ಭೋಪಾಲ್: ಲೋಕಸಭಾ ಚುನಾವಣೆ (General Elections 2024) ಹೊಸ್ತಿಲಲ್ಲಿ ವಿವಿಧ ರಾಜ್ಯಗಳಲ್ಲಿ ಕಾಂಗ್ರೆಸ್‍ಗೆ (Congress) ಸರಣಿ ಆಘಾತ ಎದುರಾಗುತ್ತಿದ್ದು, ಪಕ್ಷ ತೊರೆಯುವರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗುತ್ತಿದೆ. ಮಹಾರಾಷ್ಟ್ರದ ಬಳಿಕ ಮಧ್ಯಪ್ರದೇಶದಲ್ಲಿ (Madhya Pradesh) ಮಾಜಿ ಕೇಂದ್ರ ಸಚಿವ ಸುರೇಶ್ ಪಚೌರಿ ಸೇರಿದಂತೆ ಹಲವು ಪ್ರಮುಖ ನಾಯಕರು ಕಾಂಗ್ರೆಸ್ ತೊರೆದು ಬಿಜೆಪಿ (BJP) ಸೇರ್ಪಡೆಯಾಗಿದ್ದಾರೆ.
ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್, ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಸಂಸದ ಗಜೇಂದ್ರ ಸಿಂಗ್ ರಾಜುಖೇದಿ, ಮಾಜಿ ಶಾಸಕ ಸಂಜಯ್ ಶುಕ್ಲಾ, ಅರ್ಜುನ್ ಪಾಲಯ್ಯ, ವಿಶಾಲ್ ಪಟೇಲ್, ಭೋಪಾಲ್ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಕೈಲಾಶ್ ಮಿಶ್ರಾ ಸೇರಿ ಹಲವು ನಾಯಕರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇದನ್ನೂ ಓದಿ: ಅರುಣಾಚಲ ಪ್ರದೇಶದಲ್ಲಿ ಕಿರಿಕ್ ಚೀನಾಗೆ ಠಕ್ಕರ್ – ವಿಶ್ವದ ಅತೀ ಉದ್ದದ ದ್ವಿಪಥ ಸುರಂಗ ಲೋಕಾರ್ಪಣೆಗೊಳಿಸಿದ ಮೋದಿ
Advertisement
ಕಾಂಗ್ರೆಸ್ಸಿನ ಜನಪ್ರಿಯ ನಾಯಕರಲ್ಲಿ ಸಂಜಯ್ ಮತ್ತು ವಿಶಾಲ್ ಇದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇಬ್ಬರೂ ನಾಯಕರು ಬಿಜೆಪಿ ನಾಯಕರನ್ನು ಸೋಲಿಸಿ ಗೆದ್ದಿದ್ದರು. ಕಮಲ್‍ನಾಥ್ ಸರ್ಕಾರದಲ್ಲಿ ಇಬ್ಬರೂ ನಾಯಕರು ಸಾಕಷ್ಟು ಜನಪ್ರಿಯರಾಗಿದ್ದರು. ಪಚೌರಿ ಅವರನ್ನು ಗಾಂಧಿ ಕುಟುಂಬದ ಆಪ್ತ ಎಂದೇ ಗುರುತಿಸಲಾಗಿತ್ತು. ರಕ್ಷಣಾ ಖಾತೆ, ರಾಜ್ಯ ಸಚಿವರಾಗಿ, ನಾಲ್ಕು ಅವಧಿಗೆ ರಾಜ್ಯಸಭಾ ಸದಸ್ಯರಾಗಿ ಪಚೌರಿ ಕಾರ್ಯನಿರ್ವಹಿಸಿದ್ದರು.
Advertisement
Advertisement
ಬಿಜೆಪಿ ನನ್ನ ಕುಟುಂಬ, ಈಗ ನಾನು ನನ್ನ ಕುಟುಂಬಕ್ಕೆ ಮರಳಿದ್ದೇನೆ. ರಾಮಮಂದಿರದ ಆಹ್ವಾನವನ್ನು ಕಾಂಗ್ರೆಸ್ ತಿರಸ್ಕರಿಸಿದಾಗ ನನಗೆ ತುಂಬಾ ಬೇಸರವಾಗಿತ್ತು. ಈಗ ಬಿಜೆಪಿಯಲ್ಲೇ ಉಳಿದು ಜನಸೇವೆ ಮಾಡುತ್ತೇನೆ ಎಂದು ಬಿಜೆಪಿ ಸೇರ್ಪಡೆ ಬಳಿಕ ಸಂಜಯ್ ಶುಕ್ಲಾ ಹೇಳಿದ್ದಾರೆ.
Advertisement
ಸುರೇಶ್ ಪಚೌರಿಯಂತಹ ಸಂತರಿಗೆ ಕಾಂಗ್ರೆಸ್‍ನಲ್ಲಿ ಸ್ಥಾನವಿಲ್ಲ. ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ದೇಶದಲ್ಲಿ ಉತ್ತಮ ಕೆಲಸಗಳು ನಡೆಯುತ್ತಿವೆ. ಜನ ಬಿಜೆಪಿ ಮೇಲೆ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ಸುರೇಶ್ ಪಚೌರಿ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‍ನ ರಾಜಕೀಯ ಸಂತ ಎಂದು ವಿಡಿ ಶರ್ಮಾ ಹೇಳಿದರು.
ಈ ದಿನ ಮಧ್ಯಪ್ರದೇಶದಲ್ಲಿ ನಿಜವಾಗಿ ಹೊಸ ಇತಿಹಾಸವಾಗಲಿದೆ. ರಾಹುಲ್ ಗಾಂಧಿ ಹೋದಲ್ಲೆಲ್ಲಾ ಕಾಂಗ್ರೆಸ್ ಕಾರ್ಯವೈಖರಿ ಮೇಲೆ ಪರಿಣಾಮ ಬೀರುತ್ತದೆ ಎಂಬ ಭಾವನೆ ನಮ್ಮೆಲ್ಲರಲ್ಲಿತ್ತು. ಪ್ರತಿ ಪಕ್ಷದೊಳಗೆ ಶುದ್ಧ ರಾಜಕೀಯ ಮಾಡುವ ನಾಯಕರು ಇದ್ದಾರೆ. ಸ್ವಚ್ಛ ರಾಜಕಾರಣ ಮಾಡುವವರಿಗೆ ಕೆಲಸ ಮಾಡಲು ಸೌಲಭ್ಯ, ಅವಕಾಶ ನೀಡುವುದು ನಾಯಕತ್ವದ ಮೇಲೆ ಅವಲಂಬಿತವಾಗಿದೆ. ದೇಶದ ಅಭಿವೃದ್ಧಿಗಾಗಿ ರಾಜಕೀಯ ಮಾಡುವ ಇಂತಹ ಸ್ವಚ್ಛ ಮನಸ್ಸಿನ ನಾಯಕರನ್ನು ಕಾಂಗ್ರೆಸ್ ನಾಯಕತ್ವ ನಿರಾಸೆಗೊಳಿಸುತ್ತಿರುವುದು ದುರಾದೃಷ್ಟಕರ ಎಂದು ಮುಖ್ಯಮಂತ್ರಿ ಮೋಹನ್ ಯಾದವ್ ಹೇಳಿದರು. ಇದನ್ನೂ ಓದಿ: ನಾವು ತ್ಯಾಗ ಮಾಡಿ ಬಂದವರು, ಲೋಕಸಭಾ ಟಿಕೆಟ್ ನನಗೆ ಕೊಡ್ಬೇಕು: ಬಿ.ಸಿ ಪಾಟೀಲ್