ರಾಮ, ಕೃಷ್ಣರಂತೆ ಪ್ರಧಾನಿ ಮೋದಿ ದೇವರ ಅವತಾರದಲ್ಲಿದ್ದಾರೆ: ಕಮಲ್ ಪಟೇಲ್

Public TV
1 Min Read
Kamal Patel

ಭೋಪಾಲ್: ಪ್ರಧಾನಿ ನರೇಂದ್ರ ಮೋದಿ ಅವರು ದೇವರ ಅವತಾರದಲ್ಲಿದ್ದಾರೆ. ಕಾಂಗ್ರೆಸ್ ದೌರ್ಜನ್ಯ, ಭ್ರಷ್ಟಾಚಾರ ಮತ್ತು ಜಾತೀಯತೆ ಹೆಚ್ಚಾಗಿದ್ದು, ಅದಕ್ಕೆ ಅಂತ್ಯ ಹಾಡಲು ಮೋದಿ ಜನಿಸಿದ್ದಾರೆ ಎಂದು ಮಧ್ಯಪ್ರದೇಶದ ಕೃಷಿ ಸಚಿವ ಕಮಲ್ ಪಟೇಲ್ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸಿ ಸಾರ್ವಜನಿಕ ಕಲ್ಯಾಣ ಕಾರ್ಯಗಳನ್ನು ಜಾರಿಗೆ ತರುವ ಮೂಲಕ ಮೋದಿ ಅವರು ಭಾರತವನ್ನು ವಿಶ್ವಗುರುವನ್ನಾಗಿಸುವ ಹಾದಿಯಲ್ಲಿ ಸಾಗುತ್ತಿದ್ದಾರೆ. ಆದರೆ ಇದು ಸಾಮಾನ್ಯ ಮನುಷ್ಯರಿಗೆ ಅಸಾಧ್ಯ ಎಂದಿದ್ದಾರೆ. ಇದನ್ನೂ ಓದಿ: ಕಸದ ತೊಟ್ಟಿಯಲ್ಲಿ ಹೆಣ್ಣು ಮಗು ಪತ್ತೆ – ಸ್ಥಳೀಯರಿಂದ ರಕ್ಷಣೆ

narendra modi kashi vishwanath temple 1

ಭಾರತದಲ್ಲಿ ಬಿಕ್ಕಟ್ಟು ಮತ್ತು ದೌರ್ಜನ್ಯಗಳು ಹೆಚ್ಚಾದಾಗ ದೇವರು ಮಾನವನ ರೂಪದಲ್ಲಿ ಅವತಾರ ತಾಳುತ್ತಾನೆ ಎಂದು ನಮ್ಮ ಧರ್ಮ ಮತ್ತು ಯಲ್ಲಿ ಹೇಳಲಾಗುತ್ತದೆ. ಭಗವನ್ ರಾಮನು ಮಾನವನ ರೂಪ ತಾಳಿ, ರಾಕ್ಷಸನನ್ನು ಕೊಂದು ದುಷ್ಟಶಕ್ತಿಗಳಿಂದ ಜನರನ್ನು ರಕ್ಷಿಸಿ ರಾಮರಾಜ್ಯ ಸ್ಥಾಪಿಸಿದನು. ಹಾಗೆಯೇ ಕಂಸನ ದೌರ್ಜನ್ಯವನ್ನು ಅಡಗಿಸಲು ಶ್ರೀಕೃಷ್ಣ ಜನ್ಮ ತಾಳಿ ಅವನ ಕ್ರೌರ್ಯವನ್ನು ಕೊನೆಗೊಳಿಸಿ ಜನರನ್ನು ಸಂಕಷ್ಟದಿಂದ ಪಾರು ಮಾಡಿದನು. ಇದನ್ನೂ ಓದಿ: ಎಎಪಿ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್

NARENDRA MODI

 

ಅದೇ ರೀತಿ ಕಾಂಗ್ರೆಸ್ ದೌರ್ಜನ್ಯ, ಭ್ರಷ್ಟಾಚಾರ, ಜಾತೀಯತೆ ಹೆಚ್ಚಾದಾಗ ದೇಶದ ಸಂಸ್ಕೃತಿ ನಾಶವಾಗಿ, ವಾತವಾರಣ ಹಾಳಾಯಿತು. ಇದನ್ನು ಅಂತ್ಯಗೊಳಿಸಲು ನರೇಂದ್ರ ಮೋದಿ ಅವರು ಜನಿಸಿದರು. ದೇಶವನ್ನು ಭ್ರಷ್ಟಾಚಾರ ಮುಕ್ತಗೊಳಿಸಿ ಮೋದಿ ಅವರು ಇದೀಗ ಭಾರತದ ವಿಶ್ವಗುರು ಆಗಿದ್ದಾರೆ. ಇದನ್ನು ಸಾಮಾನ್ಯ ವ್ಯಕ್ತಿಗಳು ಸಾಧಿಸಲು ಸಾಧ್ಯವಿಲ್ಲ. ಸಾಧ್ಯವಾಗಿದ್ದರೆ 60 ವರ್ಷಗಳ ಹಿಂದೆಯೇ ಇದು ಸಂಭವಿಸಬೇಕಿತ್ತು. ಹೀಗಾಗಿ ನರೇಂದ್ರ ಮೋದಿ ಅವರು ಅವತಾರ ಪುರುಷರಾಗಿದ್ದಾರೆ. ಅಸಾಧ್ಯವಾದ ಕೆಲಸಗಳನ್ನು ಮಾಡಿದ್ದಾರೆ. ಇದನ್ನೂ ಓದಿ: ಪರಿಸ್ಥಿತಿ ಕಾದು ನೋಡಬೇಕು, ಕರ್ಫ್ಯೂ, ಲಾಕ್‍ಡೌನ್ ಹೇರಬಾರದು: ಸಿ.ಟಿ ರವಿ

Share This Article
Leave a Comment

Leave a Reply

Your email address will not be published. Required fields are marked *