-ನಮ್ಮ ಸಮ್ಮಿಶ್ರ ಸರ್ಕಾರ ಸೇಫ್ ಎಂದ ರಾವತ್
ಮುಂಬೈ: ನಮ್ಮ ಸಮ್ಮಿಶ್ರ ಸರ್ಕಾರ ಸೇಫ್ ಆಗಿದೆ. ಮಹಾರಾಷ್ಟ್ರಕ್ಕೆ ಮಧ್ಯಪ್ರದೇಶದ ಆಪರೇಷನ್ ಲೋಟಸ್ ವೈರಸ್‍ಗೆ ಪ್ರವೇಶವಿಲ್ಲ ಎಂದು ಶಿವಸೇನೆಯ ಸಂಸದ ಸಂಜಯ್ ರಾವತ್ ತಿಳಿಸಿದ್ದಾರೆ.
ಶಿವಸೇನೆಯ ಮುಖ್ಯಸ್ಥ, ಸಿಎಂ ಉದ್ಧವ್ ಠಾಕ್ರೆ ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರಿಂದಲೂ ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ. ಕೆಲವರು ನಮ್ಮ ಮೈತ್ರಿ ಮಹಾರಾಷ್ಟ್ರ ವಿಕಾಸ್ ಅಘಾಡಿ (ಎಂವಿಎ)ಯನ್ನು ಬೀಳಿಸಲು ಪ್ರಯತ್ನಿಸುತ್ತಿದ್ದಾರೆ. ಅಂತಹವರನ್ನು ನಾವು ತಡೆಯಲ್ಲ ಎಂದು ಪರೋಕ್ಷವಾಗಿ ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದರು.
Advertisement
Advertisement
ಮಧ್ಯಪ್ರದೇಶದ ಸಿಎಂ ಕಮಲನಾಥ್ ವಿಶ್ವಾಸಮತ ಸಾಬೀತು ಪಡಿಸಬಹುದು. ವಿಶ್ವಾಸಮತ ಯಾಚನೆಗೂ ಮುನ್ನ ಸರ್ಕಾರ ಇರುತ್ತಾ ಅಥವಾ ಇಲ್ವಾ ಎಂಬುದರ ಬಗ್ಗೆ ಹೇಳಲಾರೆ. ಮೊದಲು ವಿಶ್ವಾಸಮತ ಸಾಬೀತು ಆಗಲಿ ಎಂದರು.
Advertisement
Advertisement
ಜ್ಯೋತಿರಾದಿತ್ಯ ಸಿಂಧಿಯಾ ರಾಜೀನಾಮೆ ಬಗ್ಗೆ ಪ್ರತಿಕ್ರಿಯಿಸಿದ ಸಂಜಯ್ ರಾವತ್, ಅದು ಕಾಂಗ್ರೆಸ್ ಆಂತರಿಕ ವಿಷಯ. ಸಿಂಧಿಯಾ ರಾಜೀನಾಮೆಯನ್ನು ಬಿಜೆಪಿ ಸಾಧನೆ ಎಂದು ತೆಗೆದುಕೊಳ್ಳಬಾರದು. ಸಿಂಧಿಯಾ ರಾಜೀನಾಮೆ ಹಿಂಪಡೆದುಕೊಳ್ಳುವಂತೆ ಮನವೊಲಿಸುವಲ್ಲಿ ಕಾಂಗ್ರೆಸ್ ವಿಫಲವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇನ್ನು ಮಹಾರಾಷ್ಟ್ರಕ್ಕೆ ಮಧ್ಯಪ್ರದೇಶದ ಆಪರೇಷನ್ ಲೋಟಸ್ ವೈರಸ್‍ಗೆ ಪ್ರವೇಶವಿಲ್ಲ. 100 ದಿನಗಳ ಹಿಂದೆ ಬಿಜೆಪಿ ಆಪರೇಷನ್ ಮಾಡಲು ಹೋಗಿ ಕೈ ಸುಟ್ಟಿಕೊಂಡಿರುವುದು ಎಲ್ಲರಿಗೂ ಗೊತ್ತಿದೆ. ಮಾಹಾರಾಷ್ಟ್ರ ವಿಕಾಸ ಅಘಾಡಿ ಸರ್ಕಾರಕ್ಕೆ ಯಾವುದೇ ಬೈಪಾಸ್ ಸರ್ಜರಿಯೂ ನಡೆಯಲ್ಲ. ಮಹಾರಾಷ್ಟ್ರದ ಜನತೆ ನಮ್ಮ ಸರ್ಕಾರವನ್ನು ರಕ್ಷಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.