ಭೋಪಾಲ್: ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕಾಡಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪತ್ತೆ ಹಚ್ಚಲು ಮಧ್ಯಪ್ರದೇಶದ (Madhya Pradesh) ಹರ್ದಾ ಜಿಲ್ಲೆಯ ಪೊಲೀಸರು (Police) ನೈಟ್ ವಿಷನ್ ಡ್ರೋನ್ (Night Vision Drone) ಬಳಸಿ ಅರಣ್ಯ ಪ್ರದೇಶದಲ್ಲಿ ಜಾಲಾಡಿದ್ದಾರೆ.
ಥರ್ಮಲ್ ಇಮೇಜ್ ಕ್ಯಾಮೆರಾ ಹೊಂದಿರುವ ಡ್ರೋನ್‍ನ್ನು ಭೋಪಾಲ್ ಮೂಲದ ಮಧ್ಯಪ್ರದೇಶ ಎಲೆಕ್ಟ್ರಾನಿಕ್ ಡೆವಲಪ್‍ಮೆಂಟ್ ಕಾರ್ಪೋರೇಷನ್ ಖರೀದಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆದಿತ್ಯ ಸಿಂಗ್ ಹೇಳಿದ್ದಾರೆ. ಇದನ್ನೂ ಓದಿ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಎಫ್‌ಐಆರ್‌ಗೆ ಕೋರ್ಟ್ ಆದೇಶ
ಡ್ರೋನ್ ಉಷ್ಣ ಸಂವೇದಕಗಳನ್ನು ಹೊಂದಿದೆ. ಇದು ಸಾಮಾನ್ಯ ಮಾನವನ ದೇಹದ ಉಷ್ಣತೆಯನ್ನು ಗ್ರಹಿಸುತ್ತದೆ. ಇದರಿಂದಾಗಿ ದಟ್ಟವಾದ ಅರಣ್ಯ ಪ್ರದೇಶದಲ್ಲಿ ಅಡಗಿರುವವರನ್ನು ಕಂಡುಹಿಡಿಯುವುದು ಸುಲಭ ಎಂದು ತಿಳಿಸಿದ್ದಾರೆ.
ಆರೋಪಿಗಾಗಿ ಹಲವು ಅಡಗುದಾಣಗಳ ಮೇಲೆ ದಾಳಿ ನಡೆಸಿದರೂ, ಆತ ಪತ್ತೆಯಾಗದ ಹಿನ್ನೆಲೆಯಲ್ಲಿ ಅಧಿಕಾರಿಗಳು ಡ್ರೋನ್ ಕ್ಯಾಮೆರಾವನ್ನು ಬಳಸಲು ಮುಂದಾಗಿದ್ದಾರೆ. ಆರೋಪಿಯು ಹರ್ದಾದಿಂದ 50 ಕಿಮೀ ದೂರದ ಕಾಡಿನಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ.
ಸೆ.23 ರಂದು ಸಿರಾಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಾಲಕಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ ಬಳಿಕ ಪ್ರಜ್ಞೆ ಮರಳಿತ್ತು. ಬಳಿಕ ವೈದ್ಯಕೀಯ ಪರೀಕ್ಷೆಯಲ್ಲಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ತಿಳಿದು ಬಂದಿತ್ತು.
ಆರೋಪಿ ಸುಮಾರು 24 ವರ್ಷ ವಯಸ್ಸಿನವನು, ಬಾಲಕಿಗೆ ತಿಂಡಿ ನೀಡಿ ನಂತರ ಬಾಲಕಿಯನ್ನು ನಿರ್ಜನ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಲಡ್ಡು ಲಡಾಯಿ | ಭದ್ರತೆಯ ನೆಪವೊಡ್ಡಿ ತಿರುಪತಿ ಭೇಟಿ ರದ್ದುಗೊಳಿಸಿದ ಜಗನ್ – ಚಂದ್ರಬಾಬು ನಾಯ್ಡು ತಿರುಗೇಟು