ ಟೋಪಿ ಹಾಕಿಕೊಂಡ ನಾಯಕರು
Advertisement
ಇದೇ ವೇಳೆ ಸಿದ್ದರಾಮಯ್ಯಗೆ ಡಿಕೆಶಿ ಟೋಪಿ ಹಾಕಿದರು. ಡಿಕೆಶಿ ಟೋಪಿ ಹಾಕುತ್ತಿದ್ದಂತೆ ತಾವು ಒಂದು ಟೋಪಿ ತೆಗೆದುಕೊಂಡು ಅದನ್ನು ಡಿಕೆಶಿಗೆ ಹಾಕಿದರು. ಈ ಮೂಲಕ ಸಿದ್ದರಾಮಯ್ಯ ಹಾಗೂ ಡಿಕೆಶಿ ನಮ್ಮ ಲ್ಲಿ ಯಾವುದೇ ಮುನಿಸಿಲ್ಲ ಎಂಬುದನ್ನು ಸಾರಿದರು.