– ನಾನು ಆತ್ಮಹತ್ಯೆಗೂ ಯತ್ನಿಸಿದ್ದೆ
– ಶನಿವಾರ ನನ್ನ ಖಾಸಗಿ ವಿಡಿಯೋ ಮಾಡಿದ್ದಕ್ಕೆ ದೂರು
ನಮ್ಮ ಅಪ್ಪಂಗೆ ಇಬ್ಬರೂ ಹೆಂಡ್ತಿರು, ತಾತನಿಗೂ ಇಬ್ಬರೂ ಹೆಂಡ್ತಿರು. ಹೀಗಾಗಿ ದೇವರೇ ನಮ್ಮನ್ನು ಜೋಡಿ ಮಾಡಿದ್ದಾನೆ. ಪ್ರಪಂಚದಲ್ಲಿ ಎರಡ್ಮೂರು ಮದುವೆ ಮಾಡಿಕೊಂಡವರು ಇಲ್ವಾ ಎಂದು ಹೇಳ್ತಿದ್ದ ಎಂದು ಮನು (Madenur Manu) ವಿರುದ್ಧ ಸಂತ್ರಸ್ತ ನಟಿ (Victim Actress) ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ:ಅವಳ ಹಿಂದೆ ಇಬ್ಬರು ಹೀರೋ, ಒಬ್ಬಳು ಲೇಡಿ ಡಾನ್ ಇದ್ದಾಳೆ – ರೇಪ್ ಕೇಸ್ ದಾಖಲಾದ ಬಳಿಕ ಮಡೆನೂರು ಮನು ಬಾಂಬ್


ಮೊದಲ ಬಾರಿಗೆ ಅತ್ಯಾಚಾರ ಆಗಿದ್ದಾಗ ಫುಲ್ ಶಾಕ್‌ನಲ್ಲಿದ್ದೆ, ಏನು ಮಾಡಬೇಕು ಎಂದು ನನಗೆ ತೋಚಲಿಲ್ಲ. ಆ ಸಮಯದಲ್ಲಿ 4 ಗೋಡೆ ಮಧ್ಯೆ ತಾಳಿ ಕಟ್ಟಿದ್ದ, 2 ವರ್ಷಗಳ ನಂತರ ಎಲ್ಲರ ಮುಂದೆ ಮದುವೆಯಾಗ್ತೀನಿ ಎಂದು ಹೇಳಿದ್ದಕ್ಕೆ ನಾನು ಮನುವನ್ನು ನಂಬಿಕೊಂಡು ಬಂದೆ. ನನಗೆ ಬೇರೆ ಅವರೊಂದಿಗೆ ಜೀವನವಿತ್ತು. ಅದನ್ನು ಕೂಡ ಮನು ಬಂದು ಅವರಿಗೆ ಹೇಳಿದ್ದಾರೆ. ನನಗೆ ಲೈಫ್ ಕೊಡ್ತೀನಿ ಅಂತ ಮನು ಮಾತು ಕೊಟ್ಟಿದ್ದ.



ನಮ್ಮಿಬ್ಬರ ಖಾಸಗಿ ವಿಡಿಯೋ ಇದೆಯೋ ಇಲ್ವೋ? ಡಿಲೀಟ್ ಆಗಿದ್ಯೋ ಇದರ ಬಗ್ಗೆ ನನಗೆ ಗೊತ್ತಿಲ್ಲ. ಇದನ್ನೇ ಇಟ್ಟುಕೊಂಡು ಎಲ್ಲರ ಬಳಿ ಎಲ್ಲಿ ನೆಗೆಟಿವ್ ಆಗಿ ಬಿಂಬಿಸುಸುತ್ತಾರೋ ಎಂದು ಭಯ ಆಯ್ತು. ಅದಕ್ಕೆ ನಾನು ದೂರು ನೀಡಿದ್ದೇನೆ.
ನನಗೆ ಬ್ಯಾಕ್ ಟು ಬ್ಯಾಕ್ ಆಬಾರ್ಷನ್ ಆಯ್ತು. ಅಬಾರ್ಷನ್ ಆದ್ಮೇಲೆ ನನ್ನ ಬಿಟ್ಟುಬಿಡು ಅಂದಿದ್ದ. ಇಷ್ಟೆಲ್ಲ ಆದಮೇಲೂ ಆತ ನನ್ನನ್ನು ತೊರೆಯುವ ಮಾತುಗಳನ್ನಾಡಿದ್ದಾನೆ. ನನಗೆ ಸಾಯೋವರೆಗೂ ಹೊಡೆದಿದ್ದಾನೆ. ನಾನು ಆತ್ಮಹತ್ಯೆಗೂ ಕೂಡ ಯತ್ನಿಸಿದ್ದೆ. ನಮ್ಮ ವಕೀಲರ ಜೊತೆ ಚರ್ಚಿಸಿ ದೂರು ಕೊಟ್ಟಿದ್ದೇನೆ. ನಾನು ತುಂಬ ಹಣವನ್ನ ಮನುಗೆ ಕೊಟ್ಟಿದ್ದೇನೆ. ಅವನಿಗಾಗಿ ನಾನು ಲಕ್ಷ ಲಕ್ಷ ಖರ್ಚು ಮಾಡಿದ್ದೇನೆ ಎಂದು ತಿಳಿಸಿದರು.
‘ಕಾಮಿಡಿ ಕಿಲಾಡಿಗಳು ಸೀಸನ್ 2’ ವಿನ್ನರ್ ಆಗಿದ್ದ ಮಡೆನೂರು ಮನು ಇದೀಗ ಸಿನಿಮಾಗಳಲ್ಲಿ ಹೀರೋ ಆಗಿ ಅಭಿನಯಿಸುತ್ತಿದ್ದಾರೆ. ತೆರೆಮೇಲೆ ಹೀರೋ ಆಗಿರುವ ಮಡೆನೂರು ಮನು ಬಗ್ಗೆ ರಿಯಲ್ ಲೈಫ್‌ನಲ್ಲಿ ಸಾಲು ಸಾಲು ಆರೋಪಗಳು ಕೇಳಿ ಬರುತ್ತಿವೆ. ಮನು ವಿರುದ್ಧ ಕಿರುತೆರೆ ನಟಿ ಅತ್ಯಾಚಾರ, ಗರ್ಭಪಾತ, ಕೊಲೆ ಬೆದರಿಕೆ ಆರೋಪವನ್ನ ಮಾಡಿದ್ದಾರೆ. ನಟಿಯ ದೂರಿನ ಅನುಸಾರ ಎಫ್‌ಐಆರ್ ದಾಖಲಿಸಿಕೊಂಡಿರುವ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಠಾಣೆಯ ಪೊಲೀಸರು ಮಡೆನೂರು ಮನುರನ್ನ ಬಂಧಿಸಿದ್ದಾರೆ.

