ಭೋಪಾಲ್: ಲಾಕ್‍ಡೌನ್ ನಿಯಮವನ್ನು ಉಲ್ಲಂಘಿಸಿದ ಕೂಲಿ ಕಾರ್ಮಿಕನಿಗೆ ಲಾಕ್‍ಡೌನ್ ಉಲ್ಲಂಘಿಸಿದ್ದೇನೆ ನನ್ನಿಂದ ದೂರ ಇರಿ ಎಂದು ಪೊಲೀಸರು ಹಣೆಯ ಮೇಲೆ ಬರೆದಿದ್ದು, ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ.
ಕೊರೊನಾ ವೈರಸ್ ಭೀತಿಯಿಂದ ಇಡೀ ದೇಶವನ್ನೇ ಪ್ರಧಾನಿ ಮೋದಿ ಅವರು, ಏಪ್ರಿಲ್ 14ರವರೆಗೆ ಲಾಕ್‍ಡೌನ್ ಮಾಡಿದ್ದಾರೆ. ಲಾಕ್‍ಡೌನ್ ಪರಿಣಾಮದಿಂದ ಸಾರಿಗೆ ಸಂಚಾರ ಸಂಪೂರ್ಣ ನಿಂತು ಹೋಗಿದೆ. ಇದರಿಂದ ಬೇರೆ ರಾಜ್ಯಕ್ಕೆ ಕೂಲಿ ಕೆಲಸಕ್ಕೆ ಹೋಗಿದ್ದ ಕಾರ್ಮಿಕರಿಗೆ ತೊಂದರೆಯಾಗಿದೆ. ತಮ್ಮ ತಮ್ಮ ಊರಿಗೆ ವಾಪಸ್ ಬರಲು ಕೂಲಿ ಕಾರ್ಮಿಕರು ಕಷ್ಟಪಡುತ್ತಿದ್ದು, ಕೆಲವರು ನಡೆದುಕೊಂಡೇ ತಮ್ಮ ಸ್ವಗ್ರಾಮಗಳಿಗೆ ಬರುತ್ತಿದ್ದಾರೆ.
Advertisement
Madhya Pradesh: A Police Sub-Inspector writes 'I have violated lockdown, stay away from me' on forehead of a labourer in Gorihar area of Chhatarpur. SP Kumar Saurabh says, "This is unacceptable. Action is being taken against the police woman as per the law". #CoronavirusLockdown pic.twitter.com/bf6IizgPjD
— ANI (@ANI) March 29, 2020
Advertisement
ಸಾರಿಗೆ ಸಂಚಾರದ ವ್ಯವಸ್ಥೆಯಿಲ್ಲದೆ ಹೀಗೆ ತಮ್ಮ ಸ್ವಗ್ರಾಮಕ್ಕೆ ನಡೆದುಕೊಂಡ ಬಂದ ಓರ್ವ ಕಾರ್ಮಿಕನಿಗೆ ಚ್ಚತರ್‍ಪುರ್‍ನ ಗೋರಿಹಾರ್ ಪ್ರದೇಶದಲ್ಲಿ ಅಲ್ಲಿನ ಲೇಡಿ ಸಬ್ ಇನ್‍ಸ್ಪೆಕ್ಟರ್ ಒಬ್ಬರು ಲಾಕ್‍ಡೌನ್ ಉಲ್ಲಂಘಿಸಿದ್ದೇನೆ ನನ್ನಿಂದ ದೂರ ಇರಿ ಎಂದು ಹಣೆಯ ಮೇಲೆ ಬರೆದಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಎಲ್ಲ ಕಡೇ ಆಕ್ರೋಶ ವ್ಯಕ್ತವಾಗುತ್ತಿದೆ. ಕೂಲಿ ಕಾರ್ಮಿಕರು ಕಷ್ಟದಲ್ಲಿರುವ ಸಮಯದಲ್ಲಿ ಪೊಲೀಸರು ಈ ರೀತಿ ಮಾಡುವುದು ಎಷ್ಟು ಸರಿ ಎಂದು ಸಾರ್ವಜಕನಿಕರು ಕಿಡಿಕಾರಿದ್ದಾರೆ.
Advertisement
Advertisement
ದೇಶದಲ್ಲಿ ಹೆಚ್ಚಿನ ರಾಜ್ಯಗಳು ಬಿಹಾರ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಿಂದ ಬಂದ ಕೂಲಿ ಕಾರ್ಮಿಕರನ್ನು ನಿರ್ಲಕ್ಷ್ಯ ಮಾಡುತ್ತೀವೆ. ಅವರಿಗೆ ತಮ್ಮ ಸ್ವಂತ ಗ್ರಾಮಕ್ಕೆ ತೆರಳಲು ಸಂಚಾರಿ ವ್ಯವಸ್ಥೆ ಮಾಡುತ್ತಿಲ್ಲ. ಅವರ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಯಾರು ಮುಂದೆ ಬರುತ್ತಿಲ್ಲ. ಇದರ ಜೊತೆಗೆ ಕೊರೊನಾ ಭೀತಿಯಿಂದ ಹೆದರಿರುವ ಕಾರ್ಮಿಕರು ತಮ್ಮ ಗ್ರಾಮಗಳಿಗೆ ಹೋಗಲು ಕಷ್ಟಪಡುತ್ತಿದ್ದಾರೆ.
ಇದರ ನಡುವೆ ಕೆಲ ಕಾರ್ಮಿಕರು ಕಷ್ಟವಾದರು ಪರವಾಗಿಲ್ಲ ನಾವು ನಡೆದುಕೊಂಡೇ ಹೋಗುತ್ತೇವೆ ಎಂದು ಬರುತ್ತಿದ್ದಾರೆ. ಆದರೆ ಕೊರೊನಾ ಭಯದಿಂದ ಅವರನ್ನು ರಾಜ್ಯಗಳು ಒಳಗೆ ಬಿಟ್ಟುಕೊಳ್ಳಲು ಹಿಂದೆ ಮುಂದೆ ನೋಡುತ್ತಿವೆ. ಇದರ ಜೊತೆಗೆ ನಡೆದುಕೊಂಡ ಬರುತ್ತಿರುವ ಕಾರ್ಮಿಕರನ್ನು ಲಾಕ್‍ಡೌನ್ ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಪೊಲೀಸರು ಬೆನ್ನಟ್ಟುತ್ತಿದ್ದಾರೆ.