ಭೋಪಾಲ್: ಜಗಳವಾಡಿ ಕೋಪಗೊಂಡ ಪತಿಯೊಬ್ಬ ವಾಟ್ಸಪ್ ವಿಡಿಯೋ ಕಾಲ್ ಮಾಡಿ ಪತ್ನಿಯ ಮುಂದೆಯೇ ನೇಣಿಗೆ ಶರಣಾದ ಘಟನೆ ಮಧ್ಯ ಪ್ರದೇಶದ ಭೋಪಾಲ್‍ನಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಪತಿಯನ್ನು 35 ವರ್ಷದ ಜೆಹಂಗೀರಾಬಾದ್ ನಿವಾಸಿ ಉಮೇಶ್ ಎಂದು ತಿಳಿದು ಬಂದಿದ್ದು, ತನ್ನ ಪತ್ನಿ ಆರತಿ ಕೃಷ್ಣಾ ಜನ್ಮಾಷ್ಟಮಿಯನ್ನು ನಮ್ಮ ತವರು ಮನೆಯಲ್ಲಿ ಮಾಡುತ್ತೇನೆ ಎಂದು ಹೇಳಿದ್ದಾಳೆ. ಇದನ್ನು ಉಮೇಶ್ ಒಪ್ಪಿರಲಿಲ್ಲ. ಈ ವಿಚಾರಕ್ಕೆ ಇಬ್ಬರ ನಡುವೆ ಜಗಳ ಆರಂಭವಾಗಿದೆ.
ಪತ್ನಿ ಆರತಿ ನಾನು ರಾಖಿ ಹಬ್ಬಕ್ಕೆ ನಮ್ಮ ತವರು ಮನೆಗೆ ಹೋಗಿಲ್ಲ. ಕೃಷ್ಣಾ ಜನ್ಮಾಷ್ಟಮಿಗೆ ಹೋಗಲೇ ಬೇಕು ಎಂದು ಹಠ ಹಿಡಿದಿದ್ದಾಳೆ. ಆರಂಭದಲ್ಲಿ ಈಕೆಯ ಮಾತಿಗೆ ಒಪ್ಪದ ಉಮೇಶ್ ಒಲ್ಲದ ಮನಸ್ಸಿನಿಂದಲೇ ತನ್ನ ಇಬ್ಬರು ಮಕ್ಕಳು ಮತ್ತು ಪತ್ನಿಯನ್ನು ಬೆರೇಶಿಯಾದಲ್ಲಿರುವ ತನ್ನ ಅತ್ತೆಯ ಮನೆಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಇಬ್ಬರ ನಡುವೆ ಜಗಳವಾಗಿದೆ. ನಂತರ ಉಮೇಶ್ ತನ್ನ ಏಳು ವರ್ಷದ ಮಗನನ್ನು ಕರೆದುಕೊಂಡು ವಾಪಸ್ ಮನೆಗೆ ಬಂದಿದ್ದಾನೆ.
ಪತ್ನಿ ಜೊತೆ ಜಗಳವಾಡಿಕೊಂಡು ಮನೆಗೆ ವಾಪಸ್ ಬಂದ ಉಮೇಶ್ ಮಧ್ಯರಾತ್ರಿ ಪತ್ನಿ ಆರತಿಗೆ ವಿಡಿಯೋ ಕಾಲ್ ಮಾಡಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾನೆ. ನಂತರ ಪತ್ನಿ ಮಾತನಾಡಿದರೂ ಕೇಳಿಸಿಕೊಳ್ಳದ ಉಮೇಶ್ ನೇಣು ಹಾಕಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ವಿಷಯ ತಿಳಿದ ತಕ್ಷಣ ಆರತಿ ಮನೆಯ ಪಕ್ಕದಲ್ಲೇ ವಾಸವಿದ್ದ ಉಮೇಶ್‍ನ ಸಹೋದರ ರಾಜುಗೆ ಕಾಲ್ ಮಾಡಿದ್ದಾಳೆ. ಆದರೆ ರಾಜು ಬಂದು ನೋಡುವುದರಲ್ಲಿ ಉಮೇಶ್ ನೇಣು ಹಾಕಿಕೊಂಡಿದ್ದನು. ಉಮೇಶ್ ರೋಶ್‍ಪುರದಲ್ಲಿ ಚಾಟ್ ಅಂಗಡಿ ಇಟ್ಟಿಕೊಂಡಿದ್ದು ನಷ್ಟ ಅನುಭವಿಸಿದ್ದನು. ಹಣದ ಸಮಸ್ಯೆ ವಿಚಾರವಾಗಿ ಗಂಡ ಹೆಂಡತಿಯ ನಡುವೆ ಯಾವಾಗಲು ಜಗಳ ನಡೆಯುತಿತ್ತು ಎಂದು ಪೊಲೀಸರು ಹೇಳಿದ್ದಾರೆ.