ಬೆಂಗಳೂರು: ಸರ್ಕಾರ ಹೋದ ಮೇಲೆ ಜೆಡಿಎಸ್ ಪಕ್ಷ ಕಟ್ಟೋಕೆ ನಾಯಕರು ಅಸಡ್ಡೆ ತೋರುತ್ತಿದ್ದಾರಾ ಎಂಬ ಪ್ರಶ್ನೆಯೊಂದು ಎದ್ದಿದೆ. ಯಾಕಂದರೆ ಸರ್ಕಾರ ಹೋದ ಬಳಿಕ ಪಕ್ಷದಿಂದ ಪಕ್ಷ ಕಟ್ಟೋ ನಾಯಕರೇ ದೂರ ಉಳಿದಿದ್ದಾರೆ.
ಕುಮಾರಸ್ವಾಮಿ ಅವರ ನೀಲಿಕಣ್ಣಿನ ಹುಡುಗ ಮಧು ಬಂಗಾರಪ್ಪ ಸದ್ಯ ಪಕ್ಷದಿಂದ ದೂರವೇ ಉಳಿದಿರುವುದು ಈ ಪ್ರಶ್ನೆ ಹುಟ್ಟಿಕೊಳ್ಳಲು ಕಾರಣವಾಗಿದೆ. ದೋಸ್ತಿ ಸರ್ಕಾರ ಇದ್ದಾಗ ಜೆಡಿಎಸ್ ಕಾರ್ಯಾಧ್ಯಕ್ಷ ಆಗಿರುವ ಮಧು ಬಂಗಾರಪ್ಪ ಇದೀಗ ಪಕ್ಷ ಸಂಘಟನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
Advertisement
Advertisement
ಕಾರ್ಯಾಧ್ಯಕ್ಷ ಆದ ಬಳಿಕ ಮಧು ಬಂಗಾರಪ್ಪ ಅವರು ಪಕ್ಷದ ಕಚೇರಿಗೂ ಬಂದಿಲ್ಲ, ಸಭೆಯನ್ನೂ ಮಾಡಿಲ್ಲ. ಹೀಗಾಗಿ ಸರ್ಕಾರ ಹೋದ ಮೇಲೆ ಪಕ್ಷ ಕಟ್ಟೋ ಮನಸ್ಥಿತಿಯೇ ಕಳೆದುಕೊಂಡ್ರಾ ಅನ್ನೋ ಪ್ರಶ್ನೆ ಕಾಡುತ್ತಿದೆ. ಜೆಡಿಎಸ್ ವರಿಷ್ಠ ದೇವೇಗೌಡರು ಸರ್ಕಾರ ಹೋದ ಮೇಲೆ ನಿತ್ಯ ಸಭೆ ಮೇಲೆ ಸಭೆ ಮಾಡುತ್ತಿದ್ದು, ಇಳಿ ವಯಸ್ಸಿನಲ್ಲಿಯೂ ಪಕ್ಷ ಕಟ್ಟೋ ದೌಡ್ಡ ಗೌಡ್ರಿಗೆ ಪಕ್ಷದ ಕಾರ್ಯಾಧ್ಯಕ್ಷ ಸಾಥ್ ಕೊಡುತ್ತಿಲ್ಲ ಎಂಬ ಚರ್ಚೆ ನಡೆಯುತ್ತಿದೆ.
Advertisement
ಮಧು ಬಂಗಾರಪ್ಪ ಅವರು ಈ ಹಿಂದೆ ರಾಜ್ಯಾದ್ಯಂತ ಪಕ್ಷ ಸಂಘಟನೆ ಮಾಡುತ್ತೇನೆ ಎಂದು ಮಾತು ಕೊಟ್ಟಿದ್ದರು. ಆದರೆ ಇದೀಗ ಕೊಟ್ಟ ಮಾತೇ ಮರೆತು ಪಕ್ಷದಿಂದ ದೂರ ಉಳಿದಿದ್ದಾರೆ. ಅನೇಕ ನಾಯಕರು ಸರ್ಕಾರ ಹೋದ ಮೇಲೆ ಪಕ್ಷ ಸಂಘಟನೆಗೆ ನಿರಾಸಕ್ತಿ ತೋರಿಸುತ್ತಿದ್ದಾರೆ ಎಂಬ ಮಾತುಗಳು ಜೆಡಿಎಸ್ ವಲಯದಲ್ಲಿ ಕೇಳಿಬರುತ್ತಿದೆ.
Advertisement