ಪೊಲೀಸರು ಬಂಧಿಸಲು ಹೋದಾಗ ನದಿಗೆ ಹಾರಿ ಆರೋಪಿ ಎಸ್ಕೇಪ್

Public TV
1 Min Read
MADHYAPRADESH MAN

ಭೋಪಾಲ್: ಆರೋಪಿಯೊಬ್ಬ ಪೊಲೀಸರ ಬಂಧನದಿಂದ ತಪ್ಪಿಸಿಕೊಳ್ಳಲು ನದಿ ಹಾರಿದ ಪ್ರಕರಣವೊಂದು ಮಧ್ಯಪ್ರದೇಶದಲ್ಲಿ (Madhyapradesh)  ನಡೆದಿದೆ.

ಈ ಘಟನೆ ಮಧ್ಯಪ್ರದೇಶದ ಶಿಯೋಪುರ್ ಪ್ರದೇಶದಲ್ಲಿ ಭಾನುವಾರ ಸಂಜೆ ನಡೆದಿದೆ. ಆರೋಪಿಯನ್ನು ಖಾನ್ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: 19 ಬಸ್ ಜೊತೆಗೆ ಲಕ್ಷ-ಲಕ್ಷ ಹಣವೂ ಬೆಂಕಿಗಾಹುತಿ ಆಯ್ತಾ? – ಪೊಲೀಸರು ಹೇಳಿದ್ದೇನು?

ಖಾನ್ ಡ್ರಗ್ಸ್ ಮಾರಾಟ ಮಾಡುತ್ತಿದ್ದಾನೆ ಎಂಬ ಆರೋಪ ಹೊರಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಭಾನುವಾರ ಮಧ್ಯಾಹ್ನದ ಬಳಿಕ ಆತನನ್ನು ಭಮದಿಸಲೆಂದು ತೆರಳಿದ್ದಾರೆ. ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಖಾನ್ ನೇರವಾಗಿ ನದಿಗೆ ಜಿಗಿದಿದ್ದಾನೆ. ಅಲ್ಲದೆ ಬೇರೆಕಡೆ ಈಜುತ್ತಾ ತೆರಳಿದ್ದಾನೆ. ಈ ಮೂಲಕ ಅಧಿಕಾರಿಗಳ ಕೈಯಿಂದ ತಪ್ಪಿಸಿಕೊಂಡಿದ್ದಾನೆ.

ಸದ್ಯ ಆರೋಪಿ ನದಿಗೆ ಜಿಗಿದು ಈಜುತ್ತಾ ತಪ್ಪಿಸಿಕೊಳ್ಳುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಪೊಲೀಸರು ಪದೇ ಪದೇ ಮನವಿ ಮಾಡಿದರೂ ಆರೋಪಿ ನದಿಯಿಂದ ಹೊರಬರಲು ನಿರಾಕರಿಸಿರುವುದನ್ನು ನಾವು ವೀಡಿಯೋದಲ್ಲಿ ಕಾಣಬಹುದಾಗಿದೆ.

ಖಾನ್, ಮಾದಕವಸ್ತು ಮಾರಾಟದ ಆರೋಪ ಹೊತ್ತಿದ್ದಾನೆ. ಅಲ್ಲದೆ ಈತನ ಮೇಲೆ ಸೆಕ್ಷನ್ 110 (ಪ್ರಚೋದನೆಯ ಶಿಕ್ಷೆ) ಸೇರಿದಂತೆ ಹಲವಾರು ಇತರ ಕೆಸ್‍ಗಳು ದಾಖಲಾಗಿವೆ. ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕ್ರಿಮಿನಲ್‍ಗಳನ್ನು ಬಂಧಿಸಲು ಪ್ರಯತ್ನಿಸಲಾಗುತ್ತಿದೆ. ಸದ್ಯ ಖಾನ್‍ಗಾಗಿ ಹುಡುಕಾಟ ಮುಂದುವರಿದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article