ಮಂಡ್ಯ: ಬೆಂಗಳೂರು-ಮೈಸೂರು (Bengaluru-Mysuru) ದಶಪಥ ಹೆದ್ದಾರಿ ರಸ್ತೆ (Dashpath Highway Road) ಕಾಮಗಾರಿ ಅಂತಿಮ ಘಟ್ಟಕ್ಕೆ ತಲುಪಿದ್ದು, ನವೆಂಬರ್ ಅಂತ್ಯದ ವೇಳೆಗೆ ಮದ್ದೂರು ಬೈಪಾಸ್ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಸಂಸದ ಪ್ರತಾಪ್ ಸಿಂಹ (Pratap Simha)ಮಾಹಿತಿ ನೀಡಿದ್ದಾರೆ.
Advertisement
ಮದ್ದೂರು (Madduru) ಬೈಪಾಸ್ ಕೆಲಸ ಬಹುತೇಕ ಕಂಪ್ಲೀಟ್ ಆಗಿದೆ. ಎಕ್ಸ್‌ಪೆನ್ಷನ್ ಜಾಯಿಂಟ್ಸ್ ಕೆಲಸ ಮಾತ್ರ ಬಾಕಿ ಇದೆ. 10-15 ದಿನದಲ್ಲಿ ಆ ಕೆಲಸವು ಮುಗಿಯುವ ಭರವಸೆ ಇದೆ. ಮಂಡ್ಯ, ಶ್ರೀರಂಗಪಟ್ಟಣ ಬೈಪಾಸ್ ಕೂಡ ಡಿಸೆಂಬರ್ ವೇಳೆಗೆ ಕಂಪ್ಲೀಟ್ ಆಗಲಿದೆ. ಹೊಸ ವರ್ಷದಿಂದ ಸರಾಗವಾಗಿ ಬೆಂಗಳೂರು-ಮೈಸೂರಿಗೆ ಸಂಚಾರ ಮಾಡಬಹುದು ಎಂದಿದ್ದಾರೆ. ಇದನ್ನೂ ಓದಿ: ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಸಾವು – ಬಸ್ ಚಾಲಕನಿಗೆ ಸಾರ್ವಜನಿಕರಿಂದ ಥಳಿತ
Advertisement
Advertisement
ಈ ಕಾಮಗಾರಿ ಮುಕ್ತಾಯಗೊಂಡರೆ 75 ರಿಂದ 80 ನಿಮಿಷಗಳಲ್ಲಿ ಬೆಂಗಳೂರು-ಮೈಸೂರು ತಲುಪಬಹುದು. ಕೆಲವೆಡೆ ಕೆನಾಲ್, ಅಂಡರ್ ಪಾಸ್‍ನ ಸಣ್ಣ ಪುಟ್ಟ ಕೆಲಸವಿದೆ, ಆ ಕೆಲಸದ ಬಳಿ ಟ್ರಾಫಿಕ್ ಡೈವರ್ಟ್ ಮಾಡಿ, ಮುಕ್ತ ಸಂಚಾರಕ್ಕೆ ಅವಕಾಶ ನೀಡುತ್ತೇವೆ ಎಂದು ಸಂಸದ ಪ್ರತಾಪ್ ಸಿಂಹ ಮದ್ದೂರು ಬೈಪಾಸ್ ಮೇಲೆ ನಿಂತು ಫೇಸ್‍ಬುಕ್ ಲೈವ್ ನಲ್ಲಿ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಚಿಕ್ಕಮಗಳೂರು, ಉಡುಪಿಯಲ್ಲಿ ಡೇಂಜರ್ ಸೇತುವೆ – ನಿರ್ವಹಣೆ ಇಲ್ಲದೇ ಬೀಳುವ ಸ್ಥಿತಿ