ಬೆಂಗಳೂರು: ಜಾತಿಗಣತಿಯಲ್ಲಿ ಗೊಂದಲ ಇದೆ. ಪರಿಶಿಷ್ಟ ಜಾತಿಯಲ್ಲಿ 101 ಜಾತಿಗಳು ಇದ್ವು. ಆದರೆ ಈಗ 180 ಜಾತಿ ಸೇರಿಸಿದ್ದಾರೆ ಎಂದು ವರದಿ ಆಗಿದೆ ಎಂದು ಚಿತ್ರದುರ್ಗ (Chitradurga) ಪೀಠದ ಮಾದಾರ ಚೆನ್ನಯ್ಯ ಸ್ವಾಮೀಜಿ (Madara Chennaiah Swamiji) ಹೇಳಿದರು.
ಬೆಂಗಳೂರಿನಲ್ಲಿ (Bengaluru) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಾಗಾದರೆ ಜಾತಿಗಣತಿಯಲ್ಲಿ ಸೇರ್ಪಡೆಗೊಂಡ ಜಾತಿಗಳು ಯಾವುದು, ಯಾರು ಅವರು? ಈ ಗೊಂದಲಗಳನ್ನ ಸರ್ಕಾರ ಸರಿಪಡಿಸಬೇಕು. ಜಾತಿಗಣತಿ ವರದಿಯನ್ನ (Caste Census Report) ಸರ್ಕಾರ ಪರಿಶೀಲನೆ ಮಾಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ರೀಲ್ಸ್ ಕೇಸ್ – ರಜತ್ ಜೈಲಿಗೆ, ವಿನಯ್‌ಗೆ 500 ರೂ. ದಂಡ
ಕೆಲ ಸಮುದಾಯದವರು ಪರ-ವಿರೋಧ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಯಾರಿಗೂ ಅನ್ಯಾಯ ಆಗದಂತೆ ಸಾಮಾಜಿಕ ನ್ಯಾಯ ಸಿಗಬೇಕು. ಇನ್ನೂ ಎಡ-ಬಲದ ಬಗ್ಗೆ ಕೆಲ ಜಿಲ್ಲೆಗಳಲ್ಲಿ ಗೊಂದಲ ಇದೆ. ಆದಿ ಕರ್ನಾಟಕ ಅಂತಾ ಕೆಲ ಜಿಲ್ಲೆಗಳಲ್ಲಿ ಇಬ್ಬರು ಬರೆಸಿದ್ದಾರೆ ಎಂದರು. ಇದನ್ನೂ ಓದಿ: ಮುಂಬೈ ಬಳಿ 9.85 ಕೋಟಿಗೆ ಭೂಮಿ ಖರೀದಿಸಿದ ಅಳಿಯ ಕೆಎಲ್ ರಾಹುಲ್, ಮಾವ ಸುನೀಲ್ ಶೆಟ್ಟಿ
ಸಿದ್ದರಾಮಯ್ಯ ಸರ್ಕಾರ ನಾಗಮೋಹನ್ ದಾಸ್ ವರದಿ ಸಲ್ಲಿಕೆ ವೇಳೆ ಗೊಂದಲ ಪರಿಹರಿಸಿ, ಒಳ ಮೀಸಲಾತಿ ಕಲ್ಪಿಸುವುದಾಗಿ ಹೇಳಿದೆ. 2 ತಿಂಗಳ ಕಾಲಾವಕಾಶ ಕೇಳಿದೆ. ಎಡ-ಬಲ ಸಹೋದರ ಸಮಾನರು, ಹಾಗಾಗಿ ಮೀಸಲಾತಿ ಹಂಚಿಕೆ ವೇಳೆ ಗೊಂದಲ ಬೇಡ ಎಂದು ಮನವಿ ಮಾಡಿದರು.