ಭೋಪಾಲ್: ಮತದಾನದ ಹಕ್ಕು ಹಾಗೂ ಪ್ರಜಾಪ್ರಭುತ್ವವೇ ಈ ದೇಶದ ಬಹುದೊಡ್ಡ ಪ್ರಮಾದ ಎಂದು ಹೇಳಿಕೆ ನೀಡಿದ್ದ ಸರ್ಕಾರಿ ಅಧಿಕಾರಿ ವಿರುದ್ಧ ಮಧ್ಯಪ್ರದೇಶ ಸರ್ಕಾರ ಶಿಸ್ತು ಕ್ರಮಕ್ಕೆ ಆದೇಶಿಸಿದೆ.
ಶಿವಪುರಿಯ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ (ಎಡಿಎಂ) ಉಮೇಶ್ ಶುಕ್ಲಾ ಅವರು ಪ್ರಜಾಪ್ರಭುತ್ವ ಕುರಿತು ವಿವಾದಿತ ಹೇಳಿಕೆ ನೀಡಿದ್ದರು. ಈ ಸಂಬಂಧದ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಹೀಗಾಗಿ ಶುಕ್ಲಾ ವಿರುದ್ಧ ಕ್ರಮಕ್ಕೆ ಸರ್ಕಾರ ಆದೇಶ ಹೊರಡಿಸಿದೆ. ಇದನ್ನೂ ಓದಿ: ಇಡಿ ಬಂಧನದಲ್ಲಿ ಎನ್‌ಎಸ್‌ಸಿ ಮಾಜಿ ಸಿಇಒ ಚಿತ್ರಾ
ಶಿವಪುರಿ ಎಡಿಎಂ ಉಮೇಶ್ ಶುಕ್ಲಾ ಅವರು ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಕೊನೆಯ ಹಂತದ ಮತದಾನಕ್ಕೆ ಮುನ್ನ ಕಾಮೆಂಟ್ ಮಾಡಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಗೃಹ ಸಚಿವ ನರೋತ್ತಮ್ ಮಿಶ್ರಾ, ಇದು ಗಂಭೀರ ವಿಷಯವಾಗಿದೆ. ನಾವು ಎಡಿಎಂ ವಿರುದ್ಧ ಶಿಸ್ತು ಕ್ರಮಕ್ಕೆ ನೋಟಿಸ್ ನೀಡಿದ್ದೇವೆ. ಅಧಿಕಾರಿಯನ್ನು ವರ್ಗಾಯಿಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೂ ಪತ್ರ ಬರೆದಿದ್ದೆವು. ಆದರೆ ಅಧಿಕಾರಿಯ ಪದಚ್ಯುತಿಗೆ ಚುನಾವಣಾ ಆಯೋಗವು ಸಮ್ಮತಿ ನೀಡಿದ್ದು, ಅವರನ್ನು ಹುದ್ದೆಯಿಂದ ತೆಗೆದುಹಾಕಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 16ರ ಬಾಲಕಿಯಿಂದ 8 ಬಾರಿ ಅಂಡಾಣು ಮಾರಾಟ – 4 ಆಸ್ಪತ್ರೆಗಳು ಶಾಶ್ವತ ಬಂದ್
ಬ್ಯಾಲೆಟ್ ಪೇಪರ್ ಕೊರತೆಯಿಂದ ತಮಗೆ ಮತದಾನ ಮಾಡುವ ಅವಕಾಶ ಇಲ್ಲದಂತಾಗಿದೆ. ಇದಕ್ಕೆ ಸೂಕ್ತ ಕ್ರಮವಹಿಸಬೇಕು ಎಂದು ಗುಂಪೊಂದು ಶುಕ್ಲಾ ಅವರಿಗೆ ಮನವಿ ಮಾಡಿತ್ತು. ಅದಕ್ಕೆ ಪ್ರತಿಕ್ರಿಯಿಸಿದ್ದ ಶುಕ್ಲಾ, ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಸೇರಿಸದಿದ್ದರೆ, ಅದು ನಿಮಗೆ ಹೇಗೆ ಸಮಸ್ಯೆಯಾಗುತ್ತದೆ? ಇಲ್ಲಿಯವರೆಗೆ ಮತ ಚಲಾಯಿಸಿ ಏನು ಪಡೆದುಕೊಂಡಿದ್ದೀರಿ? ನಾವು ಎಷ್ಟು ಭ್ರಷ್ಟ ನಾಯಕರನ್ನು ಹುಟ್ಟು ಹಾಕಿದ್ದೇವೆ? ಮತದಾನದ ಹಕ್ಕು ಮತ್ತು ಪ್ರಜಾಪ್ರಭುತ್ವವು ದೇಶದ ಬಹುದೊಡ್ಡ ಪ್ರಮಾದ ಎಂದು ನಾನು ಭಾವಿಸುತ್ತೇನೆ. ಚುನಾವಣಾ ಕರ್ತವ್ಯ ನಿರ್ವಹಿಸುವ ನೌಕರರಿಗೆ ಅಂಚೆ ಮತಪತ್ರಗಳಿದ್ದರೂ ಮತ ಚಲಾಯಿಸುವ ಸೌಲಭ್ಯ ಕಲ್ಪಿಸಲಾಗಿದೆ ಎಂದು ಹೇಳಿದ್ದರು.