ಭೋಪಾಲ್: ಮಧ್ಯಪ್ರದೇಶದ ಶಾಲಾ ಶಿಕ್ಷಣ ಸಚಿವ ಇಂದರ್ ಸಿಂಗ್ ಪರ್ಮಾರ್ ಅವರ ಸೊಸೆ ಸವಿತಾ ಪರ್ಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇಂದರ್ ಸಿಂಗ್ ಪರ್ಮಾರ್ ಅವರ ಸೊಸೆ ಸವಿತಾ ಪರ್ಮಾರ್ ಅವರು ಮಂಗಳವಾರ ಸಂಜೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಕಲಾಪಿಪಾಲ್ ತಹಸಿಲ್‍ನ ಪೊಂಚನೇರ್ ಗ್ರಾಮದಲ್ಲಿ ನಡೆದಿದೆ. ಸಂಜೆ 5:30ರ ಸುಮಾರಿಗೆ ಈ ಘಟನೆ ನಡೆದಿದೆ. ಘಟನೆಯನ್ನು ಸವಿತಾ ಪರ್ಮಾರ್ ಸಂಬಂಧಿಕರು ಖಚಿತಪಡಿಸಿದ್ದಾರೆ.
Advertisement
Advertisement
ನಡೆದಿದ್ದೇನು?
ಸವಿತಾ ಪರ್ಮಾರ್ ಅವರಿಗೆ 22 ವರ್ಷ ವಯಸ್ಸಾಗಿತ್ತು. ಕಳೆದ ಮೂರು ವರ್ಷಗಳ ಹಿಂದೆ ಇಂದರ್ ಸಿಂಗ್ ಪರ್ನಾರ್ ಅವರ ಮಗ ದೇವರಾಜ್ ಸಿಂಗ್ ಅವರನ್ನು ವಿವಾಹವಾಗಿದ್ದರು. ಕೆಲವು ಕೌಟುಂಬಿಕ ಸಮಸ್ಯೆಗಳಿದ್ದವು ಎಂದು ಹೇಳಲಾಗಿದ್ದರೂ, ಪೊಲೀಸರಿಗೆ ಈ ಕುರಿತು ಯಾವುದೇ ರೀತಿಯ ಖಚಿತ ಮಾಹಿತಿಯನ್ನು ಸಿಕ್ಕಿಲ್ಲ. ಇದನ್ನೂ ಓದಿ: ಆತ್ಮಹತ್ಯೆ ಮಾಡಿಕೊಳ್ಳಲು ಟವರ್ ಹತ್ತಿದ್ದ ಮಹಿಳೆ ಪ್ರಾಣ ಉಳಿಸಿದ ಕಣಜಗಳು
Advertisement
ಘಟನೆಯ ಸಮಯದಲ್ಲಿ, ಇಂದರ್ ಸಿಂಗ್ ಪರ್ಮಾರ್ ರಾಜ್ಯದ ರಾಜಧಾನಿ ಭೋಪಾಲ್‍ನಲ್ಲಿದ್ದರು. ಸವಿತಾ ಅವರ ಪತಿ ದೇವರಾಜ್ ಸಿಂಗ್ ಪಕ್ಕದ ಹಳ್ಳಿಯಾದ ಮೊಹಮ್ಮದ್ ಖೇರಾದಲ್ಲಿ ಸಂಬಂಧಿಕರ ಮದುವೆಗೆ ಹಾಜರಾಗಿದ್ದರು. ಮನೆಯಲ್ಲಿ ಇತರ ಸಂಬಂಧಿಕರು ಇದ್ದರು ಎಂದು ವರದಿ ಮೂಲಕ ತಿಳಿದುಬಂದಿದೆ.
Advertisement
ಮೂಲಕಗಳ ಪ್ರಕಾರ, ಮೃತದೇಹದ ಬಳಿ ಯಾವುದೇ ಸೂಸೈಡ್ ನೋಟ್ ಪತ್ತೆಯಾಗಿಲ್ಲ. ವಿಷಯ ತಿಳಿದ ನಂತರ ಸಚಿವರ ನಿವಾಸದ ಬಳಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಘಟನೆ ನಡೆದ ಸ್ವಲ್ಪ ಸಮಯದ ನಂತರ ಸಚಿವರು ಮತ್ತು ಅವರ ಪುತ್ರ ಕೂಡ ಸ್ಥಳಕ್ಕೆ ಬಂದ್ದಿದ್ದಾರೆ. ಬುಧವಾರ ಬೆಳಗ್ಗೆ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗುವುದು. ಈ ಘಟನೆಯ ಬಗ್ಗೆ ಮಧ್ಯಪ್ರದೇಶದ ಪೊಲೀಸರು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.