ಭೊಪಾಲ್: ಪತ್ನಿಯ ಪೊಲೀಸ್ ಸಮವಸ್ತ್ರವನ್ನು ತನ್ನ ಗರ್ಲ್ ಫ್ರೆಂಡ್‍ಗೆ ನೀಡಿ ದರೋಡೆ ಮಾಡಿಸುತ್ತಿದ್ದ ಅಚ್ಚರಿಯ ಪ್ರಕರಣ ಬೆಳಕಿಗೆ ಬಂದಿದೆ.
ಮಹಿಳಾ ಪೊಲೀಸ್ ಇನ್ಸ್ ಪೆಕ್ಟರ್ ಪತಿ ಹಾಗೂ ಆತನ ಗರ್ಲ್ ಫ್ರೆಂಡ್ ಇಬ್ಬರೂ ಸೇರಿ ಪೊಲೀಸ್ ಎಂದು ಹೇಳಿಕೊಂಡು ದರೋಡೆ ಮಾಡುತ್ತಿದ್ದ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ. ಇದೀಗ ಪೊಲೀಸ್ ಪೇದೆ ಪತಿ ಹಾಗೂ ಆತನ ಗರ್ಲ್ ಫ್ರೆಂಡ್ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದ್ದು, ಆರೋಪಿ ಮಹಿಳೆಯು ಪೊಲೀಸ್ ಎಂದು ಪೋಸ್ ನೀಡಿ ದರೋಡೆ ಮಾಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಆಶ್ಚರ್ಯವೆಂದರೆ, ಆಕೆಯ ಬಾಯ್ ಫ್ರೆಂಡ್ ಸ್ವತಃ ತನ್ನ ಪತ್ನಿಯ ಪೊಲೀಸ್ ಸಮವಸ್ತ್ರವನ್ನು ನೀಡಿ ದರೋಡೆ ಮಾಡಿಸುತ್ತಿದ್ದ ಎಂದು ತಿಳಿದು ಬಂದಿದೆ. ಆರೋಪಿಗಳಿಂದ ನಕಲಿ ಪೊಲೀಸ್ ಐಡಿಯನ್ನು ವಶಪಡಿಸಿಕೊಳ್ಳಲಾಗಿದ್ದು, ಮಹಿಳಾ ಆರೋಪಿಯ ವಿವರವನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.