ಭೋಪಾಲ್: ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯಲ್ಲಿ ಕುಟುಂಬವೊಂದು ಶೌಚಾಲಯವನ್ನೇ ಅಡುಗೆ ಕೋಣೆಯನ್ನಾಗಿ ಮಾಡಿರುವ ಘಟನೆಯೊಂದು ನಡೆದಿದೆ.
ಸ್ವಚ್ಛ ಭಾರತ ಅಭಿಯಾನ ನಡೆಸುತ್ತಿದ್ದ ತನಿಖಾಧಿಕಾರಿಗಳ ತಂಡವೊಂದು ಶುಕ್ರವಾರ ಶಿವಪುರ ಜಿಲ್ಲೆಯ ಬಮೊರ್ಖಾದ್ ಪಂಚಾಯತ್ ವ್ಯಾಪ್ತಿಯಲ್ಲಿ ಯೋಜನೆ ಅನುಷ್ಠಾನ ಮಾಡಲು ಬಂದಿದ್ದ ವೇಳೆ ಈ ಘಟನೆ ಬೆಳಕಿಗೆ ಬಂದಿದೆ.
Advertisement
ಜನಪದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹೇಂದ್ರ ಜೈನ್ ಹಾಗೂ ಇತರ ಅಧಿಕಾರಿಗಳು ಕುಂಡೈ ಗ್ರಾಮದ ಜನರು ಶೌಚಾಲಯ ಬಳಸುತ್ತಾರೋ ಇಲ್ಲವೋ ಎಂಬುವುದನ್ನು ತಪಾಸಣೆ ನಡೆಸಲೆಂದು ಮನೆಮನೆಗೆ ತೆರಳಿದ್ದರು. ಈ ವೇಳೆ ಮನೆಯೊಂದರ ಶೌಚಾಲಯದಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಅಧಿಕಾರಿಗಳು ಆ ಅಲ್ಲಿಗೆ ಭೇಟಿಯಿತ್ತಾಗ ಆ ಕುಟುಂಬ ಶೌಚಾಲಯವನ್ನು ಅಡುಗೆ ಕೋಣೆಯನ್ನಾಗಿ ಪರಿವರ್ತಿಸಿರುವುದು ಕಂಡುಬಂದಿದೆ.
Advertisement
Advertisement
ಶೌಚಾಲಯದ ಒಳಗಿನಿಂದ ಮಹಿಳೆಯೊಬ್ಬರು ಅಡುಗೆ ಮಾಡುತ್ತಿರುವ ದೃಶ್ಯ ಕಂಡು ಅಧಿಕಾರಿಗಳೇ ದಂಗಾಗಿದ್ದಾರೆ. ಟಾಯ್ಲೆಟ್ ಬೇಸಿನ್ ನನ್ನು ಕಾರ್ಡ್ ಬೋರ್ಡನ್ನಾಗಿ ಮಾಡಿ ಅದರಲ್ಲಿ ಗ್ಯಾಸ್ ಸ್ಟೌವ್ ಇಟ್ಟಿದ್ದರು. ಕೆಲ ಮಹಿಳೆಯರು ಚಪಾತಿ ಮಾಡುತ್ತಿದ್ದರು. ಈ ವೇಳೆ ಅಧಿಕಾರಿಗಳು ಯಾಕೆ ಶೌಚಾಲಯದೊಳಗೆ ಅಡುಗೆ ಮಾಡುತ್ತೀರಾ ಎಂಬುವುದಾಗಿ ಪ್ರಶ್ನಿಸಿದ್ದಾರೆ. ಈ ವೇಳೆ ಮಹಿಳೆ, ಜೋರಾಗಿ ಮಳೆ ಬರುತ್ತಿರುವುದರಿಂದ ಹೊರಗಡೆ ಅಡುಗೆ ಮಾಡಲು ಸಾಧ್ಯವಿರಲಿಲ್ಲ. ಹೀಗಾಗಿ ಟಾಯ್ಲೆಟ್ ನೊಳಗೆ ಮಾಡಲು ನಿರ್ಧರಿಸಿದೆ ಅಂತ ಉತ್ತರಿಸಿದ್ದಾರೆ.
Advertisement
ಶೌಚಾಲಯ ನಿರ್ಮಾಣಕ್ಕೆಂದು ಸ್ವಚ್ಛ ಭಾರತ್ ಅಭಿಯಾನದಡಿ ಗ್ರಾಮದ ಪ್ರತಿ ಕುಟುಂಬ 12,000ರೂ. ಸಬ್ಸಿಡಿ ನೀಡಲಾಗಿತ್ತು ಅಂತ ಅಧಿಕಾರಿಗಳು ಹೇಳಿದ್ದಾರೆ. ಈ ಕುಟುಂಬದ ಮನೆಯನ್ನು ಪರಿಶೀಲಿಸಿದಾಗ ಮನೆ ಸೂರುತ್ತಿರುವುದು ಕಂಡುಬಂದಿಲ್ಲ. ಹೀಗಾಗಿ ಇದು ಅವರಿಗೆ ಅಭ್ಯಾಸವಾಗಿದೆ. ಇವರ ಈ ಅಭ್ಯಾಸ ಮುಂದುವರೆಸಿದ್ರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿ ತೆರಳಿದ್ದಾರೆ.
ಕಳೆದ 7 ತಿಂಗಳ ಹಿಂದೆಯಷ್ಟೇ ಇದೇ ಜಿಲ್ಲೆಯ ಗ್ರಾಮವೊಂದರಲ್ಲಿ ಮಹಿಳೆಯೊಬ್ಬರು ಶೌಚಾಲಯದಲ್ಲಿ ಪುಟ್ಟ ಅಂಗಡಿಯೊಂದನ್ನು ನಡೆಸುತ್ತಿರುವುದು ಕೂಡ ಬೆಳಕಿಗೆ ಬಂದಿತ್ತು.