ಭೋಪಾಲ್: ಸಾಮಾನ್ಯವಾಗಿ ಮದುವೆ ಮಂಟಪಕ್ಕೆ ವಧು ಪಲ್ಲಕ್ಕಿಯಲ್ಲಾಗಲಿ, ಕಾರಿನಲ್ಲಾಗಲಿ ಬರುವುದು ರೂಢಿ. ಆದರೆ ಇಲ್ಲೊಂದು ವಧು ತನ್ನ ಮದುವೆಗೆ ಟ್ರ್ಯಾಕ್ಟರ್‌ನ್ನು ತಾನೇ ಚಲಾಯಿಸಿಕೊಂಡು ಮಂಟಪಕ್ಕೆ ಆಗಮಿಸಿದ್ದಾಳೆ.
ಮಧ್ಯಪ್ರದೇಶದ ಬೇತುಲ್ ಜಿಲ್ಲೆಯ ಜಾವ್ರಾ ಗ್ರಾಮದಲ್ಲಿ ಮದುವೆ ನಡೆದಿದೆ. ಭಾರತಿ ತಾಗ್ಡೆ ವಧು. ಇವರು ಕಪ್ಪು ಕನ್ನಡಕವನ್ನು ಧರಿಸಿ ಟ್ರ್ಯಾಕ್ಟರ್‌ನ್ನು ತಾನೇ ಚಲಾಯಿಸಿ ಮದುವೆ ಮಂಟಪಕ್ಕೆ ಬಂದಳು. ಟ್ರ್ಯಾಕ್ಟರ್‌ನಲ್ಲಿ ಆಕೆಯ ಇಬ್ಬರು ಸಹೋದರರು ಪಕ್ಕದಲ್ಲಿ ಕುಳಿತಿದ್ದರು. ಈ ರೀತಿಯಾಗಿ ವಧುವಿನ ಪ್ರವೇಶವನ್ನು ನೋಡಿದ ಅಲ್ಲಿ ನೆರೆದಿದ್ದ ಜನರನ್ನು ಆಶ್ಚರ್ಯಗೊಳಿಸಿತು.
Advertisement
A bride in Betul arrived at her wedding on a tractor. The bride, Bharti Tagde, is seen entering the wedding pavilion wearing black glasses and riding a tractor. On the tractor, she is accompanied by her two brothers @ndtv @ndtvindia pic.twitter.com/apdqrIBvyA
— Anurag Dwary (@Anurag_Dwary) May 27, 2022
ಪಲ್ಲಕ್ಕಿ ಅಥವಾ ಕಾರಿನಲ್ಲಿ ಪ್ರವೇಶಿಸುವ ಪ್ರವೃತ್ತಿ ಹಳೆಯದಾಗಿದೆ. ಇದಿರಿಂದಾಗಿ ವಿಭಿನ್ನವಾಗಿ ಏನನ್ನಾದರೂ ಮಾಡಲು ಬಯಸುತ್ತಿದ್ದೆ ಎಂದು ಭಾರತಿ ತಾಗ್ದೆ ತಿಳಿಸಿದರು. ಇದೀಗ ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಸಾಮಾನ್ಯರಂತೆ ಬರಿಗಾಲಲ್ಲೇ ಕೆಸರಲ್ಲಿ ನಡೆದು ಸಂತ್ರಸ್ತರಿಗೆ ಸ್ಪಂದಿಸಿದ ಐಎಎಸ್ ಅಧಿಕಾರಿ
Advertisement
Advertisement
ಈ ವರ್ಷದ ಆರಂಭದಲ್ಲಿ, ಹರಿಯಾಣದ ಅಂಬಾಲಾದಲ್ಲಿ ನಡೆದ ಮದುವೆಯೊಂದರಲ್ಲಿ ವಧು ತನ್ನ ಕೈಯಲ್ಲಿ ಕತ್ತಿಯೊಂದಿಗೆ ಕುದುರೆಯ ಮೇಲೆ ಸವಾರಿ ಮಾಡುತ್ತಾ ವರನ ಮನೆಗೆ ಹೋಗಿ ಮದುವೆಯಾದಳು. ಇದನ್ನೂ ಓದಿ: ಮದುವೆ ಸಮಾರಂಭದಲ್ಲಿ ಯುವತಿಯರೊಂದಿಗೆ ಅಸಭ್ಯವಾಗಿ ಕುಣಿದ ಗ್ರಾಪಂ ಸದಸ್ಯರು