ಭುವನೇಶ್ವರ: ಬಹುಭಾಷಾ ನಟ ಆರ್. ಮಾಧವನ್ ಅವರ ಪುತ್ರ ವೇದಾಂತ್ ರಾಷ್ಟ್ರ ಮಟ್ಟದ ಈಜು ಸ್ಪರ್ಧೆಯಲ್ಲಿ ಹೊಸ ದಾಖಲೆ ಬರೆದಿದ್ದಾರೆ. ವೇದಾಂತ್ 48ನೇ ಜೂನಿಯರ್ ರಾಷ್ಟ್ರೀಯ ಅಕ್ವಾಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಗೆದ್ದು, ಹೊಸ ಇತಿಹಾಸ ಸೃಷ್ಟಿಸಿದ್ದಾರೆ.
ಭಾನುವಾರ ಭುವನೇಶ್ವರದಲ್ಲಿ ನಡೆದ 1,500 ಮೀ. ಫ್ರೀಸ್ಟೈಲ್ ಈಜು ಸ್ಪರ್ಧೆಯಲ್ಲಿ ವೇದಾಂತ್ ಕೇವಲ 16:01.73 ನಿಮಿಷಗಳಲ್ಲಿ ಗುರಿ ತಲುಪಿ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಈ ಹಿಂದೆ ಈಜುಪಟು ಅದ್ವೈತ್ 2017ರಲ್ಲಿ 16:06.45 ನಿಮಿಷಗಳಲ್ಲಿ ಗುರಿ ತಲುಪಿ ದಾಖಲೆ ಬರೆದಿದ್ದರು. ಇದೀಗ ವೇದಾಂತ್ ಅದ್ವೈತ್ ಅವರ ದಾಖಲೆಯನ್ನು ಮುರಿದಿದ್ದಾರೆ. ಇದನ್ನೂ ಓದಿ: ಕೊನೆಗೂ ಮರಳಿ ಬಂತು ಪುನೀತ್ ರಾಜ್‌ಕುಮಾರ್ ಖಾತೆಗೆ ಬ್ಲೂ ಟಿಕ್
Advertisement
Never say never . ????????????❤️❤️???????? National Junior Record for 1500m freestyle broken. ❤️❤️????????@VedaantMadhavan pic.twitter.com/Vx6R2PDfwc
— Ranganathan Madhavan (@ActorMadhavan) July 17, 2022
Advertisement
ಈ ಸಂಭ್ರಮದ ವಿಚಾರವನ್ನು ಮಾಧವನ್ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡು ಖುಷಿ ವ್ಯಕ್ತಪಡಿಸಿದ್ದಾರೆ. ಟ್ವಿಟ್ಟರ್‌ನಲ್ಲಿ ಈ ದಾಖಲೆ ಬಗ್ಗೆ ತಿಳಿಸಿರುವ ಮಾಧವನ್, ಎಂದಿಗೂ ಆಗಲ್ಲ ಎಂದು ಯಾವತ್ತೂ ಹೇಳಬೇಡಿ. 1,500 ಮೀಟರ್ ಫ್ರೀಸ್ಟೈಲ್ ರಾಷ್ಟ್ರೀಯ ಜೂನಿಯರ್ ದಾಖಲೆ ಇದೀಗ ಮುರಿದಿದೆ ಎಂದು ಬರೆದಿದ್ದು, ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಸ್ವಾತಂತ್ರ್ಯದ ಅಮೃತ ಮೋತ್ಸವಕ್ಕೆ ‘ಹರ್ ಘರ್ ತಿರಂಗಾ’ ಅಭಿಯಾನ – ದೇಶಾದ್ಯಂತ 20 ಕೋಟಿ ಮನೆಗಳಲ್ಲಿ ಹಾರಲಿದೆ ತ್ರಿವರ್ಣ ಧ್ವಜ
Advertisement
ವೇದಾಂತ್ ಈ ಹಿಂದೆಯೂ ಹಲವಾರು ಈಜು ಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕಗಳನ್ನು ಬಾಚಿಕೊಂಡಿದ್ದಾರೆ. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ವೇದಾಂತ್, ಸ್ವತಃ ಹೆಸರು ಮಾಡಲು ಬಯಸುವುದಾಗಿ ತಿಳಿಸಿದ್ದರು. ನನಗೆ ನನ್ನ ತಂದೆಯ ನೆರಳಿನಲ್ಲಿ ಬದುಕಲು ಇಷ್ಟವಿಲ್ಲ. ನಾನಾಗಿಯೇ ಹೆಸರು ಮಾಡಲು ಬಯಸುತ್ತೇನೆ. ನಾನು ಕೇವಲ ಆರ್. ಮಾಧವನ್ ಅವರ ಮಗನಾಗಿರಲು ಬಯಸುವುದಿಲ್ಲ ಎಂದು ತಿಳಿಸಿದ್ದರು.