ಭೋಪಾಲ್: ಬಿಜೆಪಿ ಶಾಸಕ (BJP MLA) ಹಾಗೂ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ (Narottam Mishra) ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿ ಇದೀಗ ಫಜೀತಿಗೆ ಸಿಲುಕಿದ್ದಾರೆ.
ದಾಟಿಯಾದಲ್ಲಿ ಸಾರ್ವಜನಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಹೇಳಿಕೆಯೊಂದನ್ನು ನೀಡುವ ಮೂಲಕ ವಿವಾದಕ್ಕೀಡಾಗಿದ್ದಾರೆ. ಹಿಂದಿಯಲ್ಲಿ ಭಾಷಣ ಮಾಡುತ್ತಿದ್ದಾಗ ಹೇಮಮಾಲಿನಿ ಹೆಸರನ್ನು ಪ್ರಸ್ತಾಪಿಸಿದ್ದಾರೆ. ದಾಟಿಯಾದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಮಾಡಿದ್ದಲ್ಲದೇ ಹೇಮಮಾಲಿನಿಯೂ ಡ್ಯಾನ್ಸ್ ಮಾಡುವಷ್ಟು ಅಭಿವೃದ್ಧಿಯನ್ನು ಇಲ್ಲಿ ನಾನು ಮಾಡಿದ್ದೇನೆ ಎಂದು ಹೇಳಿದ್ದಾರೆ.
ಸದ್ಯ ಮಿಶ್ರಾ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಮೂಲಕ ಅವರ ಹೇಳಿಕೆ ಭಾರೀ ಚರ್ಚೆಯಾಗುತ್ತಿದೆ. ಇದನ್ನೂ ಓದಿ: ರಾಮಮಂದಿರ ಲೋಕಾರ್ಪಣೆಗೆ ಮೋದಿಗೆ ಮಾತ್ರ ಯಾಕೆ ಆಹ್ವಾನ – ಸಲ್ಮಾನ್ ಖುರ್ಷಿದ್ ಪ್ರಶ್ನೆ
ಈ ಸಂಬಂಧ ಜನತಾ ದಳದ ಎಕ್ಸ್ ಖಾತೆಯಲ್ಲಿ, ವ್ಯಕ್ತಿತ್ವ ಮತ್ತು ನೋಟವನ್ನು ಟೀಕಿಸುವ ನಾಚಿಕೆಯಿಲ್ಲದ ಬಿಜೆಪಿ ಸದಸ್ಯರ ನೈಜತೆಯನ್ನು ನೋಡಿ. ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ತಮ್ಮದೇ ಪಕ್ಷದ ಸಂಸದೆ ಹೇಮಾ ಮಾಲಿನಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಟೀಕಿಸಿದೆ.
ಮಧ್ಯಪ್ರದೇಶದ ದಾಟಿಯಾ ವಿಧಾನಸಭಾ ಕ್ಷೇತ್ರದಿಂದ (Datia Vidhanasabha Constituency) ನರೋತ್ತಮ್ ಮಿಶ್ರಾ 4 ನೇ ಬಾರಿ ಸ್ಪರ್ಧಿಸುತ್ತಿದ್ದಾರೆ. ಈ ಹಿಂದೆ 2008, 2023 ಹಾಗೂ 2018ರಲ್ಲಿ ಸ್ಪರ್ಧೆ ಮಾಡಿದ್ದರು.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]