ಭೋಪಾಲ್: ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ (Mohan Yadav) ಅವರ ಪುತ್ರ ಸಾಮೂಹಿಕ ವಿವಾಹ ಸಮಾರಂಭದಲ್ಲೇ ತಾನೂ ಮದುವೆಯಾಗಿ ಸರಳತೆ ಮೆರೆಯಲು ಸಜ್ಜಾಗಿದ್ದಾರೆ.
ಉದ್ಯಮಿಗಳು, ರಾಜಕಾರಣಿಗಳ ಮಕ್ಕಳ ಮದುವೆಯೆಂದರೆ ಅದ್ಧೂರಿ, ಆಡಂಬರದಿಂದ ಕೂಡಿರುತ್ತೆ ಎಂಬ ವ್ಯಾಖ್ಯಾನಗಳಿವೆ. ಆದರೆ, ಸಿಎಂ ಪುತ್ರರೊಬ್ಬರು ಯಾವುದೇ ಆಡಂಬರವಿಲ್ಲದೇ ಸಾಮೂಹಿಕ ವಿವಾಹ ಸಮಾರಂಭದಲ್ಲೇ ತಾವೂ ಹಸೆಮಣೆ ಏರಲಿದ್ದಾರೆ. ಬಡವರು ಮತ್ತು ಸರಳ ಜೀವಿಗಳು ಸಾಮೂಹಿಕ ವಿವಾಹದಂತಹ ವೇದಿಕೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅದೇ ಹಾದಿಯಲ್ಲಿ ಸಿಎಂ ಪುತ್ರ ಸಾಗಿದ್ದಾರೆ. ಇದನ್ನೂ ಓದಿ: ಭಾರತದತ್ತ ವಿನಾಶಕಾರಿ ದಿತ್ವಾ ಚಂಡಮಾರುತ – ವೇಗ ಕಳೆದುಕೊಂಡ ಸೈಕ್ಲೋನ್; ಭಾರಿ ಮಳೆ ಸಾಧ್ಯತೆ
ಸಿಎಂ ಮೋಹನ್ ಯಾದವ್ ಅವರ ಕಿರಿಯ ಪುತ್ರ ಅಭಿಮನ್ಯು ಯಾದವ್ ಅವರು ಇತಿಶಾ ಯಾದವ್ ಜೊತೆಗೆ ಹಸೆಮಣೆ ಏರಲಿದ್ದಾರೆ. ಸನ್ವಾರಾ ಖೇಡಿಯಲ್ಲಿ ಇತರ 21 ಜೋಡಿಗಳೊಂದಿಗೆ ಸಾಮೂಹಿಕ ವಿವಾಹ ಸಮಾರಂಭದ ಭಾಗವಾಗಿ ವಿವಾಹವಾಗಲಿದ್ದಾರೆ. ಸಿಎಂ ಪುತ್ರನ ಸರಳತೆ ಜನರ ಗಮನ ಮತ್ತು ಪ್ರೀತಿಯನ್ನು ಸೆಳೆದಿದೆ.
ಎಲ್ಲಾ 22 ಜೋಡಿಗಳು ಸಾಮೂಹಿಕ ಮೆರವಣಿಗೆಯಲ್ಲಿ ಸೇರುತ್ತಾರೆ. ವರರು ಕುದುರೆಗಳ ಮೇಲೆ ಮತ್ತು ಅವರ ವಧುಗಳು ಸುಂದರವಾಗಿ ಅಲಂಕರಿಸಲ್ಪಟ್ಟ ಬಂಡಿಗಳಲ್ಲಿ ಬರುತ್ತಾರೆ. ಅವರ ಕುಟುಂಬಗಳು ಬ್ಯಾಂಡ್‌ಗಳ ಜೊತೆಗೆ ನೃತ್ಯ ಮಾಡುತ್ತಾರೆ. ಸ್ನೇಹಿತರು, ಕುಟುಂಬಸ್ಥರು, ಹಿತೈಷಿಗಳು ಮತ್ತು ಈ ಕಾರ್ಯಕ್ರಮವನ್ನು ವೀಕ್ಷಿಸಲು ಬಯಸುವ ನಾಗರಿಕರು ಸೇರಿದಂತೆ ಸುಮಾರು 25,000 ಜನರು ಭಾಗವಹಿಸುವ ನಿರೀಕ್ಷೆಯಿದೆ. ಇದನ್ನೂ ಓದಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ರಾಹುಲ್, ಸೋನಿಯಾ ಗಾಂಧಿ ವಿರುದ್ಧ ಹೊಸ ಎಫ್‌ಐಆರ್
ಇಂದು ಸಾಮೂಹಿಕ ವಿವಾಹ ಸಮಾರಂಭ ಮುಗಿದ ನಂತರ, ಅಥರ್ವ ಹೋಟೆಲ್‌ನಲ್ಲಿ ಅದ್ಧೂರಿ ಸ್ವಾಗತ ಸಮಾರಂಭ ನಡೆಯಲಿದೆ. 11 ರಾಜ್ಯಗಳ ಸಚಿವರು, ಮುಖ್ಯಮಂತ್ರಿಗಳು, ಎಂಟು ರಾಜ್ಯಪಾಲರು ಮತ್ತು ಹಲವಾರು ಗಣ್ಯರು ಭಾಗವಹಿಸಲಿದ್ದಾರೆ.


