ಭೋಪಾಲ್: ಬಿಜೆಪಿ ಸರ್ಕಾರ ಅಬಕಾರಿ ನೀತಿಯಲ್ಲಿ ಮಧ್ಯಪ್ರದೇಶ ಅಮೂಲಾಗ್ರ ಬದಲಾವಣೆ ತಂದಿದೆ.
ಮಧ್ಯಪ್ರದೇಶದ ಎಣ್ಣೆ ಪ್ರಿಯರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ಮದ್ಯ ದರವನ್ನು ಶೇ.20ರಷ್ಟು ಇಳಿಸಿದೆ. ಅಲ್ಲದೇ, ಹೆಚ್ಚುವರಿ ಆದಾಯಗಳಿಸುವ ಉದ್ದೇಶದಿಂದ ಎಲ್ಲ ಏರ್‌ಪೋರ್ಟ್ ಮತ್ತು ಭೋಪಾಲ್, ಇಂದೋರ್, ಜಬಲ್ಪುರ್ ಹಾಗೂ ಗ್ವಾಲಿಯರ್‌ನ ಆಯ್ದ ಸೂಪರ್ ಮಾರ್ಕೆಟ್‍ಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿದೆ. ಇದನ್ನೂ ಓದಿ: ಅಮೆರಿಕದಿಂದಲೇ ಕಾನ್ಪುರದಲ್ಲಿ ನಡೆಯುತ್ತಿದ್ದ ಕಳ್ಳತನವನ್ನು ತಡೆದ ಮನೆಯವರು
1 ಕೋಟಿಗಿಂತ ಹೆಚ್ಚು ಆದಾಯ ಇರುವವರು ಹೋಂ ಬಾರ್ ಹೊಂದಲು ಅವಕಾಶ ನೀಡಿದೆ. ಇದಕ್ಕೆ ವಾರ್ಷಿಕ 50 ಸಾವಿರ ರೂಪಾಯಿ ಪಾವತಿ ಮಾಡಬೇಕಾಗುತ್ತದೆ. ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರದ ಈ ನಿರ್ಧಾರವನ್ನು ಕಾಂಗ್ರೆಸ್ ಟೀಕಿಸಿದೆ.
ತೈಲದ ಮೇಲಿನ ತೆರಿಗೆ ಇಳಿಸೋದು ಬಿಟ್ಟು ಮದ್ಯದ ದರ ಇಳಿಸುವ ಮೂಲಕ ಬಡವರನ್ನು ಲೂಟಿ ಮಾಡಲು ಈ ಸರ್ಕಾರ ಹೊರಟಿದೆ ಎಂದು ಕಿಡಿಕಾರಿದೆ.