– ಸ್ವಂತ ಬಲದ ರಚನೆಗೆ ಬೇಕಿದೆ 1 ಕ್ಷೇತ್ರ
– ಬಿಎಸ್‍ಪಿ ಬೆಂಬಲ ಸಾಧ್ಯತೆ
ಭೋಪಾಲ್: ಮಧ್ಯಪ್ರದೇಶದಲ್ಲಿ ಮತ ಎಣಿಕೆ ಪ್ರಕ್ರಿಯೆ ಮುಂದುವರಿದಿದ್ದು, ಕಾಂಗ್ರೆಸ್ ಸರ್ಕಾರ ರಚನೆ ಬಹುತೇಕ ಖಚಿತವಾಗಿದೆ.
ಕಳೆದ 23 ಗಂಟೆಗಳಿಂದ ನಡೆಯುತ್ತಿರುವ ಹಾವು-ಏಣಿ ಆಟದಲ್ಲಿ ಕಾಂಗ್ರೆಸ್ 115 ಸ್ಥಾನಗಳನ್ನು ಪಡೆದಿದ್ದು, ಸ್ವಂತ ಬಲದ ಮೇಲೆ ಸರ್ಕಾರ ರಚಿಸಲು 1 ಸ್ಥಾನದ ಕೊರತೆ ಇದೆ. ಬಿಜೆಪಿ 108 ಸ್ಥಾನ ಗಳಿಸಿ ಕಾಂಗ್ರೆಸ್ ಬಿಗ್ ಫೈಟ್ ನೀಡಿದೆ. ಬಿಎಸ್‍ಪಿ ಬೆಂಬಲ ನೀಡಿದರೆ ಕಾಂಗ್ರೆಸ್ ಅಧಿಕಾರ ರಚನೆ ಮಾಡುವದರಲ್ಲಿ ಸಂಶಯವಿಲ್ಲ. ಮಂಗಳವಾರ ರಾತ್ರಿಯೇ ರಾಜ್ಯಪಾಲರ ಭೇಟಿಗೆ ಕಾಂಗ್ರೆಸ್ ಅವಕಾಶ ಕೇಳಿತ್ತು. ಆದ್ರೆ ಮತ ಎಣಿಕೆ ಮುಗಿಯೋವರೆಗೂ ಯಾರಿಗೂ ಅವಕಾಶವಿಲ್ಲ ಎಂದು ರಾಜ್ಯಪಾಲರು ಸ್ಪಷ್ಟನೆ ನೀಡಿದ್ರು.
Advertisement
Advertisement
ಒಟ್ಟಿನಲ್ಲಿ ಕ್ಷಣಕ್ಷಣಕ್ಕೂ ಬದಲಾದ ಫಲಿತಾಂಶ, ದೇಶದ ರಾಜಕೀಯ ಇತಿಹಾಸದಲ್ಲಿ ಹಿಂದೆಂದೂ ಕಾಣದ ಪೈಪೋಟಿ, ನಿರೀಕ್ಷಿಸದ ಅಚ್ಚರಿ ಬೆಳವಣಿಗೆಗೆ ಮಧ್ಯಪ್ರದೇಶ ಮತ ಎಣಿಕೆ ಸಾಕ್ಷಿಯಾಗಿದೆ. ಸದ್ಯ ಆಪರೇಷನ್ ಕಮಲ ಸದ್ದು ಕೇಳಿಬಂದಿದ್ದು, ಕೇಂದ್ರ ಸಚಿವ ತೋಮರ್ ಭೋಪಾಲ್‍ನಲ್ಲಿ ಬಿಡಾರ ಹೂಡಿದ್ದಾರೆ. ಸರ್ಕಾರ ರಚನೆಗೆ ರಾಜಕೀಯ ತಂತ್ರಗಾರಿಕೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
Advertisement
ಇದೇ ಮೊದಲ ಬಾರಿಗೆ ಮಧ್ಯಪ್ರದೇಶದಲ್ಲಿ ಎಲ್ಲ 230 ಕ್ಷೇತ್ರಗಳಲ್ಲಿ ಇವಿಎಂನಲ್ಲಿ ಬಿದ್ದ ಮತವನ್ನು ಖಾತರಿಗೊಳಿಸಲು ಬಳಸಲಾಗಿದ್ದ ವಿವಿಪ್ಯಾಟ್(ವೋಟರ್ ವೆರಿಫೈಡ್ ವೋಟರ್ ಟ್ರಯಲ್) ಬಳಕೆ ಮಾಡಲಾಗಿದೆ. ಹೀಗಾಗಿ ಪ್ರತಿ ಸುತ್ತಿನ ಎಣಿಕೆ ಮಾಡಿದ ಬಳಿಕ ವಿವಿಪ್ಯಾಟ್ ಪರಿಶೀಲನೆ ಮಾಡಲಾಗುತ್ತದೆ. ಪ್ರತಿ ಸುತ್ತಿನ ಎಣಿಕೆಯಾದ ಬಳಿಕ ಏಜೆಂಟರ ಸಹಿಯನ್ನು ಪಡೆದು ಮುಂದಿನ ಸುತ್ತಿನ ಎಣಿಕೆ ಮಾಡಲಾಗುತ್ತದೆ. ಈ ಸಮಯದಲ್ಲಿ ಆಕ್ಷೇಪಣೆಗಳು ಬಂದರೆ ಮತ್ತೊಮ್ಮೆ ಮತ ಎಣಿಕೆ ಮಾಡಲಾಗುತ್ತದೆ. ಹೀಗಾಗಿ ಫಲಿತಾಂಶ ಮಧ್ಯರಾತ್ರಿ ಪ್ರಕಟವಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿತ್ತು.
Advertisement
ಮತ ಎಣಿಕೆ ವಿಳಂಬಕ್ಕೆ ಕಾರಣ:
ಆಯಾ ಸುತ್ತಿನ ಮತ ಎಣಿಕೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಪ್ರತಿ ಅಭ್ಯರ್ಥಿಯಿಂದ ಮತಗಳ ಪ್ರಮಾಣವನ್ನು ಲಿಖಿತವಾಗಿ ದೃಢೀಕರಿಸುವ ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಿದ್ದರಿಂದ ಮಧ್ಯಪ್ರದೇಶ ಹಾಗೂ ರಾಜಸ್ಥಾನಗಳಲ್ಲಿ ಮತ ಎಣಿಕೆ ಪ್ರಕ್ರಿಯೆ ವಿಳಂಬವಾಯಿತು. ಆಯಾ ಜಿಲ್ಲಾ ಕೇಂದ್ರಗಳಲ್ಲಿ ನಡೆದಿರುವ ಮತ ಎಣಿಕೆ ಪ್ರಕ್ರಿಯೆಯಲ್ಲಿ ಪ್ರತಿ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು, ಪ್ರತಿ ಸುತ್ತಿನಲ್ಲಿ ತಾವು ಪಡೆದ ಮತಗಳನ್ನು ದೃಢೀಕರಿಸುವ ಸಂಬಂಧ ಅರ್ಜಿ ನಮೂನೆ ಭರ್ತಿ ಮಾಡಿ, ಸಹಿ ಮಾಡಿ ಕೊಡಬೇಕಿತ್ತು. ಈ ಪ್ರಕ್ರಿಯೆಯಿಂದ ಫಲಿತಾಂಶ ವಿಳಂಭವಾಯ್ತು. ಅಲ್ಲದೆ, ಮಧ್ಯಪ್ರದೇಶದ 230 ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಚುನಾವಣೆ ಪೈಕಿ ಶೇ.15 ರಷ್ಟು ಮತಗಟ್ಟೆಗಳಲ್ಲಿ ಬಳಸಿರುವ ಇವಿಎಂ ಯಂತ್ರಗಳೊಂದಿಗೆ ಅಳವಡಿಸಿದ್ದ ವಿವಿ ಪ್ಯಾಟ್‍ಗಳ ಮತಗಳನ್ನು ತಾಳೆ ಹಾಕುವುದನ್ನು ಕಡ್ಡಾಯಗೊಳಿಸಿದ್ದು ಮತ ಎಣಿಕೆಯ ವಿಳಂಬಕ್ಕೆ ಮತ್ತೊಂದು ಕಾರಣವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv