ಬಿಗ್‌ಬಾಸ್ ಕನ್ನಡ (Bigg Boss Kannada) ಸೀಸನ್ 12ರ ಈ ವಾರದಲ್ಲಿ ಸ್ಪರ್ಧಿಗಳ ಕುಟುಂಬಸ್ಥರು ಮನೆಗೆ ಆಗಮಿಸುತ್ತಿದ್ದಾರೆ. ಅದರಂತೆ ಇದೀಗ ಮಾಳು ಮಡದಿ, ಇಬ್ಬರು ಮಕ್ಕಳು ಮನೆಗೆ ಬಂದಿದ್ದಾರೆ.
ಮಾಳು ಮಡದಿ ಹಾಗೂ ಇಬ್ಬರು ಮಕ್ಕಳು ಎಂಟ್ರಿ ಕೊಡುತ್ತಿದ್ದಂತೆ ಬಿಗ್‌ಬಾಸ್ ಹೌಸ್‌ನಲ್ಲಿ ಚಿಣ್ಣರ ಕಲರವ ಮನೆಮಾಡಿದೆ. ಅಪ್ಪನಂತೆ ಹೇರ್‌ಕಟ್ ಮಾಡಿಸಿಕೊಂಡು ಬಂದಿದ್ದ ಮಕ್ಕಳು, ಮಾಳು ಅನ್ನು ನೋಡುತ್ತಲೇ ಖುಷಿಪಟ್ಟಿದ್ದಾರೆ. ಜೊತೆಗೆ ಮನೆಯಲ್ಲಿಯೂ ಮಕ್ಕಳು ಸಖತ್ ಎಂಜಾಯ್ ಮಾಡಿದ್ದಾರೆ. ಸ್ವೀಮಿಂಗ್ ಪೂಲ್‌ನಲ್ಲಿ ಅಪ್ಪನ ಜೊತೆ ಆಡಿ ಮೋಜು ಮಸ್ತಿ ಮಾಡಿದ್ದಾರೆ. ಇದನ್ನೂ ಓದಿ: ಕಾವ್ಯ ಮನೆಯವರಿಂದ ನಿಯಮ ಉಲ್ಲಂಘನೆ; ಹೊರ ಕಳಿಸಿದ್ರಾ ಬಿಗ್ ಬಾಸ್? – ಕಣ್ಣೀರಿಟ್ಟ ಕಾವ್ಯ
ಮನೆಯಲ್ಲಿ ಮಾಳು ಫ್ಯಾಮಿಲಿ
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9:30 | ಶನಿ-ಭಾನು ರಾತ್ರಿ 9#BiggBossKannada12 #BBK12 #ColorsKannada #AdeBeruHosaChiguru #ಕಲರ್‌ಫುಲ್‌ಕತೆ #colorfulstory #KicchaSudeep #ExpectTheUnexpected #CKPromo pic.twitter.com/oRFpDZzDpx
— Colors Kannada (@ColorsKannada) December 26, 2025
ಇನ್ನೂ ಎಲ್ಲ ಸ್ಪರ್ಧಿಗಳು ಮಕ್ಕಳೊಂದಿಗೆ ಆಟವಾಡುತ್ತಾ, ತುಂಟಾಟ ಮಾಡಿ ಕಾಲಕಳೆದಿದ್ದಾರೆ. ಇತ್ತ ಮಾಳು ಪತ್ನಿ ಮೇಘಾರನ್ನು ಕಂಡು ಭಾವುಕರಾಗಿದ್ದಾರೆ. ಜೊತೆಗೆ ಹೆಂಡತಿಯೊಂದಿಗೆ ʻಹಿತ್ತಲಕ ಕರೀಬ್ಯಾಡ ಮಾವʼ ಹಾಡನ್ನು ಹಾಡುತ್ತಾ ಸಂಗೀತದಲ್ಲಿ ತೇಲಿ ಹೋಗಿದ್ದಾರೆ.
ಈಗಾಗಲೇ ಬಿಗ್‌ಬಾಸ್ ಮನೆಗೆ ರಾಷಿಕಾ ತಮ್ಮ ಮತ್ತು ಅಮ್ಮ, ಸೂರಜ್ ಅಕ್ಕ ಮತ್ತು ತಾಯಿ, ಅಶ್ವಿನಿ ಅಮ್ಮ ಮತ್ತು ಮಗ, ಧನುಷ್ ಹೆಂಡತಿ ಮತ್ತು ಅಮ್ಮ, ರಕ್ಷಿತಾ ತಾಯಿ ಮತ್ತು ಅಕ್ಕ, ಕಾವ್ಯ ತಮ್ಮ ಮತ್ತು ಅಮ್ಮ, ಗಿಲ್ಲಿ ಅಪ್ಪ ಮತ್ತು ಅಮ್ಮ, ಧ್ರುವಂತ್ ಅಣ್ಣ ಮತ್ತು ಅತ್ತಿಗೆ ಬಂದು ಹೋಗಿದ್ದಾರೆ. ಇನ್ನೂ ರಘು, ಸ್ಪಂದನಾ ಅವರ ಮನೆಯವರು ಬರಬೇಕಿದೆ. ಇದನ್ನೂ ಓದಿ: ಗಿಲ್ಲಿಯನ್ನ ಮಾತ್ರ ಬಿಟ್ಕೊಡ್ಬೇಡ: ಕಾವ್ಯಗೆ ಬುದ್ದಿವಾದ ಹೇಳಿದ ತಾಯಿ

