ಭೋಪಾಲ್: ತಾನು ಸಾಕಿರುವ ಎಮ್ಮೆ ಹಾಲು ಕೊಡುತ್ತಿಲ್ಲ ಎಂದು ರೈತನೊಬ್ಬ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿರುವ ಅಚ್ಚರಿದಾಯಕ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಭಿಂದ್ ಜಿಲ್ಲೆಯ ರೈತ ತನ್ನ ಎಮ್ಮೆಯೊಂದಿಗೆ ಪೊಲೀಸ್ ಠಾಣೆಗೆ ತೆರಳಿ, ಎಮ್ಮೆ ಹಾಲು ಕೊಡುತ್ತಿಲ್ಲ. ಇದರ ಮೇಲೆ ವಾಮಾಚಾರ ಮಾಡಿರಬಹುದು. ಅದರ ಪರಿಣಾಮವಾಗಿ ಅದು ಹಾಲು ನೀಡುತ್ತಿಲ್ಲ ಎಂದು ದೂರಿದ್ದಾನೆ. ಇದನ್ನೂ ಓದಿ: ಮಹಿಳೆಯ ಫೋಟೋ ಮಾರ್ಫಿಂಗ್ – ಸೋದರ ಸಂಬಂಧಿ ಅರೆಸ್ಟ್
Advertisement
Advertisement
ವ್ಯಕ್ತಿಯೊಬ್ಬ ನಯಗಾವ್ ಗ್ರಾಮದ ಠಾಣೆಯಲ್ಲಿ ಪೊಲೀಸರಿಗೆ ಮನವಿ ಮಾಡುತ್ತಿರುವ ದೃಶ್ಯದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
Advertisement
ದೂರು ನೀಡಿದ ರೈತ ಬಾಬುದೇವ್ ಜತವ್ (45) ಎಂದು ಗುರುತಿಸಲಾಗಿದೆ. ರೈತ ಶನಿವಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕೆಲ ದಿನಗಳಿಂದ ನಮ್ಮ ಎಮ್ಮೆ ಹಾಲು ಕೊಡುತ್ತಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ ಎಂದು ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಅರವಿಂದ್ ಶಹಾ ಅವರು ಪಿಟಿಐ ತಿಳಿಸಿದ್ದಾರೆ. ಇದನ್ನೂ ಓದಿ: 3ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ದೀಪ್‍ವೀರ್
Advertisement
ಯಾರೋ ವಾಮಾಚಾರ ಮಾಡಿಸಿದ್ದಾರೆ. ಅದಕ್ಕಾಗಿ ಎಮ್ಮೆ ಹಾಲು ಕೊಡುತ್ತಿಲ್ಲ ಎಂದು ಕೆಲ ಗ್ರಾಮಸ್ಥರು ರೈತನಿಗೆ ಹೇಳಿದ್ದಾರೆ. ಹೀಗಾಗಿ ರೈತ ಅದೇ ರೀತಿ ದೂರು ನೀಡಿದ್ದರು.
ಪಶುವೈದ್ಯರ ಸಲಹೆಯೊಂದಿಗೆ ಗ್ರಾಮಸ್ಥರಿಗೆ ಸಹಾಯ ಮಾಡಲು ಪೊಲೀಸ್ ಠಾಣೆಯ ಉಸ್ತುವಾರಿಗೆ ಹೇಳಿದ್ದೆ. ಭಾನುವಾರ ಬೆಳಿಗ್ಗೆ ಎಮ್ಮೆ ಹಾಲು ಕೊಡುತ್ತಿದೆ ಎಂದು ಗ್ರಾಮಸ್ಥರು ಕೃತಜ್ಞತೆ ಸಲ್ಲಿಸಿದ್ದಾರೆ ಎಂದು ಶಹಾ ಅವರು ಹೇಳಿದ್ದಾರೆ.