ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಡಿದ್ದ ಪಠ್ಯ ಪರಿಷ್ಕರಣೆ ಕೈಬಿಡಲು ಕಾಂಗ್ರೆಸ್ ಸಚಿವ ಸಂಪುಟ (Congress Cabinet) ಒಪ್ಪಿಗೆ ನೀಡಿದೆ. ಈ ಮೂಲಕ RSS ಸ್ಥಾಪಕ ಹೆಡ್ಗೆವಾರ್, ವೀರ ಸಾವರ್ಕರ್ ಹಾಗೂ ಚಕ್ರವರ್ತಿ ಸೂಲಿಬೆಲೆ (Chakravarthy Sulibele) ಅವರ ಪಾಠಗಳಿಗೆ ಕೊಕ್ ಕೊಡಲಾಗಿದೆ.
Advertisement
ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ (Congress Government) ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಸಂಪುಟ ಸಭೆಯ ಬಳಿಕ ಪಠ್ಯ ಪರಿಷ್ಕರಣೆ (TextBook Revision) ವಿಚಾರವಾಗಿ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa), 6 ರಿಂದ 10ನೇ ತರಗತಿಯವರೆಗೆ ಸಮಾಜ ವಿಜ್ಞಾನ ಹಾಗೂ ಕನ್ನಡ ಪಠ್ಯದಲ್ಲಿ ಕೆಲವೊಂದು ಬದಲಾವಣೆ ಮಾಡಲು ನಿರ್ಧಾರ ಮಾಡಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನನ್ನ ಬದುಕಿನಲ್ಲಿ ಹೊಂದಾಣಿಕೆ ರಾಜಕಾರಣ ಮಾಡಿಲ್ಲ, ಮಾಡಲ್ಲ: ಸಿಂಹ ಆರೋಪಕ್ಕೆ ಬೊಮ್ಮಾಯಿ ತಿರುಗೇಟು
Advertisement
Advertisement
ಪಠ್ಯ ಪರಿಷ್ಕರಣೆಗೆ ಸಿಎಂ ಮಾರ್ಗದರ್ಶನ ಪಡೆಯಲಾಗಿದೆ. ಪ್ರಣಾಳಿಕೆಯಲ್ಲಿ ಪರಿಷ್ಕರಣೆ ಮಾಡೋದಾಗಿ ಹೇಳಿದ್ದೆವು. ಅದರಂತೆ ರಾಜಪ್ಪ ದಳವಾಯಿ, ರವೀಶ್ ಕುಮಾರ್, ಚಂದ್ರಶೇಖರ, ಅಶ್ವಥ್ ನಾರಾಯಣ, ರಾಜೇಶ್ ಅವರನ್ನೊಳಗೊಂಡ ಸಮಿತಿ ನೇತೃತ್ವದಲ್ಲಿ ಪಠ್ಯ ಪರಿಷ್ಕರಣೆ ಆಗಿದೆ. ಪಠ್ಯ ಈಗಾಗಲೇ ಮಕ್ಕಳ ಕೈಗೆ ತಲುಪಿರೋದ್ರಿಂದ ವಾಪಸ್ ತರಿಸಿದ್ರೆ, ಹೊಸ ಪುಸ್ತಕಗಳನ್ನ ಪ್ರಿಂಟ್ ಮಾಡಿಸಿದ್ರೆ ಹೆಚ್ಚಿನ ಹಣ ಖರ್ಚಾಗುತ್ತೆ. ಆದ್ದರಿಂದ ಪೂರಕ ಪಠ್ಯ ಕೊಡಲು ನಿರ್ಧಾರ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
Advertisement
6ನೇ ತರಗತಿಯಿಂದ 10ನೇ ತರಗತಿ ವರೆಗೆ ಕೆಲವು ಪಾಠಗಳನ್ನ ಈ ಸಾಲಿನಿಂದಲೇ ಪರಿಷ್ಕರಣೆ ಮಾಡಲು ನಿರ್ಧಾರ ಮಾಡಿದ್ದೇವೆ. ಪಠ್ಯ ಪುಸ್ತಕ ಈಗಾಗಲೇ ಹಂಚಿಕೆ ಆಗಿದೆ. ಆದ್ದರಿಂದ ಹೆಚ್ಚುವರಿ ಪುಸ್ತಕಗಳನ್ನ ಶಾಲೆಗಳಿಗೆ ತಲುಪಿಸುತ್ತೇವೆ. ಅದರಲ್ಲಿ ಕೆಲವು ಶಿಷ್ಟಾಚಾರ ಇರುತ್ತವೆ. ಜ್ಯೋತಿ ಬಾಫುಲೆ, ಅಂಬೇಡ್ಕರ್ ಹಾಗೂ ನೆಹರೂ ಪಾಠಗಳು ಸೇರ್ಪಡೆ ಆಗಿರುತ್ತೆ. ಹೆಡ್ಗೆವಾರ್, ಚಕ್ರವರ್ತಿ ಸೂಲಿಬೆಲೆ ಪಠ್ಯಗಳನ್ನ ಕೈಬಿಟ್ಟಿದ್ದೇವೆ. ಇದು ತಾತ್ಕಾಲಿಕ ಬದಲಾವಣೆ. ಮುಂದೆ ಸಮಿತಿ ಮಾಡಿ ಸಂಪೂರ್ಣ ಪರಿಷ್ಕರಣೆ ಮಾಡಲಾಗುತ್ತದೆ. ಇದನ್ನೂ ಓದಿ: ಜು.1 ರಿಂದ 10 ಕೆಜಿ ಉಚಿತ ಅಕ್ಕಿ ಕೊಡದಿದ್ರೆ ಹೋರಾಟ: ಸರ್ಕಾರದ ವಿರುದ್ಧ ಬೊಮ್ಮಾಯಿ ಗುಡುಗು
ಕನ್ನಡದಲ್ಲಿ 6 ರಿಂದ 10ನೇ ತರಗತಿ ಪಠ್ಯ ಪರಿಷ್ಕರಣೆ, ಸಮಾಜ ವಿಜ್ಞಾನದಲ್ಲಿ 6 ರಿಂದ 10ನೇ ತರಗತಿ ಪಠ್ಯಗಳನ್ನ ಪರಿಷ್ಕರಣೆ ಮಾಡಿದ್ದೇವೆ. ಸಾವಿತ್ರ ಫುಲೆ ಪಠ್ಯ ಸೇರ್ಪಡೆ ಮಾಡಿದ್ದೇವೆ. `ಮಗಳಿಗೆ ಬರೆದ ಪತ್ರ’ ಪುನರ್ ಸೇರ್ಪಡೆ ಮಾಡಿದ್ದೇವೆ. ಸೇತುಬಂಧ ಅಂತಾ ಸಪ್ಲಿಮೆಂಟರಿ ಕೊಡ್ತೀವಿ. 10 ಸಭೆ ಮಾಡಿ ಪಠ್ಯ ಪರಿಷ್ಕರಣೆ ಮಾಡಿದ್ದೇವೆ. ಶಿಕ್ಷಕರಿಗೂ ಏನು ಪಾಠ ಮಾಡಬೇಕು ಅಂತಾ ಹೇಳ್ತಿದ್ದೀವಿ. ಬಿಜೆಪಿ ಸರ್ಕಾರ ಮಾಡಿದ 75% ಪಠ್ಯಗಳನ್ನ ಪರಿಷ್ಕರಣೆ ಮಾಡಿದ್ದೇವೆ. 75 ಸಾವಿರ ಶಾಲೆಗಳಿಗೆ ಪೂರಕ ಪಠ್ಯಗಳನ್ನ ಕಳುಹಿಸುತ್ತೇವೆ. ಇದರ ಮುದ್ರಣಕ್ಕೆ 10 ರಿಂದ 12 ಲಕ್ಷ ರೂ. ಆಗಬಹುದು. ಮುಂದಿನ ವರ್ಷ ಸಮಿತಿ ಮಾಡಿ ಸಂಪೂರ್ಣ ಪರಿಷ್ಕರಣೆ ಮಾಡ್ತೀವಿ ಎಂದಿದ್ದಾರೆ.
ಯಾವ ತರಗತಿಯ ಯಾವ ಪಠ್ಯಕ್ಕೆ ಬ್ರೇಕ್?
* ಆರ್‌ಎಸ್‌ಎಸ್ ಸ್ಥಾಪಕ ಹೆಡ್ಗೆವಾರ್ ಅವರ ನಿಜವಾದ ಆದರ್ಶ ಪುರುಷ ಯಾರಾಗಬೇಕು- 10 ನೇ ತರಗತಿ.
* ಎಸ್.ಎಲ್. ಭೈರಪ್ಪ ಅವರು ಬರೆದಿರೋ `ನಾನು ಕಂಡಂತೆ ಬಿಜಿಎಲ್ ಸ್ವಾಮಿ’ ಪಾಠ – 9 ನೇ ತರಗತಿ.
* ಚಕ್ರವರ್ತಿ ಸೂಲಿಬೆಲೆ ರಚಿತ ತಾಯಿ ಭಾರತೀಯ ಅಮರಪುತ್ರರು ಪಾಠ- 10ನೇ ತರಗತಿ.
* ವೀರ ಸಾವರ್ಕರ್ ಕುರಿತ ಕಾಲವನ್ನು ಗೆದ್ದವರು ಪಾಠ- 8ನೇ ತರಗತಿ.
* ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯರ ಪಾಠ
* `ಬಹುಮಾನ’ ಪದ್ಯ ಮತ್ತು `ಬೊಮ್ಮನಹಳ್ಳಿ ಕಿಂದರ ಜೋಗಿ’ ಪದ್ಯ-9 ನೇ ತರಗತಿ.
* ಸ್ವದೇಶಿ ಸೂತ್ರದ ಸರಳ ಹಬ್ಬ ಪಾಠ-10 ನೇ ತರಗತಿ.
* ಮಂಜೇಶ್ವರ ಗೋವಿಂದ್ ಪೈ ರಚಿತ `ನಾನು ಪ್ರಾಸ ಬಿಟ್ಟ ಕಥೆ’ ಪಾಠ- 10 ನೇ ತರಗತಿ.
* `ಸೀಗಡಿ ಯಾಕೆ ಒಣಗಲಿಲ್ಲ’ ಮಕ್ಕಳ ಕಥೆ- ಪಂಜೆ ಮಂಗೇಶರಾಯರು ರಚಿತ ಪಠ್
* ಜಮ್ಮು ಕಾಶ್ಮೀರದ ರಾಜ ವಂಶ ಕಾರ್ಕೋಟ ರಾಜಮನೆ ತನ ಪಾಠ, ಅಹೋಮ್ ರಾಜವಂಶ ಪಾಠ ಕೈ ಬಿಟ್ಟಿರೋ ಸರ್ಕಾರ
ಯಾವುದು ಸೇರ್ಪಡೆ?
* ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿಯ ಪರಿಷ್ಕರಣೆಯಲ್ಲಿ ಇದ್ದ ನೆಹರೂ ತಮ್ಮ ಮಗಳಿಗೆ ಬರೆದಿದ್ದ ಪತ್ರದ ಕುರಿತ `ಮಗಳಿಗೆ ಬರೆದ ಪತ್ರ’ ಪಠ್ಯ ಸೇರ್ಪಡೆ.
* ಸಾವಿತ್ರಿಬಾ ಫುಲೆ ಅವರ ಪಠ್ಯ ಮರು ಸೇರ್ಪಡೆ.