ನವದೆಹಲಿ: ಸೆಕ್ಯೂರಿಟಿ ಆಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (Securities and Exchange Board of India)ಗೆ ಮೊದಲ ಬಾರಿಗೆ ಭಾರತದ ಮಹಿಳೆಯೊಬ್ಬರು ಅಧ್ಯಕ್ಷರಾಗಿ chairperson ಆಯ್ಕೆಯಾಗಿದ್ದಾರೆ.
SEBIಗೆ ಮಾಧಬಿ ಪುರಿ ಬುಚ್ಚ (Madhabi Puri Buch) ಅವರು ಅಧ್ಯಕ್ಷರಾಗಿ ಸರ್ಕಾರ ನೇಮಕ ಮಾಡಿದೆ. ಅಧ್ಯಕ್ಷೆಯಾದ ಭಾರತದ ಮೊದಲ ಮಹಿಳೆ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹಾಲಿ ಅಧ್ಯಕ್ಷ ಅಜಯ್ ತ್ಯಾಗಿ ಅವರ ಅಧಿಕಾರವಧಿ ಪ್ರೆಬ್ರವರಿ 28ರಂದು ಮುಕ್ತಾಯವಾಗಿದ್ದು, ಮಾಧವಿ ನೂತನ ಸಾರಥಿಯಾಗಿದ್ದಾರೆ.
Advertisement
ಮಾಧಬಿ ಪುರಿ ಬುಚ್ಚ ಯಾರು?: ಮಾಧಬಿ ಪುರಿ ಬುಚ್ಚ ದೆಹಲಿಯಲ್ಲಿ ಶಿಕ್ಷಣವನ್ನು ಪಡೆಯುತ್ತಿದ್ದರು. ನಂತರ ಇವರು ಅಹಮದಾಬಾದ್ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನಲ್ಲಿ, ಮ್ಯಾನೇಜ್ಮೆಂಟ್ ಪದವಿಯನ್ನು ಪೂರ್ಣಗೊಳಿಸಿದರು. ನಂತರ ಇವರು ಹಲವು ಸಂಘ, ಸಂಸ್ಥೆ ಹಾಗೂ ರಾಷ್ಟ್ರೀಯ ಸ್ಟಾಕ್ ಎಕ್ಸ್ಚೇಂಜ್ ಸಮಿತಿಯಂತಹ ವಿವಿಧ ಸಮಿತಿಗಳಲ್ಲಿ ಸದಸ್ಯರಾಗಿ ಸೇವೆಸಲ್ಲಿಸಿದ್ದಾರೆ.ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಯ್ತು ಪುಡಿ ರೌಡಿಗಳ ಹಾವಳಿ
Advertisement
Advertisement
ಐಸಿಐಸಿ ಬ್ಯಾಂಕ್ ICICI Bankನಿಂದ ವೃತ್ತಿಜೀವನವನ್ನು ಪ್ರಾರಂಭಿಸಿದರು. ಇಲ್ಲಿ ಮ್ಯಾನೆಜಿಂಗ್ ಡೈರೆಕ್ಟರ್ ಆಗಿ 2009ರಿಂದ 2011ರವರೆಗೆ ಸೇವೆಸಲ್ಲಿಸಿದ್ದಾರೆ. ನಂತರ 2011ರಲ್ಲಿ ಗ್ರೇಟರ್ ಪೆಸಿಫಿಕ್ ಕ್ಯಾಪಿಟಲ್ ಐಐಗೆ ಸೇರಲು ಸಿಂಗಾಪುರಕ್ಕೆ ತೆರಳಿದರು. ಈ ವೇಳೆ ಅಗೋರಾ ಅಡ್ವೈಸರಿ ಪ್ರೈವೇಟ್ ಲಿಮಿಟೆಡ್ನ ಸಂಸ್ಥಾಪಕ-ನಿರ್ದೇಶಕರಾಗಿದ್ದರು. ನ್ಯೂ ಡೆವಲಪ್ಮೆಂಟ್ ಬ್ಯಾಂಕ್ನಲ್ಲಿ ಮೂರು ವರ್ಷಗಳ ಕಾಲ ಸಲ್ಲಿಸಿದ್ದಾರೆ. ಇದನ್ನೂ ಓದಿ: ರಷ್ಯಾ, ಉಕ್ರೇನ್ ಸಂಘರ್ಷ ಕೃಷಿ ರಫ್ತಿನ ಮೇಲೆ ಪರಿಣಾಮ ಬೀರುತ್ತೆ: ನಿರ್ಮಲಾ
Advertisement
ಮಾಧಬಿ ಪುರಿ ಬುಚ್ ಅವರು ಐಡಿಯಾ ಸೆಲ್ಯುಲರ್ ಲಿಮಿಟೆಡ್, ಝೆನ್ಸಾರ್ ಟೆಕ್ನಾಲಜೀಸ್ ಮತ್ತು ಮ್ಯಾಕ್ಸ್ ಹೆಲ್ತ್ಕೇರ್ನಂತಹ ಕಂಪನಿಗಳಲ್ಲಿ ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ ಅನುಭವವನ್ನು ಹೊಂದಿದ್ದಾರೆ. ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ನ ಸ್ಥಾಪಕ ಸಮಿತಿಯ ಸದಸ್ಯರಾಗಿದ್ದಾರೆ ಮತ್ತು ಬಾಂಬೆ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿಯ ಆಡಳಿತ ಸಮಿತಿ ಸದಸ್ಯರಾಗಿದ್ದಾರೆ.