Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ವಿಶ್ವಮಟ್ಟದಲ್ಲಿ ಮುಜುಗರ – ಮುಳುಗಿತು Made In China ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ವಿಶ್ವಮಟ್ಟದಲ್ಲಿ ಮುಜುಗರ – ಮುಳುಗಿತು Made In China ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆ

Latest

ವಿಶ್ವಮಟ್ಟದಲ್ಲಿ ಮುಜುಗರ – ಮುಳುಗಿತು Made In China ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆ

Public TV
Last updated: September 27, 2024 8:07 pm
Public TV
Share
2 Min Read
Made in China Chinese nuclear submarine sinks while undergoing construction in Yangtze River 2
SHARE

ವಾಷಿಂಗ್ಟನ್‌: ನಿರ್ಮಾಣ ಹಂತದಲ್ಲಿದ್ದ ಚೀನಾದ (Made In China) ಪರಮಾಣು-ಚಾಲಿತ ಜಲಾಂತರ್ಗಾಮಿ ನೌಕೆ (Nuclear Submarine) ನೀರಿನಲ್ಲಿ ಮುಳುಗಡೆಯಾಗಿದೆ ಎಂದು ಅಮೆರಿಕದ ಮಾಧ್ಯಮ (US Media) ವರದಿ ತಿಳಿಸಿದೆ.

ಝೌ-ಕ್ಲಾಸ್‌ಗೆ ಸೇರಿದ ಜಲಾಂತರ್ಗಾಮಿ ನೌಕೆ ಈ ವರ್ಷದ ಮೇ ಮತ್ತು ಜೂನ್ ನಡುವೆ ಮುಳುಗಿದೆ. ಈ ನೌಕೆಯ ಉಪಗ್ರಹ ಚಿತ್ರ ಪ್ರಕಟವಾಗುವ ಮೂಲಕ ವಿಶ್ವಮಟ್ಟದಲ್ಲಿ ಚೀನಾಗೆ ದೊಡ್ಡ ಮುಜುಗರವಾಗಿದೆ.

ಕ್ರೇನ್‌ ಮತ್ತು ರಕ್ಷಣಾ ಸಾಧನಗಳನ್ನು ಬಳಸಿ ಈ ನೌಕೆಯನ್ನು ವುಚಾಂಗ್ ನೌಕಾ ನೆಲೆಯಲ್ಲಿ ಈಗ ದುರಸ್ತಿ ಮಾಡಲಾಗುತ್ತಿದೆ. ಜೂನ್ ವೇಳೆ ಜಲಾಂತರ್ಗಾಮಿ ಸಂಪೂರ್ಣವಾಗಿ ನೀರಿನ ಅಡಿಯಲ್ಲಿದ್ದ ಬಗ್ಗೆ ಉಪಗ್ರಹ ಚಿತ್ರ ತೋರಿಸಿದೆ. ಇದನ್ನೂ ಓದಿ: Hangor Submarines: ಪಾಕ್‌ಗೆ ಸುಧಾರಿತ ಜಲಾಂತರ್ಗಾಮಿ ನೌಕೆ ನೀಡಲು ಚೀನಾ ಗ್ರೀನ್‌ ಸಿಗ್ನಲ್‌!

Made in China Chinese nuclear submarine sinks while undergoing construction in Yangtze River 1

2022ರ ವೇಳೆಗೆ ಚೀನಾ ನೌಕಾಪಡೆಯು ಆರು ಪರಮಾಣು-ಚಾಲಿತ ಬ್ಯಾಲಿಸ್ಟಿಕ್ ಕ್ಷಿಪಣಿ ಜಲಾಂತರ್ಗಾಮಿ ನೌಕೆಗಳು, ಆರು ಪರಮಾಣು-ಚಾಲಿತ ದಾಳಿ ಮಾಡಬಲ್ಲ ಜಲಾಂತರ್ಗಾಮಿ ನೌಕೆಗಳು ಮತ್ತು 48 ಡೀಸೆಲ್-ಚಾಲಿತ ಜಲಾಂತರ್ಗಾಮಿ ನೌಕೆಗಳನ್ನು ಒಳಗೊಂಡಿತ್ತು. ಇದನ್ನೂ ಓದಿ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯರಾಗಿ ಭಾರತವನ್ನು ಸೇರಿಸಿ: ಫ್ರಾನ್ಸ್ ಅಧ್ಯಕ್ಷ ಒತ್ತಾಯ

ಅಮೆರಿಕ ಮಿಲಿಟರಿ ಅಂದಾಜಿಸಿದ ಪ್ರಕಾರ ಚೀನಾದ ನೌಕಾಪಡೆಯು 2025 ರ ವೇಳೆಗೆ 65 ಜಲಾಂತರ್ಗಾಮಿ ನೌಕೆ ಹೊಂದಿರಲಿದ್ದರೆ 2035 ರ ವೇಳೆಗೆ ಈ ಸಂಖ್ಯೆ 80ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ.

ಜಲಾಂತರ್ಗಾಮಿ ನೌಕೆ ಮುಳುಗಿರುವುದನ್ನು ಚೀನಾ ಸರ್ಕಾರ ಇನ್ನೂ ಅಧಿಕೃತವಾಗಿ ಒಪ್ಪಿಕೊಂಡಿಲ್ಲ. ವಾಷಿಂಗ್ಟನ್‌ನಲ್ಲಿರುವ ಚೀನೀ ರಾಯಭಾರ ಕಚೇರಿಯ ವಕ್ತಾರರು, ನೀವು ಹೇಳಿದ ವಿಷಯದ ಬಗ್ಗೆ ನಮಗೆ ಗೊತ್ತಿಲ್ಲ ಮತ್ತು ಪ್ರಸ್ತುತ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ.

Made in China Chinese nuclear submarine sinks while undergoing construction in Yangtze River 3

ಮುಳುಗಡೆಯಾಗುವ ವೇಳೆ ಜಲಾಂತರ್ಗಾಮಿ ನೌಕೆ ಪರಮಾಣು ಇಂಧನ ಚಾಲನೆಯಲ್ಲಿತ್ತಾ ಅಥವಾ ಅದರ ರಿಯಾಕ್ಟರ್ ಸಕ್ರಿಯವಾಗಿತ್ತಾ ಎಂಬ ವಿಚಾರ ಇನ್ನೂ ಅಸ್ಪಷ್ಟವಾಗಿ ಉಳಿದಿದೆ. ಅಮೆರಿಕ ಅಧಿಕಾರಿಗಳು ಯಾವುದೇ ವಿಕಿರಣ ಸೋರಿಕೆಗಳು ವರದಿಯಾಗಿಲ್ಲ ಎಂದು ದೃಢಪಡಿಸಿದ್ದರೂ ಸಂಭಾವ್ಯ ಪರಿಸರ ಹಾನಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ವಿಶ್ವದ ಸೂಪರ್‌ ಪವರ್‌ ದೇಶವಾಗುವ ನಿಟ್ಟಿನಲ್ಲಿ ಚೀನಾ ಎರಡು ದಶಕಗಳಲ್ಲಿ ರಕ್ಷಣಾ ವಲಯದಲ್ಲಿ (Defence sector) ಹೂಡಿಕೆ ಮಾಡಿದೆ. ಅದರಲ್ಲೂ ದಕ್ಷಿಣ ಚೀನಾ ಸಮುದ್ರದಲ್ಲಿ ಪ್ರಭಾವ ಹೆಚ್ಚಿಸಲು ನೌಕಾ ಸಾಮರ್ಥ್ಯಗಳ ಮೇಲೆ ಭಾರೀ ಹೂಡಿಕೆ ಮಾಡುತ್ತಿದೆ.

ರಕ್ಷಣಾ ಉತ್ಪಾದನೆಗಳನ್ನು ವಿದೇಶಗಳಿಗೆ ರಫ್ತು ಮಾಡಲು ಮುಂದಾಗುತ್ತಿದ್ದಾಗ ಈಗ ಮೇಡ್‌ ಇನ್‌ ಚೈನಾ ಜಲಾಂತರ್ಗಾಮಿ ನೌಕೆ ಮುಳುಗಿರುವುದು ಚೀನಾಗೆ ದೊಡ್ಡ ಹೊಡೆತ ನೀಡಿದೆ ಎಂಬ ವಿಶ್ಲೇಷಣೆ ಕೇಳಿ ಬಂದಿದೆ.

 

TAGGED:chinaMade in ChinaNuclear Submarineಚೀನಾಜಲಾಂತರ್ಗಾಮಿ ನೌಕೆಮೇಡ್ ಇನ್ ಚೈನಾ
Share This Article
Facebook Whatsapp Whatsapp Telegram

Cinema news

Vijay Sangeetha Sornalingam
ನಟಿ ಜೊತೆ ವಿವಾಹೇತರ ಸಂಬಂಧ ಆರೋಪ; ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ ನಟ ವಿಜಯ್‌ ಪತ್ನಿ
Cinema Latest Main Post South cinema
The Kerala Story 2
‘ದಿ ಕೇರಳ ಸ್ಟೋರಿ 2’ ಸಿನಿಮಾಗೆ ಬಿಗ್‌ ರಿಲೀಫ್‌ – ರಿಲೀಸ್‌ಗಿದ್ದ ತಡೆಯಾಜ್ಞೆ ತೆರವುಗೊಳಿಸಿದ ಹೈಕೋರ್ಟ್‌
Cinema Court Latest Main Post South cinema
Rashmika Mandanna Vijay Deverakonda Wedding
Rashmika Mandanna-Vijay Deverakonda Wedding: ಮದುವೆಯ ಫೋಟೊ ಹಂಚಿಕೊಂಡ ರಶ್ಮಿಕಾ ಮಂದಣ್ಣ
Cinema Latest Main Post South cinema
Rashmika Mandanna Vijay Devarakonda 1
ವಿರೋಶ್‌ ಕಲ್ಯಾಣಕ್ಕೆ ಸ್ಯಾಂಡಲ್‌ವುಡ್‌ನ 11 ಮಂದಿಗೆ ಆಹ್ವಾನ
Cinema Latest Sandalwood Top Stories

You Might Also Like

Iran
Latest

ಇರಾನ್ ಮೇಲೆ ಅಮೆರಿಕ -ಇಸ್ರೇಲ್ ಜಂಟಿ ದಾಳಿ; ಇಂಟಲಿಜೆನ್ಸ್‌ ಕಚೇರಿ ಸೇರಿ 30 ಗುರಿಗಳು ಟಾರ್ಗೆಟ್‌

Public TV
By Public TV
17 minutes ago
Bolivian Air Force
Latest

ಹೊಸ ಕರೆನ್ಸಿ ನೋಟು ಹೊತ್ತೊಯ್ಯುತ್ತಿದ್ದ ವಾಯುಪಡೆಯ ವಿಮಾನ ಪತನ – 15 ಮಂದಿ ಸಾವು

Public TV
By Public TV
1 hour ago
Haveri Ranebennuru hall ticket
Crime

ಫೀಸ್ ಕಟ್ಟಿಲ್ಲ ಅಂತ ಹಾಲ್ ಟಿಕೆಟ್ ನೀಡದ ಆಡಳಿತ ಮಂಡಳಿ – ಪುಕ್ಸಟ್ಟೆ ಕಲಿಸ್ತಾರಾ ಅಂತ ಶಿಕ್ಷಕಿ ಕಿರಿಕ್‌,  ವಿದ್ಯಾರ್ಥಿನಿ ಪರದಾಟ

Public TV
By Public TV
1 hour ago
heart attack
Belgaum

ಚಿಕ್ಕೋಡಿ | ದ್ವಿತೀಯ ಪಿಯು ಪರೀಕ್ಷೆಗೆ ಹೊರಟಿದ್ದ ವಿದ್ಯಾರ್ಥಿನಿ ಹೃದಯಾಘಾತದಿಂದ ಸಾವು

Public TV
By Public TV
2 hours ago
DK SURESH
Bengaluru City

ಹೊರೆ ಆಗುತ್ತೆ ಅಂದ್ರೆ ಗ್ಯಾರಂಟಿ ಕೊಡೋ ಮುಂಚೆನೇ ಚಿಂತನೆ ಮಾಡಬೇಕಾಗಿತ್ತು: ಡಿಕೆ ಸುರೇಶ್‌

Public TV
By Public TV
2 hours ago
Donald Trump pak pm
Latest

ಅಫ್ಘಾನ್‌-ಪಾಕ್‌ ಯುದ್ಧದಲ್ಲಿ ಅಮೆರಿಕ ಮಧ್ಯಪ್ರವೇಶ – ಷರೀಫ್‌, ಅಸಿಮ್ ಮುನೀರ್ ಶ್ರೇಷ್ಠ ನಾಯಕರು ಎಂದ ಟ್ರಂಪ್‌

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?