ಭೋಪಾಲ್: ಮಧ್ಯಪ್ರದೇಶದ (Madhya Pradesh) ಆರೋಗ್ಯ ಇಲಾಖೆಯು (Health Department) ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಶುಶ್ರೂಷಕಿಯೊಬ್ಬಳನ್ನ (Nurse) ಆಕೆ ಸಾವನ್ನಪ್ಪಿದ 65 ದಿನಗಳ ನಂತರ ವರ್ಗಾವಣೆ ಮಾಡಿರುವ ಗೊಂದಲ ಮೂಡಿಸಿರುವ ಘಟನೆ ಬೆಳಕಿಗೆ ಬಂದಿದೆ.
Advertisement
ರಾಷ್ಟ್ರೀಯ ಆರೋಗ್ಯ ಮಿಷನ್ ಭಾಗವಾಗಿ (National Health Mission) ಫೆಬ್ರವರಿ 23ರಂದು ಶುಶ್ರೂಷಕಿಯರ ವರ್ಗಾವಣೆ ಪಟ್ಟಿ ಬಿಡುಗಡೆ ಮಾಡಿದ್ದು, ಅದರಲ್ಲಿ ಶಿವಪುರಿ ಜಿಲ್ಲೆಯ ನರ್ಸ್ ಹೆಸರೂ ಸೇರಿದೆ. ಬದುಕಿದ್ದಾಗ ಶಕ್ತಿ ಮೀರಿ ಪ್ರಯತ್ನಿಸಿದರೂ ವರ್ಗಾವಣೆ ಆಗಿರಲಿಲ್ಲ. ಇದೀಗ ಆಕೆ ಮೃತಪಟ್ಟ 65 ದಿನಗಳ ನಂತರ ವರ್ಗಾವಣೆ ಮಾಡಿರುವುದು ಅಚ್ಚರಿ ಮೂಡಿಸಿದೆ. ಇದನ್ನೂ ಓದಿ: ವೀರಶೈವ ಲಿಂಗಾಯತರು ಬಿಜೆಪಿಗೇ ಮತ ಹಾಕಿ ಗೆಲ್ಲಿಸಿ – ಬಿಎಸ್‌ವೈ ಮನವಿ
Advertisement
ಶಿವಪುರಿ ನರ್ಸ್ ಅನ್ನು ಬೇತುಲ್ ನಿವಾಸಿ ತನ್ವಿ ದಾಬಂದೆ (28) ಎಂದು ಗುರುತಿಸಲಾಗಿದ್ದು, ಆಕೆ ಮರಣದ ನಂತರ ರೈಸನ್‌ಗೆ ವರ್ಗಾಯಿಸಲಾಗಿದೆ. ಇದನ್ನೂ ಓದಿ: ಪಾಕಿಸ್ತಾನದ ಮೊದಲ ತೃತೀಯಲಿಂಗಿ ಸುದ್ದಿ ನಿರೂಪಕಿ ಮೇಲೆ ಗುಂಡಿನ ದಾಳಿ
Advertisement
Advertisement
ಮೂಲಗಳ ಪ್ರಕಾರ, ನರ್ಸ್ ಆಗಿದ್ದ ಯುವತಿ 2022ರ ಡಿಸೆಂಬರ್ 20ರಂದು ಆತ್ಮಹತ್ಯೆ ಮಾಡಿಕೊಂಡಿದ್ದಳು. ವಾರ್ಡ್ ಬಾಯ್ ಈಕೆಯನ್ನು ಡ್ಯೂಟಿಗೆ ಬರುವಂತೆ ಕರೆಯಲು ಹೋದಾಗ ಘಟನೆ ಬೆಳಕಿಗೆ ಬಂದಿತ್ತು. ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿ ತನ್ನ ಕೋಣೆಯಲ್ಲಿ ಬಿದ್ದಿದ್ದಳು. ಅದೇ ಕೋಣೆಯಲ್ಲಿ ನಿದ್ರೆ ಮಾತ್ರೆಗಳೂ ಪತ್ತೆಯಾಗಿದ್ದವು. ನಂತರ ಆಕೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೊನೆಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಳು ಎಂದು ಪೊಲೀಸರು ತನಿಖೆ ನಂತರ ತಿಳಿಸಿದ್ದರು.