ಗದಗ: ಹುಚ್ಚು ಹಿಡಿದ ಮಂಗವೊಂದು 6ಕ್ಕೂ ಹೆಚ್ಚು ಜನರಿಗೆ ಕಚ್ಚಿ ಗಾಯಗೊಳಿಸಿದ ಘಟನೆ ರೋಣ ತಾಲೂಕಿನ ಯಾವಗಲ್ ಗ್ರಾಮದಲ್ಲಿ ನಡೆದಿದೆ.
ಮಕ್ಕಳು, ವೃದ್ದರಿಗೆ ಮನಬಂದಂತೆ ಮಂಗ ಕಚ್ಚಿದ್ದು ಹುಚ್ಚು ಹಿಡಿದಂತೆ ವರ್ತಿಸುತ್ತಿದೆ. ಯಾವಗಲ್ ಪ್ರಾಥಮಿಕ ಶಾಲೆಗೆ ನುಗ್ಗಿ ಮಕ್ಕಳನ್ನ ಸಹ ಮಂಗ ಕಚ್ಚಿದೆ.
ಕಳೆದ ಎರಡು ದಿನಗಳಿಂದ ಮಂಗನ ದಾಳಿಗೆ ಹತ್ತಕ್ಕೂ ಹೆಚ್ಚು ಜನರಿಗೆ ಗಾಯವಾಗಿದ್ದು ಮಂಗನ ದಾಳಿಗೆ ಗ್ರಾಮಸ್ಥರು ತತ್ತರಿಸಿದ್ದಾರೆ. ದಾಳಿ ವೇಳೆ ಓಡಿಹೋಗುವ ಸಂದರ್ಭದಲ್ಲಿ ಬಿದ್ದು ಮೂವರಿಗೆ ಕೈ ಮುರಿದಿದೆ.
ಕಿರಣ್ ಗಾಳಿ, ನೀಲವ್ವ ಜಾಲಿಹಾಳ, ರೇಣುಕಾ, ಗಿರಿಜಾ, ಉಮೇಶ್, ಪಾರವ್ವ ಎಂಬುವರಿಗೆ ಗಾಯವಾಗಿದ್ದು ಗಾಯಾಳುಗಳನ್ನ ನರಗುಂದ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.