ನವದೆಹಲಿ: ಪಂಚರಾಜ್ಯಗಳ ಚುನಾವಣೆ ಅಂತ್ಯಗೊಂಡ ಬೆನ್ನಲ್ಲೇ ಚುನಾವಣೋತ್ತರ ಸಮೀಕ್ಷೆಗಳು (Exit Polls) ಪ್ರಕಟಗೊಳ್ಳುತ್ತಿದ್ದು, ಮಧ್ಯಪ್ರದೇಶದಲ್ಲಿ (Madhya Pradesh) ಕಾಂಗ್ರೆಸ್ (Congress) ಅಧಿಕಾರಕ್ಕೆ ಏರುವ ಸಾಧ್ಯತೆಯಿದೆ.
ಯಾವ ಸಮೀಕ್ಷೆ ಏನು ಹೇಳಿದೆ.?
ಒಟ್ಟು 230 ಸ್ಥಾನಗಳಿರುವ ಮಧ್ಯಪ್ರದೇಶದಲ್ಲಿ ಬಹುಮತಕ್ಕೆ 116 ಸ್ಥಾನಗಳ ಅಗತ್ಯವಿದೆ. ಕಾಂಗ್ರೆಸ್ ಹೆಚ್ಚು ಸ್ಥಾನ ಪಡೆದರೂ ಬಿಜೆಪಿ ಟಫ್ ಸರ್ಧೆ ನೀಡಲಿದೆ ಎಂದು ಸಮೀಕ್ಷೆ ತಿಳಿಸಿದೆ. ಇದನ್ನೂ ಓದಿ: ಯಾವುದನ್ನೂ ಉಚಿತವಾಗಿ ನೀಡಬಾರದು: ಇನ್ಫಿ ನಾರಾಯಣ ಮೂರ್ತಿ
- Advertisement
ಜನ್‌ಕೀಬಾತ್ : ಬಿಜೆಪಿ 100 -123, ಕಾಂಗ್ರೆಸ್ 102-125
ರಿಪಬ್ಲಿಕ್‌ಟಿವಿ : ಬಿಜೆಪಿ 118 -130, ಕಾಂಗ್ರೆಸ್ 97-107
ಪೂಲ್‌ಸ್ಟಾರ್ಟ್ : ಬಿಜೆಪಿ 106-116, ಕಾಂಗ್ರೆಸ್ 111-121
- Advertisement
2018ರ ಚುನಾವಣೆಯಲ್ಲಿ ಕಾಂಗ್ರೆಸ್ 114, ಬಿಜೆಪಿ 109, ಬಿಎಸ್‌ಪಿ 2, ಸಮಾಜವಾದಿ ಪಕ್ಷ 1 ಸ್ಥಾನ ಗೆದ್ದುಕೊಂಡರೆ 4 ಮಂದಿ ಪಕ್ಷೇತರ ಅಭ್ಯರ್ಥಿಗಳು ಗೆದ್ದಿದ್ದರು. ಬಿಎಸ್‌ಪಿ, ಎಸ್‌ಪಿ ಹಾಗೂ ಪಕ್ಷೇತರರ ಬೆಂಬಲದಿಂದ ಕಾಂಗ್ರಸ್ ಸರ್ಕಾರ ರಚನೆ ಮಾಡಿತ್ತು. ಕಮಲ್ ನಾಥ್ ಸಿಎಂ ಆಗಿದ್ದರು. ಲೋಕಸಭಾ ಚುನಾವಣೆ ಬಳಿಕ ಆಪರೇಷನ್ ಕಮಲದ ಮೂಲಕ ಬಿಜೆಪಿ ಅಧಿಕಾರ ಹಿಡಿದಿತ್ತು.