ಮಂಡ್ಯ: ಜಿಲ್ಲೆಯ ಮದ್ದೂರು ಪಟ್ಟಣದಲ್ಲಿ ಇಂದು ಮಧ್ಯಾಹ್ನದ ವೇಳೆಯಲ್ಲಿ ಜನರಿಗೆ ಲಘು ಭೂಮಿ ಕಂಪಿಸಿದ ಅನುಭವದ ಜೊತೆ ಭಾರೀ ಶಬ್ದವು ಕೇಳಿ ಬಂದಿದೆ. ಇದರಿಂದ ಮದ್ದೂರು ಪಟ್ಟಣದ ಜನರು ಗಾಬರಿಗೊಂಡಿದ್ದಾರೆ.
ಮದ್ದೂರು ಪಟ್ಟಣದಲ್ಲಿ ಇಂದು ಮಧ್ಯಾಹ್ನ 2 ಗಂಟೆ 7 ನಿಮಿಷದ ವೇಳೆ 3 ಸೆಕೆಂಡ್‍ಗಳ ಕಾಲ ಭೂಮಿ ಕಂಪಿಸಿದ ಅನುಭವವಾಗಿದೆ. ಸುಮಾರು 20 ಸೆಕೆಂಡ್‍ಗಳ ಕಾಲ ಭಾರೀ ಶಬ್ದ ಕೇಳಿ ಬಂದಿದೆ. ಭೂ ಕಂಪನದಿಂದ ಮನೆ ಹಾಗೂ ಅಂಗಡಿಗಳ ಟೇಬಲ್, ಕುರ್ಚಿ ಸೇರಿದಂತೆ ಇತರೆ ವಸ್ತುಗಳು ತನ್ನ ಸ್ಥಳದಿಂದ ಜರಗಿದೆ. ಜೊತೆಗೆ ಭಾರೀ ಶಬ್ದ ಕೇಳಿ ಬಂದಿದ್ದರಿಂದ ಜನರು ಭಯ ಭೀತರಾಗಿದ್ದಾರೆ.
Advertisement
Advertisement
ಈ ಹಿಂದೆಯೂ ಸಹ ಮದ್ದೂರು ಪಣ್ಣದ ಹಲವೆಡೆ ಇದೇ ರೀತಿಯ ಅನುಭವವಾಗಿತ್ತು. ಇದೀಗ ಮತ್ತೆ ಅದೇ ರೀತಿ ಅನುಭವ ಗೋಚರವಾಗಿದೆ. ಮದ್ದೂರು ಪಟ್ಟಣದ ಸುತ್ತ ಮುತ್ತಲಿನ ಪ್ರದೇಶದಲ್ಲಿ ಗಣಿಗಾರಿಕೆ ನಡೆತುತ್ತಿರುವುದೇ ಭೂ ಕಂಪನಕ್ಕೆ ಕಾರಣ ಎಂದು ಜನರು ಹೇಳುತ್ತಿದ್ದಾರೆ.