ಭೋಪಾಲ್: ಅತ್ಯಾಚಾರಕ್ಕೀಡಾದ ಸಂತ್ರಸ್ತೆಯನ್ನು ಕೊಲ್ಲದೇ ಜೀವಂತವಾಗಿ ಉಳಿಸಿ ದಯೆ ತೋರಿದ್ದಾನೆ ಎಂಬ ಹಿನ್ನೆಲೆಯಲ್ಲಿ ಮಧ್ಯಪ್ರದೇಶ ಹೈಕೋರ್ಟಿನ (Madhya Pradesh High Court) ಇಂದೋರ್ ಪೀಠವು ಇತ್ತೀಚೆಗೆ ಅತ್ಯಾಚಾರ ಅಪರಾಧಿಯೋರ್ವನಿಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು 20 ವರ್ಷಗಳ ಕಠಿಣ ಜೈಲು (Jail) ಶಿಕ್ಷೆಗೆ ಇಳಿಸಿದೆ.
ನ್ಯಾಯಮೂರ್ತಿಗಳಾದ (Justices) ಸುಬೋಧ್ ಅಭ್ಯಂಕರ್ ಮತ್ತು ಸತ್ಯೇಂದ್ರ ಕುಮಾರ್ ಸಿಂಗ್ ಅವರಿದ್ದ ದ್ವಿಸದಸ್ಯ ಪೀಠವು ಶಿಕ್ಷೆಯ ಪ್ರಮಾಣವನ್ನು ಕಡಿತಗೊಳಿಸಿ ತೀರ್ಪು ನೀಡಿದೆ. ಇದನ್ನೂ ಓದಿ: ನಿನ್ಮನೆ ಕಾಯ್ವಾಗ ನಿಂಗೆ NDRF ಯಾವ್ದು, SDRF ಯಾವ್ದು ಗೊತ್ತಿಲ್ಲ – ಅಧಿಕಾರಿ ವಿರುದ್ಧ ಸೋಮಣ್ಣ ಗರಂ
ಮೇಲ್ಮನವಿಯನ್ನು ಭಾಗಶಃ ಅನುಮತಿಸಿದ ದ್ವಿಸದಸ್ಯ ಪೀಠವು, ಮಹಿಳೆಯರ ಘನತೆಯ ಬಗ್ಗೆ ಗೌರವವಿಲ್ಲ ಎಂದು ತೋರಿಸುವ 4 ವರ್ಷ ವಯಸ್ಸಿನ ಹೆಣ್ಣುಮಗುವಿನ ಮೇಲೆ ಪೈಶಾಚಿಕ ಕೃತ್ಯ ಎಸಗಿರುವುದು ರಾಕ್ಷಸ ಮನಸ್ಥಿತಿಯನ್ನು ತೋರಿಸುತ್ತದೆ. ಆದರೂ ಜೀವಾವಧಿ ಶಿಕ್ಷೆಗೆ ಈ ಪ್ರಕರಣ ಅರ್ಹವಲ್ಲ. ಸಂತ್ರಸ್ತೆಯನ್ನು ಜೀವಂತ ಬಿಟ್ಟು ದಯೆ ತೋರಿದ್ದಾನೆ. ಆ ಕಾರಣಕ್ಕೆ ಜೀವಾವಧಿ ಶಿಕ್ಷೆಯನ್ನು 20 ವರ್ಷಗಳ ಕಠಿಣ ಜೈಲು ಶಿಕ್ಷೆಗೆ ಇಳಿಸಬಹುದು ಎಂದು ಹೇಳಿದೆ.
ಕ್ರಿಮಿನಲ್ ಮೇಲ್ಮನವಿಗೆ ಭಾಗಶಃ ಅನುಮತಿ ನೀಡಲಾಗಿದ್ದು ಮೇಲ್ಮನವಿದಾರರು ಕಾನೂನಿನ (Law) ಪ್ರಕಾರ 20 ವರ್ಷಗಳ ಜೈಲುವಾಸ ಅನುಭವಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ. ಇದನ್ನೂ ಓದಿ: ವೇದಿಕೆ ಮೇಲೆಯೇ ನೃತ್ಯಗಾರ್ತಿಯೊಂದಿಗೆ ರೊಮ್ಯಾನ್ಸ್ – ಪುರಸಭೆ ಕಾರ್ಯಕರ್ತ ಅಮಾನತು
12 ವರ್ಷದೊಳಗಿನ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಕ್ಕಾಗಿ ತನ್ನನ್ನು ದೋಷಿ ಎಂದು ಇಂದೋರ್‌ನ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿದಾರ ರಾಮು ಅಲಿಯಾಸ್ ರಾಮ್‌ಸಿಂಗ್ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯ ಈ ತೀರ್ಪು ನೀಡಿದೆ.
ಪ್ರಕರಣದಲ್ಲಿ ಅಪರಾಧಿಯು ಸಂತ್ರಸ್ತೆ ಗುಡಿಸಲಿನ ಬಳಿ ಟೆಂಟ್‌ನಲ್ಲಿ ವಾಸಿಸುತ್ತಿದ್ದನು. ಒಂದು ರೂಪಾಯಿ ಕೊಡುವ ನೆಪದಲ್ಲಿ ಸಂತ್ರಸ್ತೆಯನ್ನು ಆರೋಪಿ ಟೆಂಟ್‌ಗೆ ಕರೆದಿದ್ದಾನೆ. ಅಲ್ಲಿಯೇ ಬಾಲಕಿ ಮೇಲೆ ದೌರ್ಜನ್ಯ ಎಸಗಿದ್ದಾನೆ. ಬಳಿಕ ಸಂತ್ರಸ್ತೆ ಕೂಗು ಕೇಳಿ ಆಕೆಯ ತಂದೆ ಹಾಗೂ ಅಜ್ಜಿ ಸಹಾಯಕ್ಕೆ ಧಾವಿಸಿದ್ದಾರೆ. ಟೆಂಟ್ ಪ್ರವೇಶಿಸಿದಾಗ ಮಗು ರಕ್ತಸ್ರಾವವಾಗಿ ಬಿದ್ದಿರುವುದು ಹಾಗೂ ಅಪರಾಧಿ ಬೆತ್ತಲೆಯಾಗಿರುವುದನ್ನು ಕಂಡಿದ್ದಾರೆ. ಬಳಿಕ ಆತ ಓಡಿಹೋಗಿದ್ದಾನೆ. ನಂತರ ಬಾಲಕಿ ಇಡೀ ಘಟನೆಯ ಬಗ್ಗೆ ತಂದೆಗೆ ತಿಳಿಸಿದ್ದು, ಆಕೆಯನ್ನು ಪರೀಕ್ಷೆಗಾಗಿ ಆಸ್ಪತ್ರೆಗೆ (Hospital) ಕರೆದೊಯ್ದಾಗ, ವೈದ್ಯರು ಅತ್ಯಾಚಾರ ಆಗಿರುವುದನ್ನು ಖಚಿತಪಡಿಸಿದ್ದರು.
ಬಳಿಕ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆ 1989ರ ಸೆಕ್ಷನ್ 3(1)12ರ (SCST Act 1989) ಭಾರತೀಯ ದಂಡ ಸಂಹಿತೆಯ (IPC) ಅಡಿಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ನಂತರ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ಇದು ವಿಚಾರಣಾ ನ್ಯಾಯಾಲಯಕ್ಕೆ ಬದ್ಧವಾಗಿತ್ತು. ಸಾಕ್ಷ್ಯವನ್ನು ದಾಖಲಿಸಿದ ನಂತರ ಮೇಲ್ಮನವಿದಾರನನ್ನು ಅಪರಾಧಿ ಎಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.