ಭೂತಾನ್: ಮಧ್ಯಪ್ರದೇಶದ (Madhya Pradesh) ಬಿಜೆಪಿ (BJP) ಸಂಸದರೊಬ್ಬರು (MP) ಬಾಲಕಿಯರ ಶೌಚಾಲಯವನ್ನು (Toilet) ಬರಿಗೈಯಲ್ಲೇ ಸ್ವಚ್ಛಗೊಳಿಸಿದ್ದಾರೆ.
ಬಿಜೆಪಿಯ ಯುವ ಘಟಕವು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವಾದ ಸೆಪ್ಟೆಂಬರ್ 17 ರಿಂದ ಮಹಾತ್ಮ ಗಾಂಧಿಯವರ ಜನ್ಮದಿನವಾದ ಅಕ್ಟೋಬರ್ 2 ರವರೆಗೆ ಸ್ವಚ್ಛತಾ ಅಭಿಯಾನವನ್ನು ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ, ಸಂಸದ ಜನಾರ್ದನ್ ಮಿಶ್ರಾ ಅವರು ಮರ ನೆಡುವ ಅಭಿಯಾನದಲ್ಲಿ ಭಾಗವಹಿಸಲು ಶಾಲೆಗೆ ಭೇಟಿ ನೀಡಿದ್ದರು.
Advertisement
पार्टी द्वारा चलाये जा रहे सेवा पखवाड़ा के तहत युवा मोर्चा के द्वारा बालिका विद्यालय खटखरी में वृक्षारोपण कार्यक्रम के उपरांत विद्यालय के शौचालय की सफाई की।@narendramodi @JPNadda @blsanthosh @ChouhanShivraj @vdsharmabjp @HitanandSharma pic.twitter.com/138VDOT0n0
— Janardan Mishra (@Janardan_BJP) September 22, 2022
Advertisement
ರೇವಾ ಕ್ಷೇತ್ರದ ಸಂಸದ ಜನಾರ್ದನ್ ಮಿಶ್ರಾ ತಮ್ಮ ಭೇಟಿಯ ವೇಳೆ ಬಾಲಕಿಯರ ಶಾಲೆಯ ಶೌಚಾಲಯದ ಅನೈರ್ಮಲ್ಯವನ್ನು ಗಮನಿಸಿ ಅದನ್ನು ಬರಿಗೈಯಲ್ಲಿ ಸ್ವಚ್ಛಗೊಳಿಸಿದರು. ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಕೋಲಾರದಲ್ಲಿ ನಕಲಿ ಡಾಕ್ಟರ್ ಹಾವಳಿ- 10ನೇ ತರಗತಿ ಫೇಲ್ ಆದವ್ರು ಇಲ್ಲಿ ವೈದ್ಯರು
Advertisement
ನಂತರ ಮಾತನಾಡಿದ ಮಿಶ್ರಾ, ಸ್ವಚ್ಛತೆ ಮತ್ತು ಶುಚಿತ್ವವನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ. ಇದು ಮಹಾತ್ಮ ಗಾಂಧಿ ಮತ್ತು ಪ್ರಧಾನಿ ಮೋದಿಯವರ ಸಂದೇಶವಾಗಿದೆ. ಇಂತಹ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದ್ದು ಇದೇ ಮೊದಲಲ್ಲ ಎಂದು ಹೇಳಿದರು. ಇದನ್ನೂ ಓದಿ: ಪೇ ಸಿಎಂ ಅಂದ್ರೆ ಪೇ ಕಾಂಗ್ರೆಸ್ ಮೇಡಂ ಅಂತ ಅರ್ಥ: ಕಾಂಗ್ರೆಸ್ ವಿರುದ್ಧ ಪ್ರತಾಪ್ ಸಿಂಹ ಕಿಡಿ