ವಿಶ್ವದಲ್ಲೇ ಎತ್ತರದ ಆದಿಗುರು ಶಂಕರಚಾರ್ಯರ ಪ್ರತಿಮೆ ಸ್ಥಾಪನೆ!

Public TV
1 Min Read
shankaracharya mp

ಭೋಪಾಲ್: ಜಗತ್ತಿಗೆ ವೇದಾಂತದ ಸಾರವನ್ನು ಸಾರಿದ ಆದಿಗುರು ಶಂಕರಚಾರ್ಯರ ಪ್ರತಿಮೆ ನಿರ್ಮಾಣ ಮಾಡಲು ಮಧ್ಯಪ್ರದೇಶದ ಸರ್ಕಾರ ನಿರ್ಧರಿಸಿದ್ದು, ಇದು ವಿಶ್ವದಲ್ಲಿಯೇ ಅತ್ಯಂತ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆ ಪಡೆಯಲಿದೆ.

ಆದಿಗುರು ಶಂಕರ ಚಾರ್ಯರ ಪ್ರತಿಮೆಯು 108 ಅಡಿ ಎತ್ತರವಿದ್ದು, ಈ 108 ಅಡಿ ಎತ್ತರದ ಪ್ರತಿಮೆಯನ್ನು ಮಿಶ್ರ ಲೋಹ ಬಳಸಿ ನಿರ್ಮಿಸಲಾಗುತ್ತದೆ. ಇಡೀ ಯೋಜನೆಯನ್ನು 2000 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಸರ್ಕಾರ ಚಿಂತನೆ ನಡೆಸಿದೆ.

shankaracharya

ಈ ಸಂಬಂಧ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಕಳೆದ ವಾರ ಆಚಾರ್ಯ ಶಂಕರ್ ಸಾಂಸ್ಕೃತಿಕ ಏಕತಾ ನ್ಯಾಸ್‍ನ ಟ್ರಸ್ಟಿಗಳ ಮಂಡಳಿಯ ಸಭೆಯಲ್ಲಿ ಯೋಜನೆಯ ಕುರಿತು ಚರ್ಚಿಸಿದ್ದರು. ಸ್ವಾಮಿ ಅವೇಧಶಾನಂದ ಗಿರಿ ಜಿ ಮಹಾರಾಜ್ ಸೇರಿದಂತೆ ಪ್ರಮುಖ ಸಂತರು ಮತ್ತು ಟ್ರಸ್ಟ್ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸಿಎಂ ಮಾತನಾಡಿ ಓಂಕಾರೇಶ್ವರದಲ್ಲಿ ಆದಿ ಶಂಕರ ಮ್ಯೂಸಿಯಂ ಮತ್ತು ಅಂತರಾಷ್ಟ್ರೀಯ ವೇದಾಂತ ಸಂಸ್ಥಾನದ 108 ಅಡಿ ಬಹುಲೋಹದ ಪ್ರತಿಮೆ ಸ್ಥಾಪಿಸುವ ಯೋಜನೆಯು ರಾಜ್ಯವನ್ನು ಪ್ರಪಂಚಕ್ಕೆ ಪರಿಚಯಿಸುತ್ತದೆ ಎಂದು ಅಭಿಲಾಷೆ ವ್ಯಕ್ತಪಡಿಸಿದರು.

shivraj singh chouhan

ಯೋಜನೆಯಲ್ಲಿ ಏನಿದೆ?: ಮಧ್ಯಪ್ರದೇಶದ ಖಂಡ್ವಾ ಜಿಲ್ಲೆಯ ಓಂಕಾರೇಶ್ವರದಲ್ಲಿ ನರ್ಮದಾ ನದಿ ತೀರದಲ್ಲಿ ಸುಮಾರು 18.5 ಎಕರೆ ಪ್ರದೇಶದಲ್ಲಿ ಶಂಕರಾಚಾರ್ಯರರಿಗೆ ಸಂಬಂಧಿಸಿದ ವಸ್ತು ಸಂಗ್ರಹಾಲಯ ನಿರ್ಮಾಣ ಮಾಡುವುದರ ಜೊತೆಗೆ ನರ್ಮದಾ ನದಿಯ ಮತ್ತೊಂದು ತೀರದಲ್ಲಿ 12 ಎಕರೆ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಅದ್ವೈತ ವೇದಾಂತ ಸಂಸತ್ತು ನಿರ್ಮಾಣ ಮಾಡಲಾಗುತ್ತದೆ. ಇದನ್ನೂ ಓದಿ: ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಕೊರೊನಾ ಪಾಸಿಟಿವ್

shankaracharya 1

ಈ ಸ್ಥಳದಲ್ಲೇ ಏಕೆ?: ಶಂಕರರು ದೇಶ ಸಂಚಾರ ಮಾಡಿರುವ ವೇದಾಂತಿಯಾಗಿದ್ದಾರೆ. ಆದರೆ ಅವರು ಗುರು ಗೋವಿಂದ ಭಗವತ್ಪಾದರನ್ನು ಓಂಕಾರೇಶ್ವರರಲ್ಲಿ ಭೇಟಿ ಮಾಡಿ ಇಲ್ಲಿಯೇ ದೀಕ್ಷೆ ಸ್ವೀಕರಿಸಿದರು ಎಂಬ ಪ್ರತೀತಿಯಿದೆ. ಹೀಗಾಗಿ ನರ್ಮದಾ ನದಿ ತಟದಲ್ಲಿ ಓಂಕಾರೇಶ್ವರದಲ್ಲೇ ಪ್ರತಿಮೆ ಸ್ಥಾಪನೆಗೆ ನಿರ್ಧರಿಸಲಾಗಿದೆ. ಇದನ್ನೂ ಓದಿ: ಕೊರೊನಾ ಸೋಂಕು ಏರಿಕೆ ಮಧ್ಯೆ ಸಿಹಿ ಸುದ್ದಿ – ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆ

Share This Article
Leave a Comment

Leave a Reply

Your email address will not be published. Required fields are marked *