ಭೋಪಾಲ್: ಇಂದು ದೇಶಾದ್ಯಂತ ಸ್ವಾತಂತ್ರ್ಯ ದಿನವನ್ನು (Independence day) ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಅಂತೆಯೇ ಮಧ್ಯಪ್ರದೇಶದ ರೈಸನ್‍ನಲ್ಲಿ ನಡೆದ ಸ್ವಾತಂತ್ರ್ಯೋತ್ವದ ಅಂಗವಾಗಿ ನಡೆದ ಭಾಷಣದ ವೇಳೆ ಆರೋಗ್ಯ ಸಚಿವ ಪ್ರಭುರಾಮ್ ಚೌಧರಿ (Prabhuram Chaudhary) ಮೂರ್ಛೆ ಹೋಗಿ ಕುಸಿದು ಬಿದ್ದಿದ್ದಾರೆ.
Advertisement
ಕೂಡಲೇ ಸಚಿವರನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ಪ್ರಾಥಮಿಕ ಚಿಕಿತ್ಸೆಯ ಬಳಿಕ ಅಲ್ಲಿಂದ ಭೋಪಾಲ್‍ನಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸೂಚಿಸಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿದ ವೈದ್ಯರು, ಹೃದಯಾಘಾತವಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹುಟ್ಟೋದು ಸಾಯೋದು ಎರಡೇ ಸತ್ಯ- ಸ್ಪಂದನಾ ಸಾವಿನ ಬಗ್ಗೆ ರಾಘಣ್ಣ ಪ್ರತಿಕ್ರಿಯೆ
Advertisement
Advertisement
ಈ ಸಂಬಂಧ ರೈಸನ್ ಎಸ್‍ಪಿ ವಿಕಾಸ್ ಸೆಹ್ವಾಲ್ ಪ್ರತಿಕ್ರಿಯಿಸಿ, ಪಥಸಂಚಲನದ ವೇಳೆ ಸಚಿವರು ಸುಮಾರು ಒಂದೂವರೆ ಗಂಟೆಗಳ ಕಾಲ ನಿಂತುಕೊಂಡೇ ಇದ್ದರು. ಆ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಸುಸ್ತಾದ ಅವರು ಕುಸಿದು ಬಿದ್ದರು. ಕೂಡಲೇ ಅವರನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ವೈದ್ಯರು ಪರೀಕ್ಷೆ ನಡೆಸಿದಾಗ ಬಿಪಿ (BP) ಜಾಸ್ತಿಯಾಗಿದೆ ಹಾಗೂ ಶುಗರ್ ಲೆವೆಲ್ (Sugar Level) ಕಡಿಮೆಯಾಗಿರುವುದು ಬೆಳಕಿಗೆ ಬಂದಿದೆ. ನಂತರ ಅಲ್ಲಿ ಟ್ರೀಟ್‍ಮೆಂಟ್ ಕೊಡಿಸಿದ ಬಳಿಕ ಅವರನ್ನು ಭೋಪಾಲ್‍ನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಸಚಿವರು ಸದ್ಯ ಭೋಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.
Advertisement
Web Stories