ಬೆಂಗಳೂರು: ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ (Madal Virupakshappa) ಗೆ ನೀಡಿರುವ ನಿರೀಕ್ಷಣಾ ಜಾಮೀನು ರದ್ದು ಮಾಡುವಂತೆ ಹೈಕೋರ್ಟ್ (HighCourt) ಗೆ ಲೋಕಾಯುಕ್ತ ಆಕ್ಷೇಪಣೆ ಸಲ್ಲಿಸಿ ವಾದ ಮಂಡನೆ ಮಾಡಿತು.
ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ರೂ ಕೂಡ ತನಿಖೆಗೆ ಸಹಕಾರವನ್ನು ನೀಡುತ್ತಿಲ್ಲ. ದಿನಾ ವಿಚಾರಣೆಗೆ ಬರುತ್ತಾರೆ, ತನಿಖಾಧಿಕಾರಿಗೆ ಯಾವುದೇ ಹೇಳಿಕೆ ನೀಡುತ್ತಾ ಇಲ್ಲ. ಹೀಗಾಗಿ ನಿರೀಕ್ಷಣಾ ಜಾಮೀನು ರದ್ದು ಮಾಡಿ ಎಂದು ವಾದ ಮಂಡಿಸಿದ್ರು. ಇದನ್ನೂ ಓದಿ: ಶಾಸಕ ಮಾಡಾಳ್ ಜಾಮೀನಿಗೆ ಆಕ್ಷೇಪ – ತುರ್ತು ವಿಚಾರಣೆಗೆ ಸುಪ್ರೀಂ ನಕಾರ
ಇತ್ತ ವಿರೂಪಾಕ್ಷಪ್ಪ ತನಿಖೆಗೆ ಸಹಕಾರ ನೀಡುತ್ತಾ ಇದ್ದಾರೆ, ಪ್ರತಿದಿನ 6 ಗಂಟೆಗಳ ಕಾಲ ವಿಚಾರಣೆ ಎದುರಿಸ್ತಾ ಇದ್ದಾರೆ ಎಂದು ವಿರೂಪಾಕ್ಷಪ್ಪ ಪರ ವಾದ ಮಂಡನೆ ಮಾಡಿದ್ರು. ಎರಡೂ ಕಡೆ ವಾದ – ಪ್ರತಿವಾದ ಆಲಿಸಿದ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ಕಾಯ್ದಿರಿಸಿದೆ.