3ನೇ ಪತ್ನಿಯಿಂದ ಬರ್ಬರ ಹತ್ಯೆಗೀಡಾದ ಪತಿ – ಮೃತದೇಹನ ಕಂಬಳಿಯಲ್ಲಿ ಸುತ್ತಿ ಬಾವಿಗೆ ಎಸೆದ್ರು

Public TV
1 Min Read
madhya pradesh murder

– ಗಂಡನ ದೇಹ ಪತ್ತೆಮಾಡಿದ 2ನೇ ಪತ್ನಿ

ಭೋಪಾಲ್: ವ್ಯಕ್ತಿಯೊಬ್ಬ ತನ್ನ 3ನೇ ಪತ್ನಿಯಿಂದ ಹತ್ಯೆಗೀಡಾದ ಘಟನೆ ಮಧ್ಯಪ್ರದೇಶದ (Madhya Pradesh) ಅನುಪ್ಪುರ ಜಿಲ್ಲೆಯ ಸಕರಿಯಾ ಗ್ರಾಮದಲ್ಲಿ ನಡೆದಿದೆ.

ಭೈಯಲಾಲ್ ರಾಜಕ್ (60) ಕೊಲೆಯಾದ ವ್ಯಕ್ತಿ. ಈತ ಮೂರು ಮದುವೆಯಾಗಿದ್ದ. ಮೊದಲ ಹೆಂಡತಿ ಮನೆಬಿಟ್ಟು ಹೋಗಿದ್ದಳು. ಎರಡನೇ ಪತ್ನಿ ಗುಡ್ಡಿ ಬಾಯಿಗೆ ಮಕ್ಕಳಿರಲಿಲ್ಲ. ತನ್ನ ಕುಟುಂಬಕ್ಕೆ ಉತ್ತರಾಧಿಕಾರಿ ಬೇಕೆಂಬ ಆಶಯದಿಂದ 2ನೇ ಹೆಂಡತಿಯ ತಂಗಿಯನ್ನೇ (ಮುನ್ನಿ) ಮೂರನೇ ಮದುವೆಯಾಗಿದ್ದ. ಭೈಯಲಾಲ್‌ ಮತ್ತು 3ನೇ ಪತ್ನಿ ಮುನ್ನಿ ದಂಪತಿಗೆ ಇಬ್ಬರು ಮಕ್ಕಳಿದ್ದರು. ಆದರೆ, ಸ್ಥಳೀಯ ವ್ಯಾಪಾರಿ ನಾರಾಯಣ ದಾಸ್‌ ಎಂಬಾತನ ಜೊತೆ ಮುನ್ನಿ ಅಕ್ರಮ ಸಂಬಂಧ ಹೊಂದಿದ್ದಳು. ಇದನ್ನೂ ಓದಿ: ಬರ್ತ್‌ಡೇ ಪಾರ್ಟಿಗೆ ಕರೆದೊಯ್ದು ಪರಿಚಯಸ್ಥರಿಂದಲೆ ಮಹಿಳೆಯ ಗ್ಯಾಂಗ್‌ ರೇಪ್‌

ಮುನ್ನಿ ಮತ್ತು ನಾರಾಯಣ ದಾಸ್‌ ತಮ್ಮಿಬ್ಬರ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಭೈಯಲಾಲ್‌ನನ್ನು ಮುಗಿಸಲು ಸಂಚು ರೂಪಿಸಿದ್ದರು. ಕೊಲೆ ಮಾಡಲು ಕಾರ್ಮಿಕನೊಬ್ಬನಿಗೆ ಸುಪಾರಿ ಕೊಟ್ಟಿದ್ದರು. ಮನೆಯಲ್ಲಿ ಭೈಯಲಾಲ್‌ ಮಲಗಿದ್ದಾಗ ಕಬ್ಬಿಣದ ರಾಡ್‌ನಿಂದ ತಲೆಗೆ ಹೊಡೆದು ಹತ್ಯೆ ಮಾಡಿದರು. ಬಳಿಕ ಮೃತದೇಹವನ್ನು ಕಂಬಳಿಯಿಂದ ಸುತ್ತಿ ಬಾವಿಯೊಂದಕ್ಕೆ ಎಸೆದಿದ್ದರು.

ಮರುದಿನ ಬಾವಿಯಲ್ಲಿ ಏನೋ ತೇಲುತ್ತಿದೆ ಎಂದು ಭೈಯಲಾಲ್‌ನ ಎರಡನೇ ಪತ್ನಿ ಗುರುತಿಸಿದಳು. ತಕ್ಷಣ ಸ್ಥಳೀಯರಿಗೆ ತಿಳಿಸಿದಳು. ಬಳಿಕ ಪೊಲೀಸರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಲಾಯಿತು. ಮೃತದೇಹವನ್ನು ಮೇಲೆತ್ತಿದಾಗ ಕೊಲೆಯಾಗಿರುವುದು ತಿಳಿದುಬಂತು. ಮರಣೋತ್ತರ ಪರೀಕ್ಷೆಯಲ್ಲಿ ವ್ಯಕ್ತಿ ಕೊಲೆಯಾಗಿರುವುದು ದೃಢಪಟ್ಟಿತು. ಇದನ್ನೂ ಓದಿ: 17ರ ಹುಡುಗನ ಜೊತೆ 30ರ ಆಂಟಿ ಚಕ್ಕಂದ – ಏಕಾಂತದಲ್ಲಿದ್ದಾಗ ನೋಡಿದ ಬಾಲಕಿ ಕತ್ತು ಹಿಸುಕಿ ಕೊಲೆ

ಕೊಲೆಯಾದ 36 ಗಂಟೆಗಳ ಒಳಗೆ ಕೋಟ್ವಾಲಿ ಪೊಲೀಸರು ಈ ಪ್ರಕರಣವನ್ನು ಭೇದಿಸಿದರು. ಮೂರನೇ ಪತ್ನಿಯ ಅಕ್ರಮ ಸಂಬಂಧ ಕಾರಣಕ್ಕೆ ಕೊಲೆ ನಡೆದಿರುವುದು ಪೊಲೀಸರ ತನಿಖೆಯಿಂದ ಬಯಲಾಗಿದೆ.

Share This Article