ಭೋಪಾಲ್: ಮಧ್ಯಪ್ರದೇಶ ಚುನಾವಣಾ ಫಲಿತಾಂಶ ಮತ್ತಷ್ಟು ವಿಳಂಬವಾಗಲಿದ್ದು, ಮಧ್ಯರಾತ್ರಿ ಮತ ಎಣಿಕೆ ಪೂರ್ಣಗೊಳ್ಳಲಿದೆ ಎಂದು ಚುನಾವಣಾ ಅಧಿಕಾರಿಗಳು ಫೋಷಣೆ ಮಾಡಿದ್ದಾರೆ.
ಈಗಾಗಲೇ ಮಿಜೋರಾಂ, ರಾಜಸ್ಥಾನ, ತೆಲಂಗಾಣ ಮತ್ತು ಛತ್ತೀಸಗಢ್ ಫಲಿತಾಂಶ ಹೊರಬಿದ್ದಿದೆ. ಆದರೆ ಮಧ್ಯಪ್ರದೇಶದ ಫಲಿತಾಂಶ ಮಾತ್ರ ಮತ್ತಷ್ಟು ವಿಳಂಬವಾಗುತ್ತಾ ಸಾಗುತ್ತಿದೆ. ಸಂಜೆ ವೇಳೆಗೆ ಪೂರ್ಣಗೊಳ್ಳಬೇಕಾಗಿದ್ದ ಮತ ಎಣಿಕೆ ಅನೇಕ ಕಾರಣಗಳಿಂದಾಗಿ ರಾತ್ರಿಯೂ ಪೂರ್ಣಗೊಳ್ಳಲಿಲ್ಲ.
Advertisement
Advertisement
ಇದೇ ಮೊದಲ ಬಾರಿಗೆ ಮಧ್ಯಪ್ರದೇಶದಲ್ಲಿ ಎಲ್ಲ 230 ಕ್ಷೇತ್ರಗಳಲ್ಲಿ ಇವಿಎಂನಲ್ಲಿ ಬಿದ್ದ ಮತವನ್ನು ಖಾತರಿಗೊಳಿಸಲು ಬಳಸಲಾಗಿದ್ದ ವಿವಿಪ್ಯಾಟ್(ವೋಟರ್ ವೆರಿಫೈಡ್ ವೋಟರ್ ಟ್ರಯಲ್) ಬಳಕೆ ಮಾಡಲಾಗಿದೆ. ಹೀಗಾಗಿ ಪ್ರತಿ ಸುತ್ತಿನ ಎಣಿಕೆ ಮಾಡಿದ ಬಳಿಕ ವಿವಿಪ್ಯಾಟ್ ಪರಿಶೀಲನೆ ಮಾಡಲಾಗುತ್ತದೆ. ಪ್ರತಿ ಸುತ್ತಿನ ಎಣಿಕೆಯಾದ ಬಳಿಕ ಎಜೆಂಟರ ಸಹಿಯನ್ನು ಪಡೆದು ಮುಂದಿನ ಸುತ್ತಿನ ಎಣಿಕೆ ಮಾಡಲಾಗುತ್ತದೆ. ಈ ಸಮಯದಲ್ಲಿ ಆಕ್ಷೇಪಣೆಗಳು ಬಂದರೆ ಮತ್ತೊಮ್ಮೆ ಮತ ಎಣಿಕೆ ಮಾಡಲಾಗುತ್ತದೆ. ಹೀಗಾಗಿ ಫಲಿತಾಂಶ ಮಧ್ಯರಾತ್ರಿ ಪ್ರಕಟವಾಗುವ ಸಾಧ್ಯತೆಯಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv