ಭೋಪಾಲ್: ಗೋವಿಂದ ಡಾನ್ಸ್ ಸ್ಟೈಲ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಚಾರ ಪಡೆದಿದ್ದ ಮಧ್ಯಪ್ರದೇಶ ಪ್ರೊ. ಸಂಜೀವ್ ಶ್ರೀವಾಸ್ತವ ಅವರನ್ನು ಸ್ಥಳೀಯ ಮುನಿಸಿಪಲ್ ಕಾರ್ಪೋರೇಷನ್ ತನ್ನ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಿದೆ.
ಈ ಕುರಿತು ಶನಿವಾರ ವಿಷಯವನ್ನು ಖಚಿತಪಡಿಸಿದ ಕಾರ್ಪೋರೇಷನ್, ತನ್ನ ವ್ಯಾಪ್ತಿಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಶ್ರಿವಾಸ್ತವ ಅವರನ್ನು ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಿರುವುದಾಗಿ ಸ್ಥಳೀಯ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾಗಿ ವರದಿಯಾಗಿದೆ.
Best wedding performance selected by UNESCO pic.twitter.com/XPmLbmRKld
— Gautam Trivedi (@KaptanHindustan) May 30, 2018
ಅಂದ ಹಾಗೇ ಶ್ರೀವಾಸ್ತವ ಅವರು ಮೂರು ದಶಕಗಳಿಂದಲೂ ಬಾಲಿವುಡ್ ನಟ ಗೋವಿಂದ್ ಅವರ ಅಭಿಮಾನಿಯಾಗಿದ್ದು, ಅವರದ್ದೇ ಶೈಲಿಯಲ್ಲಿ ಡಾನ್ಸ್ ಮಾಡುವ ಮೂಲಕ ಸುದ್ದಿಯಾಗಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಶ್ರೀ ವಾಸ್ತವ್, ಇದು ಅನಿರೀಕ್ಷಿತ ಅನುಭವವಾಗಿದ್ದು, ತನ್ನ ಡಾನ್ಸ್ ವಿಡಿಯೋ ವೈರಲ್ ಆಗುತ್ತದೆ ಎಂಬುವುದನ್ನು ಊಹೆ ಕೂಡ ಮಾಡಿರಲಿಲ್ಲ. ತನ್ನ ಡಾನ್ಸ್ ಸ್ಟೈಲ್ ನೋಡಿ ಸಾಕಷ್ಟು ಮಂದಿ ಬೆಂಬಲ ಹಾಗೂ ಪ್ರೀತಿ ತೋರಿದ್ದಾರೆ, ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.
ವೈರಲ್ ವಿಡಿಯೋ ವಿಕ್ಷೀಸಿರುವ ಬಾಲಿವುಡ್ ಸ್ಟಾರ್ ಗಳಾದ ಅರ್ಜುನ್ ಕಪೂರ್, ಅನುಷ್ಕಾ ಶರ್ಮಾ, ದಿವ್ಯ ದತ್ತ ಮತ್ತು ಸಂಧ್ಯಾ ಮೆನನ್, ಶ್ರೀವಾಸ್ತವ ಅವರ ಡಾನ್ಸ್ ಶೈಲಿಗೆ ಮೆಚ್ಚುಗೆ ಸೂಚಿಸಿದ್ದಾರೆ. ಅಲ್ಲದೇ ಈ ಕುರಿತು ಟ್ವೀಟ್ ಮಾಡಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಣ್ ಅವರು, ಮಧ್ಯಪ್ರದೇಶ ನೀರಿನಲ್ಲೇ ವಿಶೇಷ ಶಕ್ತಿ ಅಂಶವಿದೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ವಿವಾಹ ಸಮಾರಂಭದಲ್ಲಿ ಸೃಜನಾತ್ಮಕ ನೃತ್ಯ ಪ್ರದರ್ಶಿಸಿದ್ದ ಡಾನ್ಸ್ ವಿಡಿಯೋವನ್ನು ಗೌತಮ್ ತ್ರಿವೇದಿ ಎಂಬವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ, ವಿವಾಹ ಸಮಾರಂಭದ ಅತ್ಯುತ್ತಮ ಪ್ರದರ್ಶನವೆಂದು ಯುನೆಸ್ಕೋ ಆಯ್ಕೆ ಮಾಡಿದೆ ಎಂದು ಬರೆದಿದ್ದರು.
हमारे विदिशा के भोपाल में कार्यरत प्रोफ़ेसर श्री संजीव श्रीवास्तव जी की ज़िंदादिली ने पूरे भारत में इंटरनेट पर तहलका मचा दिया है। मानो या ना मानो मध्यप्रदेश के पानी में कुछ तो ख़ास बात है… pic.twitter.com/8qM15uZVXF
— Shivraj Singh Chouhan (@ChouhanShivraj) June 1, 2018