DistrictsHassanKarnatakaLatestMain Post

ನನಗೆ ಮತ ಹಾಕದಂತೆ ಜೆಡಿಎಸ್ ಮುಖಂಡರು ಬೆದರಿಕೆ ಹಾಕ್ತಿದ್ದಾರೆ: ಎಂ.ಶಂಕರ್ ಆರೋಪ

ಹಾಸನ: ಜೆಡಿಎಸ್ ನಾಯಕರು ನಮಗೆ ಮತ ಹಾಕದಂತೆ ಗ್ರಾ.ಪಂ. ಸದಸ್ಯರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಎಂಎಲ್‍ಸಿ ಅಭ್ಯರ್ಥಿ ಎಂ.ಶಂಕರ್ ಗಂಭೀರ ಆರೋಪ ಮಾಡಿದರು.

ಹಾಸನದಲ್ಲಿ ಮಾತನಾಡಿದ ಅವರು, ಜೆಡಿಎಸ್‍ನವರು ನಮಗೆ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಗ್ರಾ.ಪಂ. ಸದಸ್ಯರು ಹೇಳುತ್ತಿದ್ದಾರೆ. ನಮಗೆ ಮತ ಹಾಕಲು ಆಸಕ್ತಿಯಿದ್ದರೂ, ಜೆಡಿಎಸ್ ಮುಖಂಡರಿಂದ ಕಿರುಕುಳ ಇದೆ ಎನ್ನುತ್ತಿದ್ದಾರೆ. ನೀವೆಲ್ಲ ದಳಕ್ಕೆ ಮತಹಾಕಬೇಕು. ನಾವು ಅದನ್ನು ನೋಡುತ್ತಿರುತ್ತೇವೆ ಎಂದು ಜೆಡಿಎಸ್ ಮುಖಂಡರು ಹೆದರಿಸುತ್ತಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಪುನೀತ್ ರಾಜ್ ಕುಮಾರ್ ಕುಟುಂಬಕ್ಕೆ ಆದಿಚುಂಚನಗಿರಿ ಶ್ರೀಗಳಿಂದ ಸಾಂತ್ವನ


ಮತಹಾಕುವಾಗ ನಮ್ಮವರು ಅಲ್ಲೇ ತಿರುಗಾಡುತ್ತಿರುತ್ತಾರೆ ಎಂದು ಒತ್ತಾಯ ಮಾಡುತ್ತಿದ್ದಾರೆ. ಮಹಿಳಾ ಮತದಾರರ ಮನೆಗೂ ಬಂದು ತಾಕೀತು ಮಾಡುತ್ತಿದ್ದಾರೆ. ಹೀಗಾಗಿ ನನಗೆ ಮತ ಹಾಕಲು ಅವರೆಲ್ಲ ಈಗ ಹೆದರುತ್ತಿದ್ದಾರೆ. ಜೆಡಿಎಸ್‍ನವರು ತೀರ ಬೆದರಿಕೆ ಸಂದರ್ಭ ಮುಂದುವರಿಸಿದರೆ ದೂರು ಕೊಡಿಸುತ್ತೇವೆ ಎಂದು ಆಕ್ರೋಶ ಹೊರಹಾಕಿದರು.

Leave a Reply

Your email address will not be published.

Back to top button