ಕನ್ನಡದ `ನೋಡಿ ಸ್ವಾಮಿ ನಾವಿರೋದೆ ಹೀಗೆ’, `ಸಾರ್ವಜನಿಕರಿಗೆ ಸುವರ್ಣಾವಕಾಶ’ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದ ನಟಿ ಧನ್ಯಾ ಬಾಲಕೃಷ್ಣ (Dhanya Balakrishna) ಸದ್ದಿಲ್ಲದೇ ತಮಿಳು ನಿರ್ದೇಶಕ ಬಾಲಾಜಿ ಮೋಹನ್ (Balaji Mohan) ಜೊತೆ ಸಪ್ತಪದಿ ತುಳಿದಿದ್ದಾರೆ. ಈ ಕುರಿತು ಇದೀಗ ಮಾಹಿತಿ ಹೊರಬಿದ್ದಿದೆ.
Advertisement
ನಟಿ ಧನ್ಯಾ ಮೂಲತಃ ಬೆಂಗಳೂರಿನವರಾಗಿದ್ದು, ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಕನ್ನಡದ ಚಿತ್ರಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇನ್ನೂ ಈ ವರ್ಷದ ಆರಂಭದಲ್ಲೇ ತಮಿಳಿನ ʻಮಾರಿʼ, ʻಮಾರಿ 2ʼ ಖ್ಯಾತಿಯ ನಿರ್ದೇಶಕ ಬಾಲಾಜಿ ಜೊತೆ ಧನ್ಯಾ ಮದುವೆ ಆಗಿದೆ. ಈ ಬಗ್ಗೆ ಅಧಿಕೃತವಾಗಿ ಬಾಲಾಜಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: `ಪೊನ್ನಿಯಿನ್ ಸೆಲ್ವನ್’ ಪಾರ್ಟ್ 2ಗೆ ಡೇಟ್ ಫಿಕ್ಸ್
Advertisement
Advertisement
ಇನ್ನೂ 2023ರಲ್ಲಿ ಅರುಣಾ (Aruna) ಎಂಬುವವರ ಜೊತೆ ಬಾಲಾಜಿ ಮದುವೆ ಆಗಿತ್ತು. ಆದರೆ ಮದುವೆ ಆಗಿ ಒಂದೇ ವರ್ಷಕ್ಕೆ ಈ ಸಂಬಂಧ ಮುರಿದು ಬಿತ್ತು. ಇಬ್ಬರು ಡಿವೋರ್ಸ್ ಪಡೆದರು. ಜನವರಿ 23ರಂದು ಈ ವರ್ಷ ಧನ್ಯಾ ಜೊತೆ ಬಾಲಾಜಿ ಎರಡನೇ ಮದುವೆ ಆಗಿದ್ದಾರೆ. ಇಲ್ಲಿಯವರೆಗೆ ರಿವೀಲ್ ಆಗದ ಈ ಮದುವೆ ಸುದ್ದಿ ಚರ್ಚೆಗೆ ಬಂದಿರುವುದಕ್ಕೆ ಕಾರಣ ನಟಿ ಕಲ್ಪಿಕಾ ಗಣೇಶ್.
Advertisement
ಇತ್ತೀಚೆಗೆ ನಟಿ ಕಲ್ಪಿಕಾ (Kalpika Ganesh) ತಮ್ಮ ಯೂಟ್ಯೂಬ್ನಲ್ಲಿ ಧನ್ಯಾ ಮತ್ತು ಬಾಲಾಜಿ ಮದುವೆ ಆಗಿರುವ ಬಗ್ಗೆ ಮಾತನಾಡಿದ್ದರು. ಬಳಿಕ ಈ ಸುದ್ದಿ ಎಲ್ಲೆಡೆ ಚರ್ಚೆಗೆ ಗ್ರಾಸವಾಯಿತು. ಇದನ್ನ ಗಂಭೀರವಾಗಿ ಪರಿಗಣಿಸಿ, ಬಾಲಾಜಿ ಮೋಹನ್ ಕೋರ್ಟ್ ಮೆಟ್ಟಿಲೇರಿದ್ದಾರೆ. ನಟಿ ಕಲ್ಪಿಕಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಈ ಬಗ್ಗೆ ಅರ್ಜಿಯನ್ನು ವಿಚಾರಣೆಗೊಳಪಡಿಸಿದ ನ್ಯಾಯಾಧೀಶ ಸೆಂಥಿಲ್ ಕುಮಾರ್ ರಾಮಮೂರ್ತಿ, ನಿರ್ದೇಶಕ ಬಾಲಾಜಿ ವೈಯಕ್ತಿಕ ಜೀವನದ ಬಗ್ಗೆ ಕಾಮೆಂಟ್ ಮಾಡುವುದನ್ನು ಕಲ್ಪಿಕಾ ನಿಲ್ಲಿಸಬೇಕು ಎಂದು ಆದೇಶ ನೀಡಿದ್ದಾರೆ. ಈ ಜೊತೆಗೆ ಈ ಪ್ರಕರಣದ ತೀರ್ಪನ್ನು 2023ರ ಜನವರಿ 23ಕ್ಕೆ ನೀಡುವುದಾಗಿ ತಿಳಿಸಿದ್ದಾರೆ.