LatestMain PostNational

3,419 ಕೋಟಿ ರೂ. ವಿದ್ಯುತ್ ಬಿಲ್ ಕಂಡು ಮಹಿಳೆಗೆ ಶಾಕ್ – ಮಾವ ಆಸ್ಪತ್ರೆಗೆ ದಾಖಲು

Advertisements

ಭೋಪಾಲ್: 3,419 ಕೋಟಿ ರೂಪಾಯಿಯಷ್ಟು ವಿದ್ಯುತ್ ಬಿಲ್ ಬಂದಿರುವುದನ್ನು ಕಂಡು ಮಹಿಳೆ ಶಾಕ್ ಆದರೆ, ಆಕೆಯ ಮಾವ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸಾಮಾನ್ಯವಾಗಿ ಗ್ರಾಹಕರಿಗೆ ವಿದ್ಯುತ್ ಇಲಾಖೆ ಆಗಾಗ್ಗೆ ಕರೆಂಟ್ ಬಿಲ್ ಮೂಲಕ ಶಾಕ್ ನೀಡುತ್ತಿರುತ್ತದೆ. ಮನೆಯಲ್ಲಿ ವಿದ್ಯುತ್ ಬಳಸದೇ ಇದ್ದರೂ ಲಕ್ಷಾಂತರ ರೂಪಾಯಿ ಕಟ್ಟಬೇಕೆಂಬ ಬಿಲ್ ಕಳುಹಿಸುವ ಘಟನೆಗಳು ಆಗಾಗ ನಡೆಯುತ್ತಲೆ ಇರುತ್ತದೆ. ಇದೀಗ ಮಧ್ಯಪ್ರದೇಶದ ಗ್ವಾಲಿಯರ್ ನಗರದ ಶಿವ್ ವಿಹಾರ್ ನಿವಾಸಿಯಾಗಿರುವ ಗುಪ್ತಾ ಅವರಿಗೆ 3,419 ಕೋಟಿ ರೂಪಾಯಿಯಷ್ಟು ವಿದ್ಯುತ್ ಬಿಲ್ ಕಳುಹಿಸಲಾಗಿದೆ. ಇದರಿಂದ ಆತಂಕಗೊಂಡ ಗುಪ್ತಾ ಅವರ ಕುಟುಂಬದ ಮಹಿಳೆಗೆ ಆಕೆಯ ನೆರೆಹೊರೆಯವರು ಸಮಾಧಾನ ಹೇಳಿದ್ದಾರೆ.

ಈ ವಿಚಾರವಾಗಿ ಜನರಿಂದ ಆಕ್ರೋಶಕ್ಕೆ ಗುರಿಯಾಗುತ್ತಿದ್ದಂತೆಯೇ ಸ್ಪಷ್ಟೀಕರಣ ನೀಡಿರುವ ಮಧ್ಯಪ್ರದೇಶ ಸರ್ಕಾರಿ ಸ್ವಾಮ್ಯದ ವಿದ್ಯುತ್ ಕಂಪೆನಿ (MPMKVVC), ಇದೊಂದು ‘ಮಾನವ ದೋಷ’ದಿಂದ ಉಂಟಾದ ಸಮಸ್ಯೆ ಎಂದು ತಿಳಿಸಿದ್ದು, ಕೂಡಲೇ ವಿದ್ಯುತ್ ಬಿಲ್ ಮೊತ್ತವನ್ನು ಸರಿಪಡಿಸಿದೆ. ಅಲ್ಲದೇ ಈಗ ಗುಪ್ತಾ ಕುಟುಂಬ ಕಟ್ಟಬೇಕಿರುವುದು 1,300 ರೂಪಾಯಿಗಳನ್ನು ಮಾತ್ರ ಎಂದು ಹೇಳಿದೆ. ಇದನ್ನೂ ಓದಿ: ಊರಿನ ಯಾರ ಮನೆಯಲ್ಲಿ ಸಮಸ್ಯೆ ಇದ್ರೂ ಸ್ಪಂದಿಸ್ತಿದ್ದ: ಪ್ರವೀಣ್ ಮಾವ ಕಣ್ಣೀರು

ಈ ಘಟನೆ ಕುರಿತಂತೆ ಪ್ರತಿಕ್ರಿಯಿಸಿರುವ ಗುಪ್ತಾ ಅವರ ಪತಿ ಸಂಜೀವ್ ಕಂಕಣೆ ಅವರು, ಜುಲೈನಲ್ಲಿ ಮನೆಯಲ್ಲಿ ಬಳಸಿದ್ದ ವಿದ್ಯುತ್‍ಗೆ ಬಂದಿರುವ ಬೃಹತ್ ಮೊತ್ತದ ಬಿಲ್ ಕಂಡು ನನ್ನ ತಂದೆ ಆಘಾತಕ್ಕೊಳಗಗಿದ್ದಾರೆ. ಅಲ್ಲದೇ ನನ್ನ ಪತ್ನಿ ಕೂಡ ಆಘಾತಕ್ಕೊಳಗಾಗಿದ್ದಾರೆ. ಜುಲೈ 20 ರಂದು ಬಿಡುಗಡೆಯಾದ ಬಿಲ್ ಅನ್ನು ಮಧ್ಯಪ್ರದೇಶ ಮಧ್ಯ ಕ್ಷೇತ್ರ ವಿದ್ಯುತ್ ವಿತರಣ ಕಂಪನಿಯ (ಎಂಪಿಎಂಕೆವಿವಿಸಿ) ಪೋರ್ಟಲ್ ಮೂಲಕ ಪರಿಶೀಲನೆಗೆ ಒಳಪಡಿಸಲಾಗಿತ್ತು. ಆದರೆ ಅದು ಸರಿಯಾಗಿದೆ ಎಂದು ತೋರಿಸಿತು. ನಂತರ ರಾಜ್ಯ ವಿದ್ಯುತ್ ಕಂಪೆನಿ ಬಿಲ್ ಅನ್ನು ಸರಿಪಡಿಸಿದೆ ಎಂದು ತಿಳಿಸಿದ್ದಾರೆ.

ಬೃಹತ್ ಮೊತ್ತದ ವಿದ್ಯುತ್ ಬಿಲ್ ಬರಲು ಮಾನವ ದೋಷ ಕಾರಣವಾಗಿದ್ದು, ಸಂಬಂಧಪಟ್ಟ ನೌಕರರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಎಂದು ಎಂಪಿಎಂಕೆವಿವಿಸಿ ಜನರಲ್ ಮ್ಯಾನೇಜರ್ ನಿತಿನ್ ಮಾಂಗ್ಲಿಕ್ ತಿಳಿಸಿದ್ದಾರೆ. ಇದನ್ನೂ ಓದಿ: ಯಡಿಯೂರಪ್ಪನವರು ಕೊಟ್ಟ ಮಾತನ್ನ ಉಳಿಸಿಕೊಳ್ಳಲಿಲ್ಲ: ಜಯಮೃತ್ಯುಂಜಯ ಸ್ವಾಮೀಜಿ ಅಸಮಾಧಾನ

ನಮ್ಮ ಉದ್ಯೋಗಿಯು ಬಳಕೆಯಾದ ಯುನಿಟ್ ಜಾಗದಲ್ಲಿ ಗ್ರಾಹಕ ಸಂಖ್ಯೆಯನ್ನು ಸಾಫ್ಟ್‍ವೇರ್‌ನಲ್ಲಿ ನಮೂದಿಸಿದ್ದಾರೆ. ಇದರಿಂದಾಗಿ ದೊಡ್ಡ ಮೊತ್ತದ ಬಿಲ್ ಸೃಷ್ಟಿಯಾಗಿದೆ. ಸರಿಯಾದ ಬಿಲ್ ಮೊತ್ತ 1,300 ರೂ ಅನ್ನು ವಿದ್ಯುತ್ ಗ್ರಾಹಕರಿಗೆ ಈಗ ನೀಡಲಾಗಿದೆ ಎಂದು ಹೇಳಿದ್ದಾರೆ.

Live Tv

Leave a Reply

Your email address will not be published.

Back to top button