ಭೋಪಾಲ್: ನಾಯಿ ಮನುಷ್ಯನ ನಿಜವಾದ ಸ್ನೇಹಿತ ಎಂದು ಹೇಳುತ್ತಾರೆ. ಆದರೆ ಸ್ನೇಹಿತ ಮಾತ್ರವಲ್ಲದೇ ರಕ್ಷಕ ಎನ್ನುವುದು ಈಗ ಸಾಬೀತಾಗಿದೆ.
ಹೌದು. ಮಧ್ಯಪ್ರದೇಶದ ಭೋಪಾಲ್‍ನಲ್ಲಿ ನಾಯಿಯೊಂದು ಬೊಗಳಿ, ಬೊಗಳಿ ಹುಲಿಯಿಂದ ಮಾಲೀಕನನ್ನು ಕಾಪಾಡಿದೆ.
Advertisement
ಪಂಚಮ್ ಗಜ್ಬ (22) ಮತ್ತು ಆತನ ಸಹೋದರ ಪರಸಪ್ನಿ ಹಳ್ಳಿಯ ಬಳಿ ಇರುವ ಕಾಡಿಗೆ ಹೋಗಿದ್ದರು. ಗಜ್ಬ ಮರದ ಕೊಂಬೆಗಳನ್ನು ಮುರಿಯಲು ಪ್ರಯತ್ನಿಸುತ್ತಿದ್ದಾಗ ಹುಲಿಯೊಂದು ದಾಳಿ ನಡೆಸಿದೆ. ಸುತ್ತ ಮುತ್ತ ಯಾರು ಇಲ್ಲದ ಕಾರಣ ಪಂಚಮ್ ಅಸಹಾಯಕನಾಗಿದ್ದ. ಆದರೆ ಅವನ ನಾಯಿ ಹೇಗೊ ತುಸು ಸಮೀಪ ಬಂದು ಬೊಗಳಲು ಆರಂಭಿಸಿದೆ. ಒಂದು ಎರಡು ಬಾರಿ ಬೊಗಳದೇ ಹುಲಿ ಪಂಚಮ್‍ನನ್ನು ಬಿಡುವ ತನಕವು ಬೊಗಳುತ್ತಲೇ ಇತ್ತು.
Advertisement
Advertisement
ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಪಂಚಮ್ ಗಜ್ಬ, ನನ್ನ ಜೀವನ ಇಲ್ಲಿಗೆ ಕೊನೆ ಆಯ್ತು ಎಂದುಕೊಂಡೆ. ಹುಲಿ ನನ್ನ ಕುತ್ತಿಗೆಗೆ ಬಾಯಿ ಹಾಕುವ ಮೊದಲೇ ನಾಯಿ ಬೊಗಳಲು ಆರಂಭಿಸಿತ್ತು. ನಾಯಿ ಬೊಗಳಿದ್ದರಿಂದ ಹುಲಿ ವಿಚಲಿತಗೊಂಡಿತು. ಆದರೂ ಎಷ್ಟೇ ಬೊಗಳಿದರೂ ಹುಲಿ ಹಿಂದೆ ಸರಿಯಲಿಲ್ಲ. ಯಾವಾಗ ಛಲ ಬಿಡದೆ ನಾಯಿ ಬೊಗಳುವುದನ್ನು ಮುಂದುವರಿಸಿತೋ ಹುಲಿ ಸುಮ್ಮನೆ ನಿಂತುಕೊಂಡಿತು. ನಾಯಿ ತುಂಬಾ ಧೈರ್ಯದಿಂದ ಹುಲಿಯ ಮುಂದೆ ಬೊಗಳುತ್ತಲೇ ಇತ್ತು. ನಾಯಿ ಇಲ್ಲದೇ ಇದ್ದರೆ ಹುಲಿಗೆ ನಾನು ಆಹಾರವಾಗುತ್ತಿದೆ. ನಾಯಿ ಬೊಗಳಿದ್ದನ್ನು ಕೇಳಿ ಊರಿನ ಜನ ಮತ್ತು ಸಹೋದರ ಬಂದು ನನ್ನನ್ನು ಕಾಪಾಡಿದರು ಎಂದು ತಿಳಿಸಿದರು.
Advertisement
ಹುಲಿಯ ದಾಳಿಯಿಂದ ಕೈ ಮತ್ತು ತಲೆಗೆ ಬಲವಾದ ಹೊಡೆತಗಳು ಬಿದ್ದಿದ್ದು ಸಮೀಪದ ಕುರೈ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವಿಭಾಗ ಅರಣ್ಯಾಧಿಕಾರಿ ಟಿ. ಎಸ್. ಸುಲ್ಯ ತಿಳಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಹುಲಿ ಸಂಗ್ರಾಹಲಯದ ಡಾ.ಅಖಿಲೇಶ್ ಸ್ಥಳಕ್ಕೆ ಭೇಟಿ ನೀಡಿ ಜನರಲ್ಲಿ ಜಾಗೃತರಾಗಿರುವಂತೆ ಸಲಹೆ ನೀಡಿದರು.